Kerala: ಮೋಹಿನಿಯಾಟ್ಟಂ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ ಜಡ್ಜ್ ಪಾಷಾ.. ಕಲಾವಿದೆಯ ಕಣ್ಣೀರು..!

ಮೋಹಿನಿಯಾಟ್ಟಂ ಪ್ರದರ್ಶನವನ್ನು (Mohiniyattam Performance) ಮಧ್ಯದಲ್ಲೇ ನಿಲ್ಲಿಸುವಂತೆ ಹೇಳುವುದು ನನಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ಕೇರಳದ ಕಲೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಖ್ಯಾತ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್ (Dr Neena Prasad) ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ಡಾ.ನೀನಾ ಪ್ರಸಾದ್

ಡಾ.ನೀನಾ ಪ್ರಸಾದ್

  • Share this:
ಕೊಚ್ಚಿ: ಹೃದಯದಲ್ಲಿ ದುಃಖ ಮಡುಗಟ್ಟಿದೆ, ಕಣ್ಣೀರು ನಿಲ್ಲುತ್ತಿಲ್ಲ.. ನನ್ನ ಮೋಹಿನಿಯಾಟ್ಟಂ ಪ್ರದರ್ಶನವನ್ನು (Mohiniyattam Performance) ಮಧ್ಯದಲ್ಲೇ ನಿಲ್ಲಿಸುವಂತೆ ಹೇಳುವುದು ನನಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ಕೇರಳದ ಕಲೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಖ್ಯಾತ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್ (Dr Neena Prasad) ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ನೀನಾ ಪ್ರಸಾದ್ ಅವರ ನೃತ್ಯ ಪ್ರದರ್ಶನವನ್ನು ಕೇರಳದ ನ್ಯಾಯಾಧೀಶ ಡಾ.ಕಲಾಂ ಪಾಷಾ (Dr Kalam Pasha) ಅವರು ಅರ್ಧಕ್ಕೆ ತಡೆದು, ನೃತ್ಯದಿಂದ ಡಿಸ್ಟರ್ಬ್​​​ ಆಗುತ್ತಿದೆ ಎಂದು ಆರೋಪಿಸಿದ್ದರು. ಘಟನೆ ಬಗ್ಗೆ ನ್ಯೂಸ್​ 18 ಜೊತೆ ಮಾತನಾಡಿದ ಕಲಾವಿದೆ, ಘಟನೆಯಿಂದ ತಮಗಾದ ನೋವನ್ನು ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ..?

ಸರ್ಕಾರಿ ಮೋಯನ್ ಎಲ್‌ಪಿ ಶಾಲೆಯ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಧೀಶ ಡಾ.ಕಲಾಂ ಪಾಷಾ ಅವರು ವಾಸಿಸುತ್ತಿದ್ದಾರೆ. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದೆ ನೀನಾ ಮೋಹಿನಿಯಾಟ್ಟಂ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಕರೆ ಮಾಡಿದ ಜಿಲ್ಲಾ ನ್ಯಾಯಾಧೀಶರು ಕಾರ್ಯಕ್ರಮವನ್ನು ನಿಲ್ಲಿಸುವಂತೆ ದೂರಿದ್ದಾರೆ. ತಮಗೆ ಕಾರ್ಯಕ್ರಮದಿಂದ ತೊಂದರೆ ಆಗುತ್ತಿದೆ ಎಂದು ಪೊಲೀಸರಿಗೆ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೃತ್ಯ ಪ್ರದರ್ಶನವನ್ನು ಮೊಟಕುಗೊಳಿಸಲಾಗಿದೆ. ಘಟನೆ ಬಗ್ಗೆ ಕಲಾವಿದೆ ನೀನಾ ಫೇಸ್​​ ಬುಕ್​​ ನಲ್ಲಿ ಬರೆದುಕೊಂಡು ಅಳಲು ತೋಡಿಕೊಂಡಿದ್ದಾರೆ.ಜೀವನದ ಅತ್ಯಂತ "ಕಹಿ ಅನುಭವ"

ಮಾರ್ಚ್ 19 ರ ಘಟನೆಯನ್ನು ನೀನಾ ಅವರು ತನ್ನ ಜೀವನದ ಅತ್ಯಂತ "ಕಹಿ ಅನುಭವ" ಎಂದು ಉಲ್ಲೇಖಿಸಿದ್ದಾರೆ. ಶ್ರೀಚಿತ್ರನ್ ಎಂ.ಜೆ ಅವರು ಬರೆದ ‘ಇತಿಹಾಸಗಳೇ ತೇಡಿ (ಇತಿಹಾಸದ ಹುಡುಕಾಟದಲ್ಲಿ) ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ನೃತ್ಯ ವಾಚನಗೋಷ್ಠಿಯನ್ನು ನಡೆಸಲು  ನೀನಾ ಅವರನ್ನು ಆಹ್ವಾನಿಸಲಾಯಿತು. "ನಾನು 'ಸಖ್ಯಮ್' (ಸ್ನೇಹ) ಎಂಬ ವಿಷಯಾಧಾರಿತ ಪ್ರಸ್ತುತಿಯನ್ನು ಪ್ರದರ್ಶಿಸಬೇಕಾಗಿತ್ತು. ಇದು ಅರ್ಜುನ ಮತ್ತು ಕೃಷ್ಣನ ನಿಕಟ ಬಾಂಧವ್ಯದ ಬಗ್ಗೆ ಹೇಳುತ್ತದೆ. ಈ ನಿರ್ದಿಷ್ಟ ತುಣುಕು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಇದು ಮೋಹಿನಿಯಾಟದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಗುರುತಿಸಲಾಗಿದೆ. ಸುಮಾರು 40 ನಿಮಿಷಗಳ ಕಾಲ ನಡೆದ ನನ್ನ ಎರಡನೇ ಪ್ರದರ್ಶನದ ನಂತರ, ಆಯೋಜಕರು ನನ್ನನ್ನು ಪ್ರದರ್ಶನ ನಿಲ್ಲಿಸುವಂತೆ ವಿನಂತಿಸಿದರು. ಕಾರ್ಯಕ್ರಮವನ್ನು ಕೊನೆಗೊಳಿಸಲು ಪೊಲೀಸರು ಕೇಳಿದ್ದಾರೆ ಎಂದು ಅವರು ನನಗೆ ಹೇಳಿದರು.

ಕಾರ್ಯಕ್ರಮದ ಸಂಗೀತ ಜೋರಾಗಿ ನಡೆದಿದೆ ಎಂದು ಪೊಲೀಸರಿಗೆ ದೂರು ಬಂದಿರುವುದಾಗಿ ಸಂಘಟಕರು ನೀನಾ ಅವರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: TMC ಮುಖಂಡನ ಕೊಲೆಯ ಸೇಡಿಗೆ 8 ಜನರ ಸಜೀವ ದಹನ, ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಸಂಗೀತ ಜೋರಾಗಿ ಇರಲಿಲ್ಲ..

ನನ್ನದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಪಿಟೀಲು, ಮೃದಂಗದಂತಹ ಮೃದುವಾದ ಸಂಗೀತ ವಾದ್ಯಗಳನ್ನು ಬಳಸಲಾಗಿತ್ತು. ನಾನು ಪ್ರದರ್ಶನದ ಕೊನೆ ಹಂತವನ್ನು ತಲುಪಲು ಹೊರಟಿದ್ದೆ, ಆಗ ಪೊಲೀಸರು ಒಳಗೆ ಬಂದಾಗ ತುಂಬಾ ಅವಮಾನಕರವಾಗಿತ್ತು. ನನಗಷ್ಟೇ ಅಲ್ಲ, ಈ ಘಟನೆಯು ಭಾರತದ ಸಾಂಸ್ಕೃತಿಕ ಭ್ರಾತೃತ್ವ ಮತ್ತು ಕೇರಳಕ್ಕೆ ಮಾಡಿದ ಅವಮಾನ ಎಂದು ನೀನಾ ಕಿಡಿಕಾರಿದ್ದಾರೆ.

ವಿವಾದಾತ್ಮಕ ನ್ಯಾಯಾಧೀಶರು

ನ್ಯಾಯಮೂರ್ತಿ ಕಲಾಂ ಪಾಷಾ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ.  ಸೆಪ್ಟೆಂಬರ್ 2021 ರಲ್ಲಿ, ಪಾಷಾ ಅವರ ಪತ್ನಿ ಅವರು ಉಚ್ಚರಿಸಿದ ತಲಾಖ್ ಅನ್ನು ಅಮಾನ್ಯಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಇವರ ಅರ್ಜಿಯನ್ನು ವಜಾಗೊಳಿಸಿತು.

ನ್ಯಾಯಾಧೀಶ ಡಾ.ಕಲಾಂ ಪಾಷಾ


ಘಟನೆಯನ್ನು ಖಂಡಿಸಿದ ಕೇರಳ ಸ್ಪೀಕರ್​

ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಸ್ಪೀಕರ್ ಎಂ ಬಿ ರಾಜೇಶ್ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಹಾಗೂ ಕಲಾವಿದರಿಗೆ ಮಾಡಿದ ಅವಮಾನ ಎಂದು ಘಟನೆಯನ್ನು ಖಂಡಿಸಿದ್ದಾರೆ. ಕಾರ್ಯಕ್ರಮವನ್ನು ನಿಲ್ಲಿಸಲು ಸಂಘಟಕರು ಒತ್ತಾಯಿಸಿರುವುದು ಅತ್ಯಂತ ದುರದೃಷ್ಟಕರ. ರಾತ್ರಿ 9.30ರವರೆಗೂ ಕಾರ್ಯಕ್ರಮ ನಡೆಸಲು ಅವರಿಗೆ ಅನುಮತಿ ಇತ್ತು. ಅವರಿಗೆ ಮುಂದುವರಿಯಲು ಅವಕಾಶ ನೀಡಬೇಕಿತ್ತು. ನ್ಯಾಯಾಧೀಶ ಪಾಷಾ ಅವರ ಕೃತ್ಯ ಖಂಡಿತವಾಗಿಯೂ ಅವರ ಘನತೆಗೆ ತಕ್ಕುದಲ್ಲ ಎಂದು ರಾಜೇಶ್ ನ್ಯೂಸ್ 18 ಗೆ ತಿಳಿಸಿದರು.

ಬುಧವಾರ ಪಾಲಕ್ಕಾಡ್ ನ್ಯಾಯಾಲಯದ ಮುಂದೆ ನ್ಯಾಯಾಧೀಶ ಪಾಷಾ ವಿರುದ್ಧ ವಕೀಲರ ಗುಂಪು ಪ್ರತಿಭಟನೆಯನ್ನು ಆಯೋಜಿಸಿತ್ತು.
Published by:Kavya V
First published: