ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ

ಇನ್ನು ವಿಚಾರಣೆ ನಡೆಸಲು ಸಮಿತಿಯನ್ನು ರಚಿಸುವ ತೀರ್ಮಾನವನ್ನು ಇಡೀ ಕೋರ್ಟ್ ತೆಗೆದುಕೊಂಡಿದೆ. ಕೋರ್ಟ್​​ ಸಮಿತಿ ರಚನೆ ನಿರ್ಧಾರ ಕೈಗೊಳ್ಳುವಾಗ ರಂಜನ್ ಗೊಗೊಯ್ ಅವರನ್ನು ಹೊರತುಪಡಿಸಿ ಇನ್ನೆಲ್ಲರೂ ಹಾಜರಿದ್ದರು ಎನ್ನಲಾಗಿದೆ.

Ganesh Nachikethu | news18
Updated:April 24, 2019, 2:23 PM IST
ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ
ರಂಜನ್​​ ಗೊಗೊಯ್​​
Ganesh Nachikethu | news18
Updated: April 24, 2019, 2:23 PM IST
ನವದೆಹಲಿ(ಏ.24): ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂಕೊರ್ಟ್​ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಿದೆ. ಈ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಎಳೆಯಲು ರಚಿಸಲಾಗಿರುವ ತ್ರಿಸದಸ್ಯ ಸಮಿತಿಯಲ್ಲಿ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇದ್ಧಾರೆ. ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ಸಮಿತಿಯಲ್ಲಿ ಎನ್‌.ವಿ.ರಮಣ ಹಾಗೂ ಇಂದಿರಾ ಬ್ಯಾನರ್ಜಿ ಇದ್ದಾರೆ.

ಕೋರ್ಟ್​​ ಮಾಜಿ ನೌಕರರೊಬ್ಬರು ರಂಜನ್ ಗೊಗೊಯ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈಗಾಗಲೇ ಈ ಮಹಿಳೆಗೆ ವಿಚಾರಣೆಗೆ ಹಾಜರಾಗುವಂತೆ ಸಮಿತಿ ನೋಟಿಸ್​​ ನೀಡಿದೆ. ಪ್ರಕರಣದ ವಿಚಾರಣೆ ಮುಗಿಸಲು ಗಡುವು ನಿಗದಿಪಡಿಸಲಾಗಿಲ್ಲ. ಆರಂಭಿಕ ವಿಚಾರಣೆ ಹಂತದಲ್ಲಿ ಏನು ತಿಳಿದು ಬರಲಿದೆ ಎಂಬುದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾವುದು ಎಂದು ಬೊಬ್ಡೆ ತಿಳಿಸಿದ್ದಾರೆ.

ಇನ್ನು ವಿಚಾರಣೆ ನಡೆಸಲು ಸಮಿತಿಯನ್ನು ರಚಿಸುವ ತೀರ್ಮಾನವನ್ನು ಇಡೀ ಕೋರ್ಟ್ ತೆಗೆದುಕೊಂಡಿದೆ. ಕೋರ್ಟ್​​ ಸಮಿತಿ ರಚನೆ ನಿರ್ಧಾರ ಕೈಗೊಳ್ಳುವಾಗ ರಂಜನ್ ಗೊಗೊಯ್ ಅವರನ್ನು ಹೊರತುಪಡಿಸಿ ಇನ್ನೆಲ್ಲರೂ ಹಾಜರಿದ್ದರು ಎನ್ನಲಾಗಿದೆ.

ರಂಜನ್​​ ಗೊಗೊಯ್ ನಂತರದ ಸ್ಥಾನದಲ್ಲಿದ್ದ ಹಿರಿಯರಾದ ಎಸ್.ಎ.ಬೊಬ್ಡೆ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಈ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್​​.ವಿ ರಮಣ ಹಾಗೂ ಇಂದಿರಾ ಬ್ಯಾನರ್ಜಿ ಇರಲಿದ್ದಾರೆ. "ನನ್ನ ನಂತರದ ಸ್ಥಾನದಲ್ಲಿ ರಮಣ ಇದ್ದಾರೆ. ಆದ್ದರಿಂದ ಅವರನ್ನು ಆರಿಸಿಕೊಂಡಿದ್ದೇನೆ. ಇನ್ನು ಒಬ್ಬರು ಮಹಿಳಾ ನ್ಯಾಯಮೂರ್ತಿಯಾಗಿ ಬ್ಯಾನರ್ಜಿ ಇರಲಿದ್ದಾರೆ" ಎಂದು ಬೊಬ್ಡೆ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಸಿಜೆಐ ವಿರುದ್ಧ ಆರೋಪ ಪಿತೂರಿ ಎಂದು ವಕೀಲರು ಸಾಕ್ಷಿ ಸಲ್ಲಿಸಿದ ಬಳಿಕ ಸಿಬಿಐ, ಐಟಿ, ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ಸಮನ್ಸ್​ ನೀಡಿದ ಸುಪ್ರೀಂಕೋರ್ಟ್​

ಮೊದಲಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂತು. ಪ್ರಕರಣದಲ್ಲಿ ಸ್ವತಂತ್ರ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಲೇಖಕರು ಆಗ್ರಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಭೂಷಣ್, ಅರುಣಾ ರಾಯ್, ಮೇಧಾ ಪಾಟ್ಕರ್, ಲೇಖಕಿ ಅರುಂಧತಿ ರಾಯ್, ಪತ್ರಕರ್ತ ಪಿ.ಸಾಯಿನಾಥ್, ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ಸಿಪಿಐ ನಾಯಕಿ ಆಯನಿ ರಾಜಾ ಸೇರಿದಂತೆ 33 ಜನರು ಈ ಸಂಬಂಧ ಹೇಳಿಕೆ ಬಿಡುಗಡೆಗೊಳಿಸಿದ್ದರು. ಈ ಆಧಾರದ ಮೇಲೆ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ: ಸಿಜೆಐ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಜೆಟ್​ ಏರ್​ವೇಸ್​ ಸಂಸ್ಥಾಪಕರ ವ್ಯವಸ್ಥಿತ ಪಿತೂರಿ ಎಂದ ವಕೀಲರಿಗೆ ಸುಪ್ರೀಂಕೋರ್ಟ್​ ನೋಟಿಸ್​
Loading...

ಅಲ್ಲದೇ ಇದು ನ್ಯಾಯಾಂಗಕ್ಕೆ ತೀವ್ರ ಸಂಕಷ್ಟದ ಸಮಯ. ಸುಪ್ರೀಂಕೋರ್ಟ್ ಈ ಪ್ರಕರಣವನ್ನು ವಿಶ್ವಾಸಾರ್ಹವಾಗಿ ನಿರ್ವಹಿಸಬೇಕು. ಇಲ್ಲದೇ ಹೋದಲ್ಲಿ ಜನರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳಲಿದ್ದಾರೆ. ತಮ್ಮ ವಿರುದ್ಧದ ಆರೋಪದ ವಿಚಾರಣೆ ನಡೆಸಲು ಗೊಗೊಯ್​​ ತಮ್ಮದೇ ನೇತೃತ್ವದಲ್ಲಿ ವಿಶೇಷ ನ್ಯಾಯಪೀಠ ರಚಿಸಿರುವುದು ಕಾನೂನಿಗೆ ವಿರುದ್ಧ. ಹಾಗಾಗಿ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಮಹಿಳೆ ನೇತೃತ್ವದಲ್ಲಿ ಸ್ವತಂತ್ರ ಸಮಿತಿ ರಚಿಸಿಸಬೇಕು. ವಿಚಾರಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇವೆ' ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
-------------
First published:April 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...