ಕ್ರೌರ್ಯಕ್ಕೆ ಬಲಿಯಾದ ನಾಯಿ ಬ್ರೂನೊ ಪರ ದನಿ ಎತ್ತಿದ ಪ್ರಾಣಿಪ್ರಿಯ ಸೆಲೆಬ್ರಿಟಿಗಳು

ಕೇರಳದಲ್ಲಿ ನಾಯಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ದಿಗಂತ್ ಸೇರಿದಂತೆ ಸಾಕಷ್ಟು ಮಂದಿ ಕಂಬನಿ ಮಿಡಿಯುವುದರೊಂದಿಗೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. 

ಜಸ್ಟಿಸ್​ ಫಾರ್​ ಬ್ರೂನೊ

ಜಸ್ಟಿಸ್​ ಫಾರ್​ ಬ್ರೂನೊ

  • Share this:
ಕೇರಳದಲ್ಲಿ ಗರ್ಭಿಣಿ ಆನೆಯೊಂದು ಆಹಾರ ಅರಸುತ್ತಾ ಬಂದು ಸ್ಫೋಟಕವಿಟ್ಟಿದ್ದ ಹಣ್ಣನ್ನು ತಿಂದು ನರಳಿ ಸಾವನ್ನಪ್ಪಿದ್ದ ಘಟನೆ ಇನ್ನೂ ನೆನಪಿನಿಂದ ಮಾಸಿಲ್ಲ. ಅದಾಗಲೇ ಮತ್ತೆ ಕೇರಳದಲ್ಲಿ ಮತ್ತೊಂದು ಮೂಕ ಪ್ರಾಣಿಯ ಮೇಲೆ ಪೈಶಾಚಿಕತೆ ತೋರಿರುವ ಘಟನೆ ನಡೆದಿದೆ. ಅದಿಮಲತ್ತರ ಬೀಚ್​ನಲ್ಲಿ ನಾಯಿಯನ್ನು ಮೀನುಗಾರಿಕೆಯ ದೋಣಿಯ ಕೊಂಡಿಗೆ ನಾಯಿಯನ್ನು ನೇತಾಡಿಸಲಾಗಿತ್ತು. ನಂತರ ಅದನ್ನು ಮನಸ್ಸಿಗೆ ಬಂದಂತೆ ಬಡಿದು ಕೊಂದಿದ್ದಾರೆ. ಇಂತಹ ಕ್ರೌರ್ಯವನ್ನು ತೋರಿರುವುದು ಅಪ್ರಾಪ್ತ ಬಾಲಕರು. ನಾಯಿಯನ್ನು ಹೀಗೆ ಕೊಲ್ಲಲು ಕಾರಣವಾಗಿದ್ದು, ಕ್ರಿಸ್ತರಾಜ್​ ಎಂಬುವರ ಮೇಲಿನ ಹಗೆತನಕ್ಕೆ ಎನ್ನಲಾಗಿದೆ. ಆತನ 8 ವರ್ಷದ ಸಾಕು ನಾಯಿಯನ್ನು ಮೂವರು ಮನಬಂದಂತೆ ಥಳಿಸಿ, ಸಾಯಿಸಿರುವ ಘಟನೆ ನಡೆದಿದೆ. ಮೂವರು ಆರೋಪಿಗಳು ನಾಯಿ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ವಿಡಿಯೋ ವೈರಲ್​ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. 

ಫೇಸ್​ಬುಕ್​ನಲ್ಲಿ ನಾಯಿಯ ಮಾಲೀಕ ಬ್ರೂನೊವನ್ನು ಕೊಂದ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅದು ವೈರಲ್​ ಆಗಿದೆ. ಈ ಸಂಬಂಧ ಕ್ರಿಸ್ತರಾಜು ಅವರ ಸಂಬಂಧಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ, ವಿಡಿಯೋ ವೈರಲ್​ ಆಗಿ ಸಾಮಾಜಿಕ ಜಾಲತಾಣದಲ್ಲಿ ಘಟನೆಯನ್ನು ಸಾಕಷ್ಟು ಮಂದಿ ಖಂಡಿಸಿದ ನಂತರ ಪೊಲೀಸರು ಈ ಸಂಬಂಧ ಕ್ರಮ ಜರುಗಿಸಿದ್ದು, ಮೂರವರನ್ನು ವಶಕ್ಕೆ ಪಡೆದಿದ್ದಾರೆ.

ಕೇರಳದಲ್ಲಿ ನಾಯಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ದಿಗಂತ್ ಸೇರಿದಂತೆ ಸಾಕಷ್ಟು ಮಂದಿ ಕಂಬನಿ ಮಿಡಿಯುವುದರೊಂದಿಗೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. 
ಜಸ್ಟಿಸ್​ ಫಾರ್​ ಬ್ರೂನೊ


ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಪ್ರಿಯರು ಜಸ್ಟಿಸ್ ಫಾರ್ ಬ್ರುನೋ ಎಂಬ ಅಭಿಯಾನ ಆರಂಭಿಸಿದರು. ಇದಕ್ಕೆ ಸೆಲೆಬ್ರಿಟಿಗಳೂ ಜೊತೆಯಾದರು. ಪೊಲೀಸರನ್ನು ಮೂವರು ವಶಕ್ಕೆ ಪಡೆದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನ ಇನ್ನೂ ಮುಂದುವರೆಯುತ್ತಿದೆ. ಕಾರಣ, ಕೆಲವೇ ದಿನಗಳಲ್ಲಿ ಆರೋಪಿಗಳು ಹೊರ ಬರುತ್ತಾರೆ. ಆದರೆ ಈ ಗಘಟೆಯನ್ನು ಮರೆಯಲಾಗುವುದಿಲ್ಲ ಎನ್ನುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ.

dog was mercilessly beaten . Dog beten to death, dog dies, dog beaten in kerala, animal cruelty ನಾಯಿ ಮೇಲೆ ಹಲ್ಲೆ, ನಾಯಿ ಹೊಡೆದು ಕೊಲೆ, ಕೇರಳ, ಪ್ರಾಣಿ ಹಿಂಸೆ, Rashmika Mandanna, Diganth and Samyuktha Hegde, Justice For Bruno sandalwood celebrated demanding for strict action in this case ae
ಜಸ್ಟಿಸ್​ ಫಾರ್​ ಬ್ರೂನೊ


ನಟಿ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ದಿಗಂತ್ ಸೇರಿದಂತೆ ಸಾಕಷ್ಟು ಮಂದಿ ಕಂಬನಿ ಮಿಡಿಯುವುದರೊಂದಿಗೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.

dog was mercilessly beaten . Dog beten to death, dog dies, dog beaten in kerala, animal cruelty ನಾಯಿ ಮೇಲೆ ಹಲ್ಲೆ, ನಾಯಿ ಹೊಡೆದು ಕೊಲೆ, ಕೇರಳ, ಪ್ರಾಣಿ ಹಿಂಸೆ, Rashmika Mandanna, Diganth and Samyuktha Hegde, Justice For Bruno sandalwood celebrated demanding for strict action in this case ae
ಜಸ್ಟಿಸ್​ ಫಾರ್​ ಬ್ರೂನೊ


ಇನ್ನು ಈ ಘಟನೆ ಸಂಬಂಧ ಚಾರ್ಜ್​ ಶೀಟ್​ ದಾಖಲಿಸುವಂತೆ ತಿರುವನಂತಪುರಂ ಹೈಕೋರ್ಟ್​ ನಿರ್ದೇಶನ ನೀಡಿದೆ. ಜೊತೆಗೆ ಈ ಘಟನೆ ಬಗ್ಗೆ ಸರ್ಕಾರದ ಸ್ಪಷ್ಟನೆಯನ್ನು ಕೋರಿ ಆದೇಶಿಸಿದ್ದು, ಹತ್ತು ದಿನಗಳ ಒಳಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಸಿ ನೀಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ: ಶುಭಾ ಪೂಂಜಾ ಆಟದಲ್ಲಿದ್ರೂ ಲೆಕ್ಕಕ್ಕಿಲ್ಲವಂತೆ: ಮಹತ್ವ ಕಳೆದುಕೊಳ್ಳುತ್ತಿದ್ದಾರಾ ಹ್ಯಾಪಿ ಬೇಬಿ..!

ಕ್ರಿಸ್ತರಾಜು ಅವರ ನಾಯಿ ಹಲ್ಲೆ ಮಾಡಿದ ಆರೋಪಿಗಳ ಮೀನುಗಾರಿಕಾ ದೋಣಿ ಪಕ್ಕದಲ್ಲಿ ಪ್ರತಿ ದಿನ ಈ ನಾಯಿ ಮಲಗುತ್ತಿತ್ತು. ಸೋಮವಾರ ಈ ನಾಯಿಯನ್ನು ಮೀನುಗಾರಿಕೆ ನಡೆಸುವ ಕೊಂಡಿಗೆ ನೇತು ಹಾಕಿ ಅದನ್ನು ಮನಬಂದಂತೆ ಥಳಿಸಿದ್ದಾರೆ. ಬಳಿಕ ನಾಯಿ ಸಾವನ್ನಪ್ಪಿದಾಗ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ.
Published by:Anitha E
First published: