AIADMK ಜೊತೆ ಮೈತ್ರಿ ಮಾಡಿಕೊಂಡರೆ ನಾನು ಬಿಜೆಪಿಯನ್ನೇ ತೊರೆಯುತ್ತೇನೆ: ಅಣ್ಣಾಮಲೈ ಎಚ್ಚರಿಕೆ!

K Annamalai

K Annamalai

ಅಣ್ಣಾ ಮಲೈ ತಮ್ಮ ಭಾಷಣದಲ್ಲಿ, ನಾವು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆ ಊರಬೇಕಾದರೆ ಏಕಾಂಗಿಯಾಗಿ ಕಣಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತು, ಎಐಎಡಿಎಂಕೆಯ ಕಿರಿಯ ಮಿತ್ರನಾಗಿ ಇರಲು ಅಲ್ಲ ಎಂದು ಹೇಳಿದ್ದರು.

ಮುಂದೆ ಓದಿ ...
  • Share this:

ಚೆನ್ನೈ: ಬಿಜೆಪಿ (BJP) ಪಕ್ಷ ಒಂದು ವೇಳೆ ಎಐಎಡಿಎಂಕೆ (AIADMK) ಜತೆ ಮೈತ್ರಿ ಮಾಡಿಕೊಂಡರೆ ನಾನು ಪಕ್ಷವನ್ನೇ ತೊರೆಯುತ್ತೇನೆ ಎಂದು ತಮಿಳುನಾಡು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಹೇಳಿದ್ದಾರೆ.


ಇತ್ತೀಚೆಗಷ್ಟೇ ಬಿಜೆಪಿಯ ಐಟಿ ವಿಭಾಗದ ಹಲವು ಪದಾಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೇ ವಿಚಾರವಾಗಿ ಬಿಜೆಪಿ ಮತ್ತು ಎಐಎಡಿಎಂಕೆ ಕಾರ್ಯಕರ್ತರು ಮುಖಂಡರ ಮಧ್ಯೆ ವಾಕ್ಸಮರ ನಡೆದಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಈ ರೀತಿ ಹೇಳಿಕೆ ನೀಡಿರುವುದು  ಭಾರೀ ಕುತೂಹಲ ಮೂಡಿಸಿದೆ.


ಇದನ್ನೂ ಓದಿ: Mandya: ಮೋದಿ ಆಗಮಿಸೋದು 10 ದಿನ ಮೊದಲೇ ಮಂಡ್ಯಕ್ಕೆ ಯುಗಾದಿ ಬಂದಂತಾಗಿದೆ! ಬಿಜೆಪಿಗೆ ಬೆಂಬಲ ಘೋಷಿಸಿದ ಬಳಿಕ ಸುಮಲತಾ ಗುಣಗಾನ


ಕೆ ಅಣ್ಣಾ ಮಲೈ ಹೇಳಿದ್ದೇನು?


ಮುಂಬರುವ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ನಾನು ಪಕ್ಷದಲ್ಲಿರುವುದಿಲ್ಲ ಎಂದು ಅಣ್ಣಾಮಲೈ ಹೇಳಿದ ಬೆನ್ನಲ್ಲೇ ಅಣ್ಣಾಮಲೈ ಅವರ ಅಭಿಪ್ರಾಯಕ್ಕೆ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ದ್ರಾವಿಡ ಪಕ್ಷಗಳ ನಡುವೆ ಜನರಿಗೆ ಪ್ರಮುಖ ಆಯ್ಕೆ ನಾವಾಗಬೇಕೆ ವಿನಃ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು. ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ಮಾತ್ರವೇ ಉತ್ತಮ ಆಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕೀಯದ ವಿರುದ್ಧ ಸ್ಪಷ್ಟ ನಿಲುವುಗಳನ್ನು ಜನರ ಮುಂದಿಡಲು ಸಾಧ್ಯವಾಗುತ್ತದೆ ಎಂದು ಅಣ್ಣಾ ಮಲೈ ಹೇಳಿದ್ದರು.


ಅಣ್ಣಾ ಮಲೈ ತಮ್ಮ ಭಾಷಣದಲ್ಲಿ, ನಾವು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆ ಊರಬೇಕಾದರೆ ಏಕಾಂಗಿಯಾಗಿ ಕಣಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿಯೇ ಹೊರತು, ಎಐಎಡಿಎಂಕೆಯ ಕಿರಿಯ ಮಿತ್ರನಾಗಿ ಇರಲು ಅಲ್ಲ. ಅದಾಗ್ಯೂ ಮೈತ್ರಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ಸಮಯ ಕೇಳಿರುವುದಾಗಿ ಕೆ ಅಣ್ಣಾ ಮಲೈ ಹೇಳಿದ್ದಾರೆ.


ಇನ್ನು ಸಭೆಯಲ್ಲಿ ಕೆ ಅಣ್ಣಾಮಲೈ ಅವರ ಭಾಷಣಕ್ಕೆ ಇತರ ಪದಾಧಿಕಾರಿಗಳ ಬೆಂಬಲ ಸಿಕ್ಕಿದ್ದು, ಬಿಜೆಪಿ ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.


ಇದನ್ನೂ ಓದಿ: Annamalai: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಎಫ್​ಐಆರ್, ತಾಕತ್ತಿದ್ದರೆ ಬಂಧಿಸುವಂತೆ ಪೊಲೀಸರಿಗೆ ಮಾಜಿ ಪೊಲೀಸ್ ಸವಾಲು


ಅಣ್ಣಾಮಲೈ ರಾಜೀನಾಮೆ ಅಲ್ಲಗಳೆದ


ಚೆನ್ನೈ: ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಮುಂದುವರಿಸಲು ಪಕ್ಷದ ನಾಯಕರು ನಿರ್ಧರಿಸಿದ್ದೇ ಆದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.ಅಣ್ಣಾಮಲೈ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದ ಬೆನ್ನಲ್ಲೇ ಈ ಕುರಿತು ಮಾಧ್ಯಮಗಳಿಗೆ ತಮಿಳುನಾಡು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ.


ಈ ಸಂಬಂಧ ಮಾತನಾಡಿರುವ ಅವರು, ಕೆ ಅಣ್ಣಾಮಲೈ ರಾಜೀನಾಮೆ ನೀಡುತ್ತಾರೆ ಎನ್ನುವ ವರದಿಯನ್ನು ಅಲ್ಲಗೆಳದಿದ್ದಾರೆ. ಅಲ್ಲದೇ, ಶುಕ್ರವಾರ ನಡೆದ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ. ಮೈತ್ರಿ ಬೇಡ ಎನ್ನುವುದು ಅಣ್ಣಾಮಲೈ ಅವರ ವೈಯಕ್ತಿಕ ಅಭಿಪ್ರಾಯ ಆಗಿರಬಹುದು. ಆದರೆ ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.


ಇದನ್ನೂ ಓದಿ: Bathroom Commodes: ಒಂದೇ ಸ್ನಾನ ಗೃಹದಲ್ಲಿ ಎರಡು ಕಮೋಡ್​​ಗಳಿರುವ ಕಟ್ಟಡ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್!

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು