ಕುತೂಹಲ ಮೂಡಿಸಿದ ಜ್ಯೋತಿರಾದಿತ್ಯ ಸಿಂಧ್ಯಾ- ಶಿವರಾಜ್​ ಸಿಂಗ್​ ಚೌಹಣ್​ ಭೇಟಿ

ಚೌಹಣ್​ ಮನೆಯಲ್ಲಿ ಈ ಇಬ್ಬರು ನಾಯಕರು ಮಾತುಕತೆ ನಡೆಸಿದ್ದು, ಇದೊಂದು ಸೌಜನ್ಯಯುತ ಭೇಟಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, 40 ನಿಮಿಷಗಳ ಕಾಲ ನಡೆದ ಈ ದಿಢೀರ್​ ಭೇಟಿ, ಚರ್ಚೆಅನುಮಾನ ಮೂಡಿಸಿದೆ.

Seema.R | news18
Updated:January 22, 2019, 1:49 PM IST
ಕುತೂಹಲ ಮೂಡಿಸಿದ ಜ್ಯೋತಿರಾದಿತ್ಯ ಸಿಂಧ್ಯಾ- ಶಿವರಾಜ್​ ಸಿಂಗ್​ ಚೌಹಣ್​ ಭೇಟಿ
ಜೋತಿರಾದಿತ್ಯ ಸಿಂಧ್ಯಾ- ಶಿವರಾಜ್​ ಸಿಂಗ್​ ಚೌಹಣ್​​
  • News18
  • Last Updated: January 22, 2019, 1:49 PM IST
  • Share this:
ವಿವೇಕ್​ ತ್ರಿವೇದಿ

ಭೂಪಾಲ್​ (ಜ.22): ಮಧ್ಯಪ್ರದೇಶದ ಇಬ್ಬರು ರಾಜಕೀಯ ಧುರಿಣರ ಮಧ್ಯರಾತ್ರಿ ಭೇಟಿ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ಡಿಸಿಎಂ ಆಕಾಂಕ್ಷಿಯಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ರಾಜಕೀಯ ಎದುರಾಳಿಯಾಗಿದ್ದ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಣ್​ ಅವರನ್ನು ಭೇಟಿಯಾಗಿರುವುದು  ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಚೌಹಣ್​ ಮನೆಯಲ್ಲಿ ಈ ಇಬ್ಬರು ನಾಯಕರು ಮಾತುಕತೆ ನಡೆಸಿದ್ದು, ಇದೊಂದು ಸೌಜನ್ಯಯುತ ಭೇಟಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, 40 ನಿಮಿಷಗಳ ಕಾಲ ನಡೆದ ಈ ದಿಢೀರ್​ ಭೇಟಿ, ಚರ್ಚೆಅನುಮಾನ ಮೂಡಿಸಿದೆ.

ಕಾಂಗ್ರೆಸ್​ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಬಿಜೆಪಿ ನಾಯಕ ಚೌಹಣ್, ಯಾವಾಗಲೂ ದ್ವೇಷದಲ್ಲಿಯೇ  ಬದುಕುವ ವ್ಯಕ್ತಿನಾನಲ್ಲ. ರಾತ್ರಿ ಕಳೆಯಿತು. ಮಾತು ಮುಗಿಯಿತು. ನನಗೆ ಯಾವುದೇ ದ್ವೇಷ ಹಾಗೂ ದೂರು ಇಲ್ಲ. ಕಾಂಗ್ರೆಸ್​ ಅಧಿಕಾರದಲ್ಲಿದೆ, ನಾವು ಎಲ್ಲರೊಂದಿಗೂ ನಡೆಯಬೇಕಿದೆ. ಚುನಾವಣೆಯಲ್ಲಿ ನಮ್ಮ ನಡುವೆ ಹಣಾಹಣಿ ಇರುತ್ತದೆ. ಆದರೆ ಇದೆಲ್ಲವೂ ನಂತರ ಮುಗಿಯುತ್ತದೆ ಎಂದರು.

ವಿಶ್ವ ಆರ್ಥಿಕ ಒಕ್ಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೂರದ ಡಾವೊಸ್​ ಗೆ ಮುಖ್ಯಮಂತ್ರಿ ಕಮಲನಾಥ್​ ತೆರಳಿರುವ ನಡುವೆ ನಡೆದ ನಾಯಕರ ನಡುವಿನ ಭೇಟಿ ಕುತೂಹಲಕ್ಕೆ ಕಾರಣವಾಗಿದೆ,

ಇನ್ನು ಭೇಟಿ ಕುರಿತು ಮಾತನಾಡಿದ ನಾಯಕರು ಬಿಜೆಪಿ ನಾಯಕ ಚೌಹಣ್​ ನಾವು ಸರ್ಕಾರದ ಅಭಿವೃದ್ಧಿಗೆ ಬೆಂಬಲಿಸುತ್ತೇವೆ ಎಂದಿದ್ದಾರೆ. ಇದು ನಮಗೆ ಒಂದು ಧನಾತ್ಮಕ ಸಂದೇಶ ಎಂದು ಕಾಂಗ್ರೆಸ್​ ವಕ್ತಾರ ಮನಕ್​ ಅಗರ್​ವಾಲ್​ ತಿಳಿಸಿದ್ದಾರೆ.

ಇದನ್ನು ಓದಿ: ನಾನು ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳನ್ನು ಮೋದಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ; ದೇವೇಗೌಡ ವಾಗ್ದಾಳಿಈ ಬೆಳವಣಿಗೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ಬಿಜೆಪಿ, ಪಕ್ಷ ಮೂಲೆಗುಂಪು ಮಾಡಿರುವುದರಿಂದ ಸಿಂಧಿಯಾ ಅಸಮಾಧಾನಗೊಂಡಿದ್ದಾರೆ ಎಂದು ವ್ಯಾಖ್ಯಾನಿಸಿದೆ.

ಮಧ್ಯಪ್ರದೇಶದಲ್ಲಿ ಸಿಎಂ ರೇಸ್​ನಲ್ಲಿ ಕಮಲನಾಥ್​ ಜೊತೆ ಇದ್ದ ಜ್ಯೋತಿರಾದಿತ್ಯ ಸಿಂದ್ಯಾ ಕೂಡ ಇದ್ದರು. ಸಿಂದ್ಯಾ ಡಿಸಿಎಂ ಆಗಬಹುದು ಎಂಬ ಲೆಕ್ಕಾಚಾರವನ್ನು ರಾಹುಲ್​ ಗಾಂಧಿ ತಲೆಕೆಳಗೆ ಮಾಡಿdರು. ಬಳಿಕ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ರಾಜ್ಯ ರಾಜಕಾರಣದಿಂದ ಹೈ ಕಮಾಂಡ್​ ದೂರವಿರಿಸಿತು. ಇದು ಸಿಂಧ್ಯಾ ಅವರಲ್ಲಿ ಬೇಸರಕ್ಕೂ ಕಾರಣವಾಗಿತ್ತು.

First published: January 22, 2019, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading