• Home
  • »
  • News
  • »
  • national-international
  • »
  • Sandeep Nangal: ಕಬಡ್ಡಿ ಪಂದ್ಯದ ವೇಳೆಯೇ ಆಟಗಾರ ಸಂದೀಪ್ ನಂಗಲ್​ಗೆ ಗುಂಡಿಕ್ಕಿ ಬರ್ಬರ ಹತ್ಯೆ!

Sandeep Nangal: ಕಬಡ್ಡಿ ಪಂದ್ಯದ ವೇಳೆಯೇ ಆಟಗಾರ ಸಂದೀಪ್ ನಂಗಲ್​ಗೆ ಗುಂಡಿಕ್ಕಿ ಬರ್ಬರ ಹತ್ಯೆ!

ಸಂದೀಪ್ ನಂಗಲ್

ಸಂದೀಪ್ ನಂಗಲ್

ಪಂಜಾಬ್‌ನ ಮಲ್ಲಿಯನ್‌ನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ.

  • Share this:

ಜಲಂಧರ್‌: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ (international Kabaddi player) ಸಂದೀಪ್ ನಂಗಲ್ (Sandeep Nangal) ಅವರನ್ನು ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ಪಂಜಾಬ್​​​ನ ಜಲಂಧರ್​​ ಜಿಲ್ಲೆಯ ಮಲಿಯನ್ ಹಳ್ಳಿಯಲ್ಲಿ ನಡೆಯುತ್ತಿದ್ದ ಕಬಡ್ಡಿ ಆಟದ ವೇಳೆ  ಸಂದೀಪ್ ನಂಗಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸಂದೀಪ್​​ ಅವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.  ಜಲಂಧರ್ (ಗ್ರಾಮೀಣ) ಉಪ ಪೊಲೀಸ್ ವರಿಷ್ಠಾಧಿಕಾರಿ ಲಖ್ವಿಂದರ್ ಸಿಂಗ್ ಹತ್ಯೆಯನ್ನು ದೃಢಪಡಿಸಿದ್ದಾರೆ. ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ. ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಭಾರತೀಯ ಕಬ್ಬಡಿ ಸ್ಪರ್ಧಿಯಾಗಿದ್ದು, ಗೆಲುವಿನ ಮೂಲಕ ಇತ್ತೀಚಿನ ದಿನಗಳಲ್ಲಿ ಖ್ಯಾತಿಯನ್ನು ಗಳಿಸಿದರು. ಅವರ ಅಥ್ಲೆಟಿಕ್ ಪ್ರತಿಭೆಗಾಗಿ ಅವರನ್ನು ಕೆಲವೊಮ್ಮೆ ಡೈಮಂಡ್ ಎಂದು ಕರೆಯಲಾಗುತ್ತಿತ್ತು.


ಪಂದ್ಯದ ಮಧ್ಯೆ ಗುಂಡಿನ ಸುರಿಮಳೆ..!


ಪಂಜಾಬ್‌ನ ಮಲ್ಲಿಯನ್‌ನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ. ಜಲಂಧರ್‌ನ ಮಾಲಿಯನ್ ಗ್ರಾಮದಲ್ಲಿ ಸಂಜೆ 6 ಗಂಟೆಗೆ ಕಬಡ್ಡಿ ಕಪ್ ನಡೆಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯುವಕನ ಕಾಲಿಗೂ ಗುಂಡು ತಗುಲಿದೆ. ದೂರದಿಂದ ಸರಣಿ ಬುಲೆಟ್‌ಗಳನ್ನು ಹಾರುತ್ತಿಸುತ್ತಿರುವ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯವನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: NSE ಹಗರಣದ ಚಿತ್ರಾ ರಾಮಕೃಷ್ಣಗೆ 14 ದಿನ ಜೈಲು: ಆಕೆ VIP ಅಲ್ಲ ಅಂದಿದ್ದೇಕೆ ಕೋರ್ಟ್?


ಆಟಗಾರನ ಕೊಲೆಗೆ ಕಾರಣವೇನು..?


ಮೂಲಗಳ ಪ್ರಕಾರ, ನಾಲ್ಕೈದು ದುಷ್ಕರ್ಮಿಗಳು ಸಂದೀಪ್ ನಂಗಲ್ ಮೇಲೆ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಸಂದೀಪ್​​ ಪ್ರಮುಖ ಲೀಗ್ ಕಬಡ್ಡಿ ಫೆಡರೇಶನ್ ಅನ್ನು ನೋಡಿಕೊಳ್ಳುತ್ತಿದ್ದರು. ಅವರ ಮತ್ತು ಫೆಡರೇಶನ್ ನಡುವೆ ಅಥವಾ ಬಹುಶಃ ಕ್ಲಬ್‌ಗಳ ನಡುವೆ ಬಿರುಕು ಇರಬಹುದೆಂದು ಅವರ ಬಗ್ಗೆ ಚೆನ್ನಾಗಿ ಗೊತ್ತಿರುವವರು ಶಂಕಿಸುತ್ತಿದ್ದಾರೆ.


ಸಂದೀಪ್​​ ವೃತ್ತಿಪರ ಕಬಡ್ಡಿ ಆಟಗಾರರಾಗಿದ್ದು, ಸ್ಟಾಪರ್ ಸ್ಥಾನದಲ್ಲಿ ಆಡಿದ್ದಾರೆ. ಅವರು ರಾಜ್ಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಭಿಮಾನಿಗಳಿಂದ 'ಗ್ಲಾಡಿಯೇಟರ್' ಎಂದು ಕರೆಯಲ್ಪಟ್ಟಿದ್ದಾರೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ.

Published by:Kavya V
First published: