• Home
 • »
 • News
 • »
 • national-international
 • »
 • Bharat Jodo: ರಾಹುಲ್ ಯಾತ್ರೆ ಉಲ್ಲೇಖಿಸಿ ಕಾಂಗ್ರೆಸ್​ಗೆ ಮರಳುವ ಸೂಚನೆ ನೀಡಿದ್ರಾ ಸಿಂಧಿಯಾ?

Bharat Jodo: ರಾಹುಲ್ ಯಾತ್ರೆ ಉಲ್ಲೇಖಿಸಿ ಕಾಂಗ್ರೆಸ್​ಗೆ ಮರಳುವ ಸೂಚನೆ ನೀಡಿದ್ರಾ ಸಿಂಧಿಯಾ?

ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ರಾಹುಲ್ ಗಾಂಧಿ

ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ರಾಹುಲ್ ಗಾಂಧಿ

2020 ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ)ಯನ್ನು ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಈಗ ಮತ್ತೆ ಅವರ ಹಳೆಯ ಕಾಂಗ್ರೆಸ್ ಪಾರ್ಟಿಗೆ ಹೋಗುವ ಮನಸ್ಸು ಮಾಡಿದ್ದಾರಾ ಅಂತ ಮಾತುಗಳು ಹರಿದಾಡುತ್ತಿವೆ.

 • Trending Desk
 • Last Updated :
 • Rajasthan, India
 • Share this:

  ಜೈಪುರ(ನ.25): ರಾಜಕೀಯ (Politics) ಅಂತ ಹೇಳಿದರೆ ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಿ ಮತ್ತೆ ಕೆಲವು ವರ್ಷಗಳ ನಂತರ ಆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದು ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಅಂತ ಹೇಳಿ ಮತ್ತೆ ಅವರ ಹಳೆಯ ಪಕ್ಷದ ಕಡೆಗೆ ಮುಖ ಮಾಡುವವರನ್ನು ಮತ್ತು ಹಳೆಯ ಪಕ್ಷಕ್ಕೆ ಬಂದು ಸೇರಿಕೊಳ್ಳುವುದು ಹೊಸತೇನಲ್ಲ, ಈ ಹಿಂದಿನಿಂದಲೂ ನಡೆದುಕೊಂಡು ಬಂದ ಬೆಳವಣಿಗೆ. ಆದರೆ ಇಂತಹ ಸಂದರ್ಭದಲ್ಲಿಯಾರು, ಯಾವ ಪಕ್ಷ ತೊರೆದು ಯಾವ ಪಕ್ಷಕ್ಕೆ ಹೋದರು ಅನ್ನೋದಷ್ಟೇ ಮುಖ್ಯವಾಗುತ್ತದೆ. ಅವರೆಷ್ಟು ಪ್ರಭಾವಿಗಳು ಎಂಬುವುದರ ಮೇಲೆ ಈ ವಿಚಾರ ಸದ್ದು ಮಾಡುತ್ತದೆ. 


  ಈ ರಾಜಕೀಯ ನಾಯಕರು ಹೇಗೆ? ಯಾವಾಗ? ತಾವಿರುವಂತಹ ರಾಜಕೀಯ ಪಕ್ಷವನ್ನು ಬದಲಾಯಿಸುತ್ತಾರೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ. ಈಗ ಈ ವಿಚಾರ ಯಾಕೆ ಉಲ್ಲೇಖವಾಗುತ್ತಿದೆ ಎಂದು ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಓಡುವ ಪ್ರಶ್ನೆ.  ವಿಷಯ ಏನೆಂದರೆ 2020 ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ)ಯನ್ನು ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ (Jyotiraditya Scindia) ಅವರು ಈಗ ಮತ್ತೆ ಅವರ ಹಳೆಯ ಕಾಂಗ್ರೆಸ್ (Congress) ಪಾರ್ಟಿಗೆ ಹೋಗುವ ಮನಸ್ಸು ಮಾಡಿದ್ದಾರಾ ಅಂತ ಮಾತುಗಳು ಹರಿದಾಡುತ್ತಿವೆ.


  ಇದನ್ನೂ ಓದಿ: Satish Jarkiholi Hindu Controversy: ಹಿಂದೂ ಪದದ ಅರ್ಥವೇ ಅಶ್ಲೀಲ! ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ


  ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಬಗ್ಗೆ ಏನ್ ಹೇಳಿದ್ರು ಸಿಂಧಿಯಾ?


  ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ "ವೆಲ್ಕಂ” ಅಂತ ಹೇಳಿರುವ ಹೇಳಿಕೆಯು ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಯೇ ಅನ್ನೋ ಅನುಮಾನಗಳನ್ನ ರಾಜಕೀಯ ವಲಯದಲ್ಲಿ ಹುಟ್ಟು ಹಾಕಿರುವುದಂತೂ ನಿಜ. ಸಿಂಧಿಯಾ ಅವರ ಈ ಹೇಳಿಕೆ ಮತ್ತೆ ಕಾಂಗ್ರೆಸ್ ಪಾರ್ಟಿಗೆ ಮರಳುವ ಸೂಚನೆಯಾಗಿರಬಹುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರರು ಹೇಳಿದ್ದಾರೆ.


  ಈಗಾಗಲೇ ಭರದಿಂದ ಶುರುವಾದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಬುಧವಾರ ಬೆಳಿಗ್ಗೆ ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ್ ಜಿಲ್ಲೆಯ ಬೋದರ್ಲಿ ಗ್ರಾಮಕ್ಕೆ ತಲುಪಿತ್ತು. ಆಗ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರು ನವೆಂಬರ್ 23 ರಂದು ನಡೆದ ಆ ಬೃಹತ್ ಮೆರವಣಿಗೆಯನ್ನು ಉಲ್ಲೇಖಿಸಿ, "ಮಧ್ಯಪ್ರದೇಶದಲ್ಲಿ ಎಲ್ಲರಿಗೂ ಸ್ವಾಗತವಿದೆ" ಎಂದು ಹೇಳಿದ್ದರು.


  ಕಾಂಗ್ರೆಸ್ ವಕ್ತಾರರು ಸಿಂಧಿಯಾ ಹೇಳಿಕೆ ಬಗ್ಗೆ ಹೇಳಿದ್ದೇನು?


  "ಇದು 'ಘರ್ ವಾಪ್ಸಿ' ಯ ಸೂಚನೆಯಾಗಬಹುದು" ಎಂದು ಕಾಂಗ್ರೆಸ್ ವಕ್ತಾರರಾದ ಮತ್ತು ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ (ಎಚ್‌ಪಿಸಿಸಿ) ಮಾಜಿ ಅಧ್ಯಕ್ಷರಾದ ಕುಲದೀಪ್ ಸಿಂಗ್ ರಾಥೋಡ್ ಅವರು ಹೇಳಿದ್ದಾರೆ.


  rahul gandhi ran with school stident s in the bharat jodo yatra held in telangana ach
  ಮಕ್ಕಳೊಂದಿಗೆ ರಾಹುಲ್ ಗಾಂಧಿ ಓಟ


  ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜನರು ಅಸಮಾಧಾನಗೊಂಡಿರುವುದರಿಂದ ಹಿಮಾಚಲಪ್ರದೇಶ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗಿರುವುದು ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು.


  ಇದನ್ನೂ ಓದಿ: Chandrashekhar Death Case: ಡಯಾಟಮ್ ವರದಿಯಲ್ಲಿದ್ಯಾ ಚಂದ್ರಶೇಖರ್ ಸಾವಿನ ಕಾರಣ? ವಿನಯ್ ಗುರೂಜಿಯಿಂದಲೂ ಮಾಹಿತಿ ಪಡೆದ ಪೊಲೀಸರು


  ಬೆಲೆ ಏರಿಕೆ, ಹಣದುಬ್ಬರ ಮತ್ತು ಆಡಳಿತೇತರ ವಿಷಯಗಳನ್ನು ಕಾಂಗ್ರೆಸ್ ಎತ್ತಿ ತೋರಿಸಿದ ನಂತರ ಕಳೆದ ವರ್ಷ ಮೂರು ವಿಧಾನಸಭಾ ಚುನಾವಣೆಗಳು ಮತ್ತು ಒಂದು ಲೋಕಸಭಾ ಉಪಚುನಾವಣೆಯಲ್ಲಿ ಸೋತಾಗ ಬಿಜೆಪಿಯ ಸೋಲಿನ ಪ್ರಯಾಣ ಶುರುವಾಗಿದೆ ಎಂದು ರಾಥೋಡ್ ಹೇಳಿದರು.


  ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ?


  ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆ ನಿರ್ಧಾರವನ್ನು ಶಾಸಕರು ಮತ್ತು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.


  ಇನ್ನೂ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಅವರ ಪಾರ್ಟಿಯ ಕಡೆಗೆ ಎಳೆದುಕೊಳ್ಳುವುದರ ಬಗ್ಗೆ ಕೇಳಿದ ಪ್ರಶ್ನೆಗೆ ರಾಥೋಡ್ ಅವರು "ಹೀಗೆ ಮಾಡುವ ಸಾಧ್ಯತೆಗಳು ತುಂಬಾನೇ ಇವೆ, ಆದರೆ ನಮ್ಮ ಸದಸ್ಯರ ಸಮಗ್ರತೆಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಹೇಳಿದರು. ಪಕ್ಷದ ನಾಯಕರು ಶಿಸ್ತಿನಿಂದ ಇರಬೇಕು ಎಂದು ಕರೆ ನೀಡಿದ ಅವರು, ಇನ್ನೂ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

  Published by:Precilla Olivia Dias
  First published: