HOME » NEWS » National-international » JYOTIRADITYA SCINDIA WITHHELD INFO ON FORGERY CASE AGAINST HIM IN RS NOMINATION FORM SAYS CONGRESS MAK

ರಾಜ್ಯಸಭೆ ನಾಮಪತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸುಳ್ಳು ಮಾಹಿತಿ ನೀಡಿದ್ದಾರೆ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು

ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ 2014ರಲ್ಲಿ ಆರ್ಥಿಕ ಅಪರಾಧ ವಿಭಾಗ ಭೂ ಕಬಳಿಕೆ ಪ್ರಕರಣ ದಾಖಲಿಸಿತ್ತು. ನಕಲಿ ಸಹಿ ಹಾಕುವ ಮೂಲಕ ಭೂ ಕಬಳಿಕೆ ಮಾಡಿದ್ದರು ಎಂಬುದು ಅವರ ಮೇಲಿದ್ದ ಆರೋಪ. ಆದರೆ, ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣಕ್ಕೆ ಈ ಪ್ರಕರಣವನ್ನು 2018ರಲ್ಲಿ ಮುಚ್ಚಲಾಗಿತ್ತು.

MAshok Kumar | news18-kannada
Updated:March 17, 2020, 2:41 PM IST
ರಾಜ್ಯಸಭೆ ನಾಮಪತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸುಳ್ಳು ಮಾಹಿತಿ ನೀಡಿದ್ದಾರೆ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು
ರಾಜ್ಯಸಭೆಗೆ ನಾಮಪತ್ರ ಸಲ್ಲಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ.
  • Share this:
ಮಧ್ಯಪ್ರದೇಶ (ಮಾರ್ಚ್​ 17); ಇತ್ತೀಚೆಗೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗುವ ಮೂಲಕ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ತಾವು ಸಲ್ಲಿಸಿರುವ ನಾಮಪತ್ರದಲ್ಲಿ ತಮ್ಮ ಮೇಲಿರುವ ಸಹಿ ನಕಲು ಮಾಡಿರುವ ಪ್ರಕರಣದ ಕುರಿತು ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್​ ಆರೋಪ ಮಾಡಿದೆ.

ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ 2014ರಲ್ಲಿ ಆರ್ಥಿಕ ಅಪರಾಧ ವಿಭಾಗ ಭೂ ಕಬಳಿಕೆ ಪ್ರಕರಣ ದಾಖಲಿಸಿತ್ತು. ನಕಲಿ ಸಹಿ ಹಾಕುವ ಮೂಲಕ ಭೂ ಕಬಳಿಕೆ ಮಾಡಿದ್ದರು ಎಂಬುದು ಅವರ ಮೇಲಿದ್ದ ಆರೋಪ. ಆದರೆ, ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣಕ್ಕೆ ಈ ಪ್ರಕರಣವನ್ನು 2018ರಲ್ಲಿ ಮುಚ್ಚಲಾಗಿತ್ತು.

ಆದರೆ, ಈ ಪ್ರಕರಣದ ಮಾಹಿತಿಯನ್ನು ರಾಜ್ಯಸಭಾ ಅಭ್ಯರ್ಥಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರದಲ್ಲಿ ಸಲ್ಲಿಸಿಲ್ಲ. ಅಲ್ಲದೆ, ಮತ್ತೋರ್ವ ಅಭ್ಯರ್ಥಿ ಸುಮೇರ್ ಸಿಂಗ್ ಸೋಲಂಕಿ ಸಹ ತಮ್ಮ ವಿರುದ್ಧ ಪ್ರಕರಣದ ಕುರಿತು ಸೂಕ್ತ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್​ ಆಕ್ಷೇಪ ವ್ಯಕ್ತಪಡಿಸಿದೆ.

ಸೋಮವಾರ ಕಾಂಗ್ರೆಸ್​ ಈ ಕುರಿತು ಚುನಾವಣಾ ಆಯೋಗದ ರಿಟರ್ನಿಂಗ್ ಆಫೀಸರ್ ಎದುರು ತಮ್ಮ ಆಕ್ಷೇಪಣೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿದೆ ಎಂದು ತಿಳಿದುಬಂದಿದೆ.

ಇನ್ನೂ ಎರಡನೇ ಅಭ್ಯರ್ಥಿ ಸುಮೇರ್ ಸಿಂಗ್ ಸೋಲಂಕಿ ಅವರ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​, ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರು ಇನ್ನೂ ಸರ್ಕಾರಿ ಸೇವೆಯಲ್ಲಿದ್ದರು ಮತ್ತು ಅವರು ತಮ್ಮ ಅರ್ಜಿಯನ್ನು ಮಧ್ಯಪ್ರದೇಶ ವಿಧಾನಸಭೆಗೆ ನೀಡಿದ ಒಂದು ದಿನದ ನಂತರ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು ಎಂದು ಆರೋಪಿಸಿದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೊರೋನಾಗೆ ಮೊದಲ ಬಲಿ; ಭಾರತದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಸೋಲಂಕಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಮೊದಲು ಬಾರ್ವಾನಿಯ ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ನಾಮಪತ್ರಗಳ ಪರಿಶೀಲನೆಯ ಕೊನೆಯ ದಿನವಾಗಿತ್ತು. ಹಾಗಾಗಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧದ ದೂರುಗಳನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಆಲಿಸಲು ರಾಜ್ಯಸಭಾ ಚುನಾವಣೆಯ ರಿಟರ್ನಿಂಗ್ ಅಧಿಕಾರಿ ನಿರ್ಧರಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿಗಳಾದ ದಿಗ್ವಿಜಯ ಸಿಂಗ್, ಫೂಲ್ ಸಿಂಗ್ ಬಾರಯ್ಯ ಮತ್ತು ಬಿಜೆಪಿಯ ರಂಜನಾ ಬಾಗೇಲ್ ಅವರ ನಾಮಪತ್ರಗಳನ್ನು ರಿಟರ್ನಿಂಗ್ ಅಧಿಕಾರಿ ಅನುಮೋದಿಸಿದ್ದಾರೆ.

ಕರೋನ ವೈರಸ್ ಭಯದಿಂದಾಗಿ ಮಧ್ಯಪ್ರದೇಶ ವಿಧಾನಸಭಾ ಕಲಾಪವನ್ನು ಮಾರ್ಚ್. 26ಕ್ಕೆ  ಮುಂದೂಡಲಾಗಿದೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯ ಪ್ರದೇಶದ 25ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕಮಲನಾಥ್​ ಸರ್ಕಾರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

(ವರದಿ - ಸಂಧ್ಯಾ. ಎಂ)

ಇದನ್ನೂ ಓದಿ : ಇನ್ನೂ ಶಮನವಾಗದ ಬಿಜೆಪಿ ಒಳ ಬೇಗುದಿ; ಶಾಸಕರ ಸಂಧಾನಕ್ಕೆ ಮುಂದಾದ ಸಿಎಂ ಬಿ.ಎಸ್. ಯಡಿಯೂರಪ್ಪ
Youtube Video
First published: March 17, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories