Lokpal: ದೇಶದ ಮೊದಲ ಲೋಕಪಾಲ್ ಆಗಿ ಪ್ರಮಾಣವಚನ ಸ್ವೀಕರಿಸಿದ ನಿವೃತ್ತ ನ್ಯಾ.ಪಿ.ಸಿ.ಘೋಷ್

JUSTICE GHOSE FIRST LOKPAL: ಭ್ರಷ್ಟಾಚಾರದ ಆರೋಪ ಕೇಳಿಬಂದರೆ ಹಾಲಿ ಮತ್ತು ಮಾಜಿ ಪ್ರಧಾನಿ, ಸಚಿವರು ಮತ್ತು ಸಂಸದರನ್ನು ತನಿಖೆಗೆ ಒಳಪಡಿಸುವ ಅಧಿಕಾರ ಲೋಕಪಾಲ್​ಗೆ ಇದೆ.

HR Ramesh | news18
Updated:March 23, 2019, 11:55 AM IST
Lokpal: ದೇಶದ ಮೊದಲ ಲೋಕಪಾಲ್ ಆಗಿ ಪ್ರಮಾಣವಚನ ಸ್ವೀಕರಿಸಿದ ನಿವೃತ್ತ ನ್ಯಾ.ಪಿ.ಸಿ.ಘೋಷ್
ಲೋಕಪಾಲ್​ ನ್ಯಾ.ಪಿ.ಸಿ.ಘೋಷ್ ಅವರಿಗೆ ಪ್ರಮಾಣವಚನ ಬೋಧಿಸಿದ ರಾಷ್ಟ್ರಪತಿ (ಚಿತ್ರ ಕೃಪೆ: ಎಎನ್​ಐ)
HR Ramesh | news18
Updated: March 23, 2019, 11:55 AM IST
ನವದೆಹಲಿ: ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ದೇಶದ ಮೊದಲ ಲೋಕಪಾಲ್ ಆಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 66 ವರ್ಷದ ನ್ಯಾ.ಘೋಷ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಕಳೆದ ವಾರ ಆಯ್ಕೆಯಾಗಿದ್ದರು. ಲೋಕಪಾಲ್​ ನೇಮಿಸುವಂತೆ ಸುಪ್ರೀಂಕೋರ್ಟ್​ ಆಯ್ಕೆ ಸಮಿತಿಗೆ ಗಡುವು ನಿಗದಿ ಮಾಡಿತ್ತು.

ಇದನ್ನು ಓದಿ: ನ್ಯಾ| ಪಿನಾಕಿ ಚಂದ್ರ ಘೋಷ್ ಭಾರತದ ಮೊದಲ ಲೋಕಪಾಲ್ ಆಗಿ ನೇಮಕ

ಭ್ರಷ್ಟಾಚಾರದ ಆರೋಪ ಕೇಳಿಬಂದರೆ ಹಾಲಿ ಮತ್ತು ಮಾಜಿ ಪ್ರಧಾನಿ, ಸಚಿವರು ಮತ್ತು ಸಂಸದರನ್ನು ತನಿಖೆಗೆ ಒಳಪಡಿಸುವ ಅಧಿಕಾರ ಲೋಕಪಾಲ್​ಗೆ ಇದೆ.


Loading...First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...