Article 370: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು; ಕೇಂದ್ರದ ನಡೆಗೆ ಕಾಂಗ್ರೆಸ್​​ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲ

Jyotiraditya Scindia: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ವಿಧೇಯಕಕ್ಕೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲೇ ಒಡಕು ಕಾಣಿಸಿಕೊಂಡಿದೆ. ಮಸೂದೆಯನ್ನು ಕಾಂಗ್ರೆಸ್ ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಸಿದರೆ, ಪಕ್ಷದ ವರಿಷ್ಠ ರಾಹುಲ್​​ ಗಾಂಧಿ ವಿರೋಧಿಸಿದ್ದಾರೆ.

Ganesh Nachikethu | news18
Updated:August 7, 2019, 9:34 AM IST
Article 370: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು; ಕೇಂದ್ರದ ನಡೆಗೆ ಕಾಂಗ್ರೆಸ್​​ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲ
ಜ್ಯೋತಿರಾದಿತ್ಯ ಸಿಂಧಿಯಾ
  • News18
  • Last Updated: August 7, 2019, 9:34 AM IST
  • Share this:
ನವದೆಹಲಿ(ಆಗಸ್ಟ್​​.06): ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್​​ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಸಿದ್ದಾರೆ. "370ನೇ ವಿಧಿಯ ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತೇನೆ. ಸಾಂವಿಧಾನಿಕವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರೆ, ಇನ್ನಷ್ಟು ಉತ್ತಮವಾಗಿರುತ್ತಿತ್ತು. ದೇಶದ ಹಿತಾಸಕ್ತಿಗಾಗಿ ಬಿಜೆಪಿ ಕೇಂದ್ರ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ" ಎಂದು ಟ್ವೀಟ್​​ ಮಾಡಿದ್ದಾರೆ.ಕೇಂದ್ರ ಸರ್ಕಾರವಿತ್ತ ಕಣಿವೆ ರಾಜ್ಯದ ಇಬ್ಭಾಗ ಪ್ರಸ್ತಾಪಕ್ಕೆ ಸಂಸತ್​​ನಲ್ಲಿ ಅನುಮೋದನೆ ಸಿಕ್ಕಿದೆ. ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಲಿಕ್ಕೆ ರಾಜ್ಯಸಭೆ ಮತ್ತು ಲೋಕಸಭೆ ಅಸ್ತು ಎಂದಿದೆ. ಈಗಾಗಲೇ ಜಮ್ಮು ಕಾಶ್ಮೀರ ಪುನಾರಚನೆ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ಈ ಹಿನ್ನೆಲೆಯಲ್ಲಿ ಈ ವಿಧೇಯಕ ಕಾನೂನಾಗಿ ರೂಪುಗೊಳ್ಳಲಿದೆ.370ನೇ ವಿಧಿಯನ್ನು ರದ್ದು ಮಾಡುವುದರ ಹಾಗೂ ಕಾಶ್ಮೀರ ಪುನಾರಚನಾ ವಿಧೇಯಕದ ಮೇಲಿನ ಚರ್ಚೆ ಲೋಕಸಭೆಯಲ್ಲಿ ಬೆಳಿಗ್ಗೆಯಿಂದಲೇ ನಡೆಯಿತು. ಚರ್ಚೆ ಮುಗಿದ ನಂತರ ವಿಧೇಯಕ ಅಂಗೀಕಾರ ಮಾಡಲು ಮತಕ್ಕೆ ಹಾಕಲಾಯಿತು. ಈ ವೇಳೆ ಬಹುಮತ ಪಡೆಯುವ ಮೂಲಕ ವಿಧೇಯಕ ಅಂಗೀಕಾರ ಪಡೆಯಿತು. ಈ ವಿಧೇಯಕದ ಪರವಾಗಿ 351, ವಿರುದ್ಧವಾಗಿ 71 ಮತಗಳು ಚಲಾವಣೆಯಾದವು.

ಇದನ್ನೂ ಓದಿ: ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆಯಲು ಮತ್ತು ಇಬ್ಭಾಗ ಮಾಡಲು ಲೋಕಸಭೆಯೂ ಒಪ್ಪಿಗೆ

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ವಿಧೇಯಕಕ್ಕೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲೇ ಒಡಕು ಕಾಣಿಸಿಕೊಂಡಿದೆ. ಮಸೂದೆಯನ್ನು ಕಾಂಗ್ರೆಸ್ ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಸಿದರೆ, ಪಕ್ಷದ ವರಿಷ್ಠ ರಾಹುಲ್​​ ಗಾಂಧಿ ವಿರೋಧಿಸಿದ್ದಾರೆ. ಅತ್ತ ಕೇಂದ್ರ ಸರ್ಕಾರದ ನಡೆ ದೇಶದ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಸಿಂಧಿಯಾ ತಿಳಿಸಿದರೆ, ಇತ್ತ ಈ ಮಸೂದೆ ದೇಶಕ್ಕೆ ಅಪಾಯ ತಂದೊಡ್ಡಲಿದೆ ಎಂದು ರಾಹುಲ್​​ ಟ್ವೀಟ್​ ಮಾಡಿದ್ಧಾರೆ.

ಇದನ್ನೂ ಓದಿ: 370ನೇ ವಿಧಿ ರದ್ದು ಯುದ್ದಕ್ಕೆ ಕಾರಣವಾದೀತು; ಭಾರತಕ್ಕೆ ಪಾಕ್​​ ಪ್ರಧಾನಿ ಇಮ್ರಾನ್​​ ಎಚ್ಚರಿಕೆ

ನಿನ್ನೆಯಷ್ಟೇ ಸಂವಿಧಾನದ ವಿಧಿ 370ರ ಸಂಬಂಧದ ಪ್ರಸ್ತಾವಕ್ಕೆ ರಾಜ್ಯಸಭೆ ಅನುಮೋದನೆ ನೀಡಿತ್ತು. ವಿಧೇಯಕದ ಪರವಾಗಿ 125 ಮತಗಳು ಮತ್ತು ವಿರೋಧವಾಗಿ 61 ಮತಗಳು ಚಲಾವಣೆಗೊಂಡಿದ್ದವು. ಅಂತೆಯೇ ಇಂದು ಈ ಮಸೂದೆಗೆ ಲೋಕಸಭೆ ಅಧಿವೇಶನಲ್ಲೂ ಅನುಮೋದನೆ ಸಿಕ್ಕಿದೆ. ಅಲ್ಲದೇ ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಮಂಡಿಸಿದ್ದ ಪ್ರಸ್ತಾವಕ್ಕೆ ರಾಷ್ಟ್ರಪತಿ ರಾಮ್​​ನಾಥ್​​ ಕೋವಿಂದ್​ ಅಂಕಿತವೂ ಹಾಕಿದ್ದಾರೆ.
-----------------
First published:August 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading