ಮೆಕ್ಕಾ ಮಸೀದಿ ಸ್ಫೋಟ: ಸ್ವಾಮಿ ಅಸೀಮಾನಂದ ಮತ್ತಿತರರನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರ ರಾಜೀನಾಮೆ


Updated:April 16, 2018, 8:18 PM IST
ಮೆಕ್ಕಾ ಮಸೀದಿ ಸ್ಫೋಟ: ಸ್ವಾಮಿ ಅಸೀಮಾನಂದ ಮತ್ತಿತರರನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರ ರಾಜೀನಾಮೆ
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಾತಿನಿಧಿಕ ಚಿತ್ರ

Updated: April 16, 2018, 8:18 PM IST
- ನ್ಯೂಸ್18 ಕನ್ನಡ

ಹೈದರಾಬಾದ್(ಏ. 16): ಮೆಕ್ಕಾ ಮಸೀದಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ನಾಲ್ವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲಾ ನ್ಯಾಯಾಧೀಶರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಘಟನೆ ನಡೆದಿದೆ. ಹೈದರಾಬಾದ್​ನ ಭಯೋತ್ಪಾದನಾ ನಿಗ್ರಹ ವಿಶೇಷ ಕೋರ್ಟ್​ನ ನ್ಯಾಯಾಧೀಶ ಕೆ. ರವೀಂದರ್ ರೆಡ್ಡಿ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ರಾಜೀನಾಮೆ ಕೊಟ್ಟಿರುವ ಸಂದರ್ಭ ಮಾತ್ರ ಹಲವು ಅನುಮಾನ ಹುಟ್ಟುಹಾಕಿದೆ.

ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳು ಇರದ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಖುಲಾಸೆಗೊಳಿಸಿ ನ್ಯಾ| ರವೀಂದರ್ ರೆಡ್ಡಿ ತೀರ್ಪು ನೀಡಿದ್ದರು. ಕೋರ್ಟ್​ನ ಈ ತೀರ್ಪಿಗೆ ಹಲವರು ಆಘಾತ ವ್ಯಕ್ತಪಡಿಸಿದರು. ತೀರ್ಪು ಬಂದ ಬೆನ್ನಲ್ಲೇ ರಾಜಕೀಯ ಸಮರ ಕೂಡ ಶುರುವಾಗಿತ್ತು. ಕೇಸರಿ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

2007ರ ಮೇ 8 ಶುಕ್ರವಾದಂದು ಹೈದರಾಬಾದ್​ನ ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡು 9 ಜನರು ಬಲಿಯಾಗಿದ್ದರು, 58 ಮಂದಿಗೆ ಗಾಯಗಳಾಗಿದ್ದವು. ಈ ಘಟನೆಯಲ್ಲಿ ಬಲಪಂಥೀಯ ಸಂಘಟನೆಯ ಕೈವಾಡ ಇರುವ ಆರೋಪವಿದೆ. ಆ ಘಟನೆ ನಡೆದ ಬೆನ್ನಲ್ಲೇ ಉದ್ರಿಕ್ತ ಜನರು ತೀವ್ರ ಪ್ರತಿಭಟನೆ ನಡೆಸಿದಾಗ, ಅವರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಫೈರಿಂಗ್​ನಲ್ಲಿ ಇನ್ನೂ ಐವರು ಸಾವನ್ನಪ್ಪಿದ್ದರು. ಸಿಬಿಐ ಮತ್ತು ಎನ್​ಐಎ ಸಂಸ್ಥೆಗಳು ಈ ಘಟನೆಯ ತನಿಖೆ ನಡೆಸಿ 10 ಜನರ ವಿರುದ್ಧ ಆರೋಪ ದಾಖಲಿಸಿದವು. ಈ ಹತ್ತರಲ್ಲಿ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ದೇವೇಂದ್ರ ಗುಪ್ತಾ, ಭರತ್ ಮೋಹನಲಾಲ ಮತ್ತು ರಾಜೇಂದ್ರ ಚೌಧರಿ ಅವರನ್ನು ಮಾತ್ರ ಬಂಧಿಸಲಾಗಿತ್ತು. ಒಬ್ಬ ಆರೋಪಿ ಸಾವನ್ನಪ್ಪಿದರೆ, ಇನ್ನಿಬ್ಬರು ಆರೋಪಿಗಳ ಇದೂವರೆಗೂ ಪತ್ತೆಯಾಗಿಲ್ಲ.

ಇನ್ನು, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ದೇವೇಂದ್ರ ಗುಪ್ತಾ ವಿರುದ್ಧ ಮತ್ತೊಂದು ಕೇಸ್ ಇದೆ. ಅಜ್ಜೇರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಗುಪ್ತ ಸೇರಿದಂತೆ ಇಬ್ಬರಿಗೆ ರಾಜಸ್ಥಾನ ಕೋರ್ಟ್ ಜೀವವಧಿ ಶಿಕ್ಷೆ ವಿಧಿಸಿದೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ