• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Kabul Airport Blast: ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 90ಕ್ಕೆ ಏರಿಕೆ; ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

Kabul Airport Blast: ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 90ಕ್ಕೆ ಏರಿಕೆ; ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಸ್ಪೋಟದಲ್ಲಿ ಗಾಯಗೊಂಡವರು

ಸ್ಪೋಟದಲ್ಲಿ ಗಾಯಗೊಂಡವರು

ಸೇನಾ ಪಡೆಗಳ ಸ್ಥಳಾಂತರಿಸುವಿಕೆಯಲ್ಲಿ ತೊಡಗಿರುವ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಐಎಸ್ಐ ನ ಪ್ರಾದೇಶಿಕ ಸಂಘಟನೆ ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸಲಿದೆ ಎಂಬ ಮಾಹಿತಿ ಇತ್ತು

  • Share this:

    ನಿನ್ನೆ ಅಪ್ಘಾನಿಸ್ತಾನದ(Afghanistan) ಕಾಬೂಲ್​ ವಿಮಾನ ನಿಲ್ದಾಣ(Kabul Airport Blast)ದಲ್ಲಿ ನಡೆದ ಅವಳಿ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 90ಕ್ಕೆ ಏರಿಕೆಯಾಗಿದ್ದು, ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಐಸಿಸ್​-ಕೆ(ಇಸ್ಲಾಮಿಕ್​ ಸ್ಟೇಟ್​​​-ISIS) ಹೊತ್ತುಕೊಂಡಿದೆ. ಗುರುವಾರ ಸಂಜೆ ಕಾಬೂಲ್​​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಒಂದು ಸ್ಪೋಟ ಸಂಭವಿಸಿತ್ತು. ಬಳಿಕ ರಾತ್ರಿಯೇ ಮತ್ತೊಂದು ಸ್ಪೋಟ ಸಂಭವಿಸಿತ್ತು. ಆಗ 12 ಮಂದಿ ಅಮೆರಿಕ ಮಿಲಿಟರಿ ಸಿಬ್ಬಂದಿ(US military personnel) ಹಾಗೂ ಅನೇಕ ಸೇವಾ ಸಿಬ್ಬಂದಿ ಸೇರಿದಂತೆ ಸುಮಾರು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದರು.


    ಅಮೆರಿಕ ನೇತೃತ್ವದ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ನಡೆಯುತ್ತಿದ್ದಾಗ ತಾಲಿಬಾನ್​ ಆಡಳಿತವಿರುವ ಅಪ್ಘಾನಿಸ್ತಾನದಲ್ಲಿ ಈ ಅವಳಿ ಸ್ಫೋಟ ಸಂಭವಿಸಿತ್ತು. ಬಾಂಬರ್​​ಗಳು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಓರ್ವ ಬಾಂಬರ್ ಗೆ ಸಾಧ್ಯವಾಗಿದೆ ಎಂದು ಉಗ್ರ ಸಂಘಟನೆಯ ಪ್ರಚಾರ ವಿಭಾಗ ಹೇಳಿದೆ. ಹೇಳಿಕೆಯಲ್ಲಿ ಓರ್ವ ಬಾಂಬರ್ ಹಾಗೂ ಒಂದು ಸ್ಫೋಟದ ಬಗ್ಗೆಯಷ್ಟೇ ಮಾಹಿತಿ ನೀಡಲಾಗಿದೆ. ಆದರೆ ಘಟನೆಯಲ್ಲಿ ಕನಿಷ್ಟ 2 ಬಾಂಬ್ ಸ್ಫೋಟಗೊಂಡಿರುವುದು ಪತ್ತೆಯಾಗಿದೆ.


    ಇದನ್ನೂ ಓದಿ:Karnataka Weather Today: ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದು ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ


    ಈ ಅವಳಿ ಸ್ಪೋಟಗಳ ಹೊಣೆಯನ್ನು ಇಸ್ಲಾಮಿಕ್​ ಸ್ಟೇಟ್ ಹೊತ್ತುಕೊಂಡಿದೆ. ’’ನಾವು ಯಾವತ್ತಿಗೂ ಕ್ಷಮಿಸಲ್ಲ, ಎಂದಿಗೂ ಮರೆಯಲ್ಲ, ನಿಮ್ಮನ್ನು ಕುಗ್ಗುವಂತೆ ಮಾಡುತ್ತೇವೆ ಹಾಗೂ ಬೆಲೆ ತೆರುವಂತೆ ಮಾಡುತ್ತೇವೆ’’ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಕ್ರೋಶದ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಅಪ್ಘನಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳು ಹಾಗೂ ಅಪ್ಘನ್ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಿಲ್ಲಿಸಲ್ಲ ಎಂದೂ ಸಹ ಬೈಡನ್ ಹೇಳಿದ್ದಾರೆ.


    ಸೇನಾ ಪಡೆಗಳ ಸ್ಥಳಾಂತರಿಸುವಿಕೆಯಲ್ಲಿ ತೊಡಗಿರುವ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಐಎಸ್ಐ ನ ಪ್ರಾದೇಶಿಕ ಸಂಘಟನೆ ಅಫ್ಘಾನಿಸ್ತಾನದಲ್ಲಿ ದಾಳಿ ನಡೆಸಲಿದೆ ಎಂಬ ಮಾಹಿತಿ ಇತ್ತು. ಆಫ್ಘಾನಿಸ್ತಾನ ತಾಲಿಬಾನ್ ವಶವಾದಾಗಿನಿಂದಲೂ ದೇಶ ತೊರೆಯುವುದಕ್ಕಾಗಿ ಸಾವಿರಾರು ಮಂದಿ ಕಾಬೂಲ್​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದಾರೆ. ಜೊತೆಗೆ ಅಮೆರಿಕನ್ನರ ಸ್ಥಳಾಂತರವೂ ನಡೆಯುತ್ತಿದ್ದು, ಆಗಸ್ಟ್​ 31ರವರೆಗೆ ಈ ಸ್ಥಳಾಂತರ ಕಾರ್ಯಕ್ಕೆ ತಾಲಿಬಾನ್ ಅನುಮತಿ ನೀಡಿದೆ. ಹೀಗಾಗಿ ಅಮೆರಿಕ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಅಮೆರಿಕ ಮತ್ತು ಇತರೆ ಅಧಿಕಾರಿಗಳ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಸೂಸೈಟ್​ ಬಾಂಬರ್​​ಗಳು ವಿಮಾನ ನಿಲ್ದಾಣವನ್ನು ಸ್ಪೋಟಿಸುವ ಬೆದರಿಕೆಯನ್ನು ಹಾಕಿದ್ದರು.

    ಇದನ್ನೂ ಓದಿ:Kabul Explosions: ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಸ್ಪೋಟ; 13 ಜನರು ಸಾವು




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Latha CG
    First published: