ಜ್ಞಾನವಾಪಿ ಮಸೀದಿ (Gyanavapi Masjid) ವಿವಾದ ದಿನ ಕಳೆದಂತೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ವಿವಾದಾತ್ಮಕವಾಗಿರುವ (Controversial) ಪ್ರಕರಣದಲ್ಲಿ ಬಹಳಷ್ಟು ಗೊಂದಲಗಳಿದ್ದು ಮಸೀದಿ ಆವರಣದಲ್ಲಿ ಈಗಾಗಲೇ ವಿಡಿಯೋ ಸರ್ವೇಯನ್ನು (Video Survey) ಕೂಡಾ ನಡೆಸಲಾಗಿದೆ. ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿರುವ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ತಾವು ಕೈಬರಹದ ಬೆದರಿಕೆ ಪತ್ರವನ್ನು (Threat letter) ಸ್ವೀಕರಿಸಿದ್ದಾರೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ವಾರಣಾಸಿ ಪೊಲೀಸ್ ಕಮಿಷನರೇಟ್‌ಗೆ ಬರೆದ ಪತ್ರದಲ್ಲಿ, ದಿವಾಕರ್ ಅವರು ಇಸ್ಲಾಮಿಕ್ ಆಗಾಜ್ ಚಳವಳಿಯ ಪರವಾಗಿ ಕಾಶಿಫ್ ಅಹ್ಮದ್ ಸಿದ್ದಿಕಿ ಅವರು ಬರೆದಿರುವ ಪತ್ರವನ್ನು ನೋಂದಾಯಿತ ಅಂಚೆ (Register Post) ಮೂಲಕ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ವಾರಣಾಸಿ ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಅವರು ನ್ಯಾಯಾಧೀಶರು ಪತ್ರದ ಸ್ವೀಕೃತಿಯನ್ನು ಖಚಿತಪಡಿಸಿದ್ದಾರೆ. ಉಪ ಪೊಲೀಸ್ ಆಯುಕ್ತ ವರುಣ ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಗಣೇಶ್ ಹೇಳಿದರು.
ಒಂಬತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ
ನ್ಯಾಯಾಧೀಶರ ಭದ್ರತೆಗಾಗಿ ಒಟ್ಟು ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪತ್ರದ ಉದ್ದೇಶಿತ ಪ್ರತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪತ್ರದಲ್ಲೇನಿದೆ?
ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ, "ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಪರಿಶೀಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ನೀವು ಹೇಳಿಕೆ ನೀಡಿದ್ದೀರಿ, ನೀವು ಮೂರ್ತಿಪೂಜೆ ಮಾಡುವವರು, ನೀವು ಮಸೀದಿಯನ್ನು ಮಂದಿರವೆಂದು ಘೋಷಿಸುತ್ತೀರಿ, ನಿಮ್ಮಿಂದ ಯಾವುದೇ ಮುಸಲ್ಮಾನ ಈಗ ಸರಿಯಾದ ನಿರ್ಧಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. 'ಕಾಫಿರ್, ಮೂರ್ತಿಪೂಜಕ್' ಹಿಂದೂ ನ್ಯಾಯಾಧೀಶರು. ಎಂದು ಪತ್ರದಲ್ಲಿ ಬರೆಯಲಾಗಿದೆ.
ವೀಡಿಯೊಗ್ರಾಫಿ ಸಮೀಕ್ಷೆಗೆ ಆದೇಶ
ಏಪ್ರಿಲ್ 26 ರಂದು, ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ದಿವಾಕರ್ ಅವರು ಜ್ಞಾನವಾಪಿ ಸಂಕೀರ್ಣದ ವೀಡಿಯೊಗ್ರಾಫಿ ಸಮೀಕ್ಷೆಗೆ ಆದೇಶಿಸಿದ್ದರು. ಸಮೀಕ್ಷೆಯ ವರದಿಯನ್ನು ಮೇ 19 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಕಳೆದ ತಿಂಗಳು ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್‌ನ ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಕಡೆಯವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?
ವಝೂಖಾನಾ ಜಲಾಶಯದಲ್ಲಿನ ನೀರಿನ ಕಾರಂಜಿ ಕಾರ್ಯವಿಧಾನದ ಭಾಗವಾಗಿದೆ ಎಂದು ಹೇಳಿರುವ ಮಸೀದಿ ಸಮಿತಿಯ ಸದಸ್ಯರು ಈ ಹಕ್ಕನ್ನು ವಿವಾದಿಸಿದ್ದಾರೆ, ಭಕ್ತರು ನಮಾಜ್ ಸಲ್ಲಿಸುವ ಮೊದಲು ಧಾರ್ಮಿಕ ಶುದ್ಧೀಕರಣವನ್ನು ಮಾಡಲು ಬಳಸುತ್ತಾರೆ.
ಜ್ಞಾನವ್ಯಾಪಿ ಮಸೀದಿಯು ಉತ್ತರ ಪ್ರದೇಶದ (Uttar Pradesh) ಬನಾರಸ್‌ನಲ್ಲಿದೆ (Banaras). ಇದನ್ನು 1669ರಲ್ಲಿ ಮೊಘಲ ದೊರೆ ಔರಂಗಜೇಬ (Aurangzeb) ಕೆಡವಿದ ಹಳೆಯ ಶಿವ ದೇವಾಲಯದ (Shiva Temple) ಸ್ಥಳದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Gyanvapi Mosque: 'ಆವರಣ'ದಲ್ಲಿ ‘ಗ್ಯಾನವಾಪಿ’, ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ಬಗ್ಗೆ ಅಂದೇ ಉಲ್ಲೇಖಿಸಿದ್ರು S.L ಭೈರಪ್ಪ
ಈ ಸ್ಥಳವು ಮೂಲತಃ ವಿಶ್ವೇಶ್ವರ ದೇವಸ್ಥಾನವನ್ನು ದಿದ್ದು, ಜೊತೆಯಲ್ಲಿ ಬಸಾರಸ್‌ನ ಅತ್ಯಂತ ಪ್ರಸಿದ್ಧ ಬ್ರಾಹ್ಮಣ ಕುಟುಂಬದ ನಾರಾಯಣ ಭಟ್ಟರು ಸ್ಶಾಪಿಸಿದರು ಎನ್ನಲಾಗಿದೆ. ಜ್ಞಾನವಾಪಿ ಮಸೀದಿಯನ್ನು ಬನಾರಸ್‌ನ ವಿಶ್ವೇಶ್ವರ ದೇವಸ್ಥಾನ ಎಂದು ಜೇಮ್ಸ್ ಪ್ರಿನ್ಸೆಸ್ ಎನ್ನುವವರು ಚಿತ್ರಿಸಿದ್ದಾರೆ. ಈಗ ಕೆಡವಲಾದ ದೇವಾಲಯದ ಮೂಲ ಗೋಡೆ ಇಂದಿಗೂ ಮಸೀದಿಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ