ಅಫ್ಘಾನಿಸ್ತಾನದಲ್ಲಿ ವಿಮಾನದಿಂದ ಬಿದ್ದಿದ್ದೇ ಫ್ಯಾಷನ್ ಸ್ಫೂರ್ತಿ? ಕ್ರೌರ್ಯಕ್ಕೊಂದು ಮಿತಿ ಬೇಡವೇ?

ತಾಲಿಬಾನ್​ ಆಕ್ರಮಣದಿಂದ ನೊಂದ ಕಾಬೂಲ್​ ಜನರು ತಮ್ಮ ರಕ್ಷಣೆಗಾಗಿ ಸಿ -17 ವಿಮಾನದಿಂದ ಕೆಳಗೆ ಬೀಳುವ ದುರಂತದ ಘಟನೆ ಬೆಳಕಿಗೆ ಬಂತು. ಇದಾದ ಕೆಲವೇ ದಿನಗಳಲ್ಲಿ ಟೀ ಶರ್ಟ್​ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ

ಟೀ ಶರ್ಟ್ಸ್​

ಟೀ ಶರ್ಟ್ಸ್​

 • Share this:
  ಕಾಬೂಲ್​ ವಶ ಪಡಿಸಿಕೊಂಡು ತಾಲಿಬಾನ್​ಗಳು ಅಟ್ಟಹಾಸ ಮೆರೆದರು. ಈ ಸಮಯದಲ್ಲಿ ಜನರು ತಾಲಿಬಾನ್​ಗೆ ಹೆದರಿ ದೇಶ ಬಿಡಲು ಮುಂದಾದರು. ಸಿಕ್ಕ ಸಿಕ್ಕ ವಾಹನ ಏರಿಕೊಂಡು ಬೇರೆ ದೇಶಗಳಿಗೆ ಪಾಲಾಯನ ಮಾಡಿದರು. ವಿಮಾನ ಹೊರಗೆ ಕುಳಿಕೊಂಡು ತಾಯ್ನಾಡಿನಿಂದ ವಿದೇಶಗಳಿಗೆ ತೆರಳಿದರು. ತಾಲಿಬಾನ್​ಗಳ ಆಕ್ರಮಣಕ್ಕೆ ಹೆದರಿದ ಅಲ್ಲಿನ ಜನರು ಸಂಕಷ್ಟದ ಪರಿಸ್ಥಿತಿಗಳು ದೃಶ್ಯ ರೂಪದಲ್ಲಿ ವೈರಲ್​ ಆಗಿತ್ತು. ಅಷ್ಟೇ ಏಕೆ ಜೀವ ಉಳಿಕೊಳ್ಳುವ ಭಯದಲ್ಲಿ ಅಮೆರಿಕದ ವಾಯು ವಿಮಾನದ ಹೊರಗೆ ನಿಂತ ವ್ಯಕ್ತಿಗಳು ಆಯತಪ್ಪಿ ಆಕಾಶದಿಂದ ಬಿದ್ದು ಸಾಪ್ಪನ್ನಪ್ಪಿರುವ ದೃಶ್ಯ ಕೂಡ ವೈರಲ್​ ಆಗಿತ್ತು. ಈ ಭಯಾನಕ ದೃಶ್ಯ ಅನೇಕರಿಗೆ ಬೇಸರ ತರಿಸಿತ್ತು. ಆದರೀಗ ಈ ದೃಶ್ಯವನ್ನು ಅಣಕಿಸುವ ಟೀ ಶರ್ಟ್​ ಆನ್​ಲೈನ್​ನಲ್ಲಿ ಮಾರಾಟ ಮಾಡಲಾಗುತ್ತಿದೆ.  1,216 ರೂ.ಗೆ ಸೇಲ್​ ಮಾಡುತ್ತಿದೆ. ಇದನ್ನು ಗಮನಿಸಿದ ಅನೇಕರು ಸಾಮಾಜಿ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

  ಟೀ ಶರ್ಟ್​ನಲ್ಲಿ ವಿಮಾನದ ಸಿಲೂಯೆಟ್​ಗಳನ್ನು ಕಾಣಿಸುತ್ತಿದ್ದು, ಎರಡು ವ್ಯಕ್ತಿಗಳು ವಿಮಾನದಿಂದ ಧುಮುಕುವ ದೃಶ್ಯವಿದೆ. ಟೀ ಶರ್ಟ್​ ಮೇಲ್ಭಾಗದಲ್ಲಿ ‘ಕಾಬೂಲ್​ ಸ್ಕೈಡೈವಿಂಗ್​​ ಕ್ಲಬ್​ ಈಸ್ಟರ್ನ್​ ಸ್ಟ್ಯಾಂಡರ್ಡ್​​ ಟೈಮ್​ ’​ ಎಂಬ ಫೋಷವಾಕ್ಯವಿದೆ.

  ತಾಲಿಬಾನ್​ ಆಕ್ರಮಣದಿಂದ ನೊಂದ ಕಾಬೂಲ್​ ಜನರು ತಮ್ಮ ರಕ್ಷಣೆಗಾಗಿ ಸಿ -17 ವಿಮಾನದಿಂದ ಕೆಳಗೆ ಬೀಳುವ ದುರಂತದ ಘಟನೆ ಬೆಳಕಿಗೆ ಬಂತು. ಇದಾದ ಕೆಲವೇ ದಿನಗಳಲ್ಲಿ ಟೀ ಶರ್ಟ್​ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಫ್​ ​ಬ್ರಾಂಡ್​ ಸ್ಟೋರ್​ಗಳಲ್ಲಿ ಟೀ ಶರ್ಡ್​ ಅನ್ನು ಮಾರಾಟ ಮಾಡಲಾಗುತ್ತಿದೆ. ಜೊತೆಗೆ Tee4Sport ಮತ್ತು TShirtAtLowPrice.com. ಸೈಟಿನಲ್ಲಿ ಸೇಲ್ ಮಾಡುತ್ತಿದೆ.

  ವಿವಿಧ ಬಣ್ಣದಲ್ಲಿ ಮತ್ತು ಸಣ್ಣ ಗಾತ್ರದಿಂದ 5ಎಕ್ಸ್​ಎಲ್​ವರೆಗಿನ ಗಾತ್ರದಲ್ಲಿ ಮಾರಾಟ ಮಾಡುತ್ತಿದೆ. ಈ ಟೀ ಶರ್ಟ್​ ನೋಡಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

  ಅಟ್ಲಾಂಟಿಕ್ ಕೌನ್ಸಿಲ್‌ನ ಇರಾನ್​ ಅಮೇರಿಕನ್ ಹಿರಿಯ ಸಹವರ್ತಿ ಹಾಲಿ ಡಾಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿದ್ದು,. ತಾಲಿಬಾನ್​ ಆಕ್ರಮಣದಿಂದ ನೊಂದು ಹತಾಶೆಯಿಂದ ಪಲಾಯನ ಮಾಡುತ್ತಿರುವ ಆಫ್ಘನ್ನರು ವಿಮಾನಗಳಿಗೆ ಏರಿದ್ದರು. ವಿಮಾನದ ಒಳಗೆ ಮತ್ತು ಹೊರಗೆ ಮತ್ತು ಕುಳಿತು ಕೊಂಡು ಸಂಚಾರಿಸುತ್ತಿದ್ದರು. ಅದರಲ್ಲಿ ಇಬ್ಬರು ವಿಮಾನ ಹಾರುವ ವೇಳೆ ಆಯ ತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪುತ್ತಾರೆ. ಆದರೆ ಈ ಭಯಾನಕ ದೃಶ್ಯವನ್ನು ಮತ್ತು ಕ್ರೂರತೆಯ ಮನಸ್ಥಿತಿ ಉಳ್ಳವರು ಟಿ-ಶರ್ಟ್‌ನಲ್ಲಿ ಪ್ರಿಂಟ್​ ಮಾಡಿ ನಂತರ ಅದನ್ನು ಮಾರಿ ಲಾಭ ಮಾಡುತ್ತಿದ್ದಾರೆ. ಹಲವು ವೆಬ್‌ಸೈಟ್‌ಗಳಲ್ಲಿ ಟೀ ಶರ್ಟ್​ ಅನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

  ಮತ್ತೊಬ್ಬ, ನಮ್ಮ ಕಣ್ಣುಗಳಲ್ಲಿ ಇಂತಹ ದುರಂತ ಹಾಸ್ಯವನ್ನು ವೀಕ್ಷಿಸುವಷ್ಟು ಬುದ್ಧೀಹೀನಾರಿದ್ದೇವೆಯೇ? ಎಂದು ಬರೆದುಕೊಂಡಿದ್ದಾರೆ.  ಮತ್ತೋರ್ವ ಟ್ವಿಟ್ಟಗ ‘ನಾವು ಸ್ಪಷ್ಟವಾಗಿ ಬದಲಾಗಿದ್ದೇವೆ’ ಎಂದು ಬರೆದಿದ್ದಾರೆ.
  Published by:Harshith AS
  First published: