ಕೊನೆಕ್ಷಣದಲ್ಲಿ ಚಾಣಾಕ್ಷವಾಗಿ ಕಾಬೂಲ್​​ನಿಂದ ಭಾರತಕ್ಕೆ ಹಿಂತಿರುಗಿದ ಪತ್ರಕರ್ತೆ: ಭಯಾನಕ ಅನುಭವವನ್ನು ಬಿಚ್ಚಿಟ್ಟ ಬಸು

Journalist Nayanima Basu : ತಾಲಿಬಾನಿಗಳು ಗುಂಪನ್ನು ನಿಯಂತ್ರಿಸಲು ಗುಂಡು ಹಾರಿಸಲು ಪ್ರಾರಂಭಿಸಿದರು. ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಗೆ ಗುಂಡು ತಾಗಿತು ಎಂದು ತಮ್ಮ ಭಯಾನಕ ಅನುಭವವನ್ನು ನಯನಿಮಾ ಅಕ್ಷರ ರೂಪಕ್ಕಿಳಿಸಿದ್ದಾರೆ.

ಪತ್ರಕರ್ತೆ ನಯನಿಮಾ ಬಸು

ಪತ್ರಕರ್ತೆ ನಯನಿಮಾ ಬಸು

  • Share this:
ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳು ಕಾಬೂಲ್​​ನ ಮೇಲೆ‌ ಸಂಪೂರ್ಣ ಪ್ರಭುತ್ವ ಸಾಧೀಸಿತು.  ಸಂದಿಗ್ಧ ಪರಿಸ್ಥಿತಿ ಮಧ್ಯೆ ಕಾಬೂಲ್​​ನಿಂದ ಭಾರತಕ್ಕೆ ಮರಳಿದ ಅನುಭವವನ್ನು ಭಾರತೀಯ ಪತ್ರಕರ್ತೆ ನಯನಿಮಾ ಬಸು ವಿವರಿಸಿದ್ದಾರೆ. ದಿ ಪ್ರಿಂಟ್‌ಗಾಗಿ ಬರೆದ ಲೇಖನದಲ್ಲಿ ಪತ್ರಕರ್ತೆ ನಯನಿಮಾ ಬಸು ಕಾಬೂಲ್‌ಗೆ ಹೋಗುವಾಗ ಅಪಾಯಕಾರಿಯಾಗಿತ್ತು. ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಹೊರಬರಲು ನಾನು ಊಹಿಸದ ಕೌಶಲ್ಯಗಳ ಅಗತ್ಯವಿದೆ ಎಂದು ಮನವರಿಕೆಯಾಗಿದೆ ಎಂದು ತಮ್ಮ ಅನುಭವನ್ನು ಬಿಚ್ಚಿಟ್ಟಿದ್ದಾರೆ.

ಆಗಸ್ಟ್ 16 ರಂದು ಬೆಳಿಗ್ಗೆ 11 ಗಂಟೆಗೆ ಏರ್ ಇಂಡಿಯಾ ವಿಮಾನ AI0244 ನಲ್ಲಿ ನಯನಿಮಾ ಭಾರತಕ್ಕೆ ಹಿಂತಿರುಗಬೇಕಿತ್ತು. ಸೋಮವಾರ ಮುಂಜಾನೆ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಿದಾಗ, ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ತಾಲಿಬಾನ್ ವಶಪಡಿಸಿಕೊಂಡಿತ್ತು. ಏರ್​​ಪೋರ್ಟ್​​​ ಮುಖ್ಯದ್ವಾರದಲ್ಲಿ 8-10 ಶಸ್ತ್ರಸಜ್ಜಿತ ವಾಹನಗಳು ನಿಂತಿದ್ದವು. ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಮುಖ್ಯ ಟರ್ಮಿನಲ್ ಕಟ್ಟಡಗಳ ಹೊರಗೆ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದರು.

ವಿಮಾನವನ್ನು ಹಿಡಿಯಲು ಸಾವಿರಾರು ಜನರು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು. ಅನೇಕ ಅಫ್ಘಾನ್ ಕುಟುಂಬಗಳು ಚಿಕ್ಕ ಮಕ್ಕಳೊಂದಿಗೆ ಕುಳಿತಿದ್ದವು. ಉಗ್ರರು ಸತತವಾಗಿ ಗಾಳಿಯಲ್ಲಿ ಗುಂಡು ಹಾರಿಸುತ್ತಲೇ ಇದ್ದರು. ಬೆಳಗ್ಗೆ 7 ಗಂಟೆಗೆ ವಿಮಾನ ನಿಲ್ದಾಣದ ಒಳಗೆ ಜನ ಓಡಲಾರಂಭಿಸಿದರು. ಗೇಟ್‌ಗಳನ್ನು ತೆರೆದಾಗ ನೂಕುನುಗ್ಗಲನ್ನು ತಡೆಯಲು ತಾಲಿಬಾನಿಗಳು ಗುಂಡು ಹಾರಿಸಿದರು.

ಗುಂಡು ಹಾರಿಸಿದ ಶಬ್ದದಿಂದ ಜನರು ಬೆಚ್ಚಿಬೀಳುತ್ತಿದ್ದ ಭಯಾನಕ ಪರಿಸ್ಥಿತಿಯನ್ನು ಬಸು ವಿವರಿಸಿದ್ದಾರೆ. ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಯಿತು. ಆದಾಗ್ಯೂ, ಕಾಬೂಲ್‌ನಿಂದ ವಿಮಾನಗಳನ್ನು ಹಿಡಿಯಲು ಹೆಚ್ಚು ಹೆಚ್ಚು ಜನರು ವಿಮಾನ ನಿಲ್ದಾಣಕ್ಕೆ ದೌಡಾಯಿಸುತ್ತಿದ್ದರು. ವಿಮಾನ ನಿಲ್ದಾಣವನ್ನು ಕಾಯುತ್ತಿದ್ದ ತಾಲಿಬಾನಿಯರು ಕೋಪಗೊಂಡು ಜನರ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು.

ಗುಂಡಿನ ದಾಳಿ ಮಧ್ಯೆ ನಾನು ಇದ್ದಾಗ ಭಾರತೀಯ ರಾಯಭಾರ ಕಚೇರಿ ಹಾಗೂ ದೆಹಲಿಯ MEA ಪ್ರಧಾನ ಕಚೇರಿಯನ್ನು ಸಂಪರ್ಕಿಸಿದೆ. ಆಗ ಅವರು ನನಗೆ ಮೂರು ಆಯ್ಕೆಗಳನ್ನು ನೀಡಿದರು. ನಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಹಿಂತಿರುಗುವುದು, ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶಕ್ಕೆ ಹೋಗುವುದು  ಅಥವಾ ಭಾರತೀಯ ರಾಯಭಾರ ಕಚೇರಿಗೆ ಹೋಗುವುದು. ನಾನು ರಾಯಭಾರ ಕಚೇರಿಗೆ ಹೋಗಲು ನಿರ್ಧರಿಸಿದೆ.

ನಾನು ಹೊರ ಹೋಗುವಾಗ ಕೂಗಾಡುತ್ತಾ ನನ್ನ ಬಳಿ ಬಂದ ತಾಲಿಬಾನಿಗಳು ನನ್ನನ್ನು ಪರಿಶೀಲನೆಗೆ ಒಳಪಡಿಸಿದರು. ನಾನು ಹೆದರಿದ್ದರೂ, ತಾಳ್ಮೆಯಿಂದ ಇದ್ದೆ. ನಾನು ಭಾರತದ ಪತ್ರಕರ್ತ  ಇಲ್ಲಿನ ಪರಿಸ್ಥಿತಿಯ ವರದಿ ಮಾಡಲು ಬಂದಿದ್ದೇ ಎಂದು ಹೇಳಿದ ಕೂಡಲೇ ಅವರು ನನ್ನನ್ನು ಬಿಟ್ಟು ಕಳುಹಿಸಿದರು.

ಇದನ್ನೂ ಓದಿ: ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಅಫ್ಘಾನಿಸ್ತಾನದ ಮಹಿಳೆ

ನಂತರ ಬೆಳಿಗ್ಗೆ 11:15 ರ ಸುಮಾರಿಗೆ ಹೊರಗಿನಿಂದ ಬಂದ ಭಾರೀ ಜನಸಮೂಹವು ವಿಮಾನ ನಿಲ್ದಾಣದ ಗೇಟ್‌ ಧ್ವಂಸಗೆ ಪ್ರಯತ್ನಿಸಿತು. ಗುಂಪನ್ನು ನಿಯಂತ್ರಿಸಲು ಗುಂಡು ಹಾರಿಸಲು ತಾಲಿಬಾನಿ ಪ್ರಾರಂಭಿಸಿದರು. ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಗೆ ಗುಂಡು ತಾಗಿತು ಎಂದು ತಮ್ಮ ಭಯಾನಕ ಅನುಭವವನ್ನು ನಯನಿಮಾ ಅಕ್ಷರ ರೂಪಕ್ಕಿಳಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಹೊರ ಬಂದು ಕ್ಯಾಬ್ ಹಿಡಿದು ಭಾರತೀಯ ರಾಯಭಾರ ಕಚೇರಿಯನ್ನು ತಲುಪಲು ಯಶಸ್ವಿಯಾದೆ. ತಾಲಿಬಾನಿಗಳು ನನ್ನನ್ನು ತಡೆದು ಪ್ರವೇಶ ನಿರಾಕರಿಸಿದರು. ಅವರ ಮುಖ್ಯ ನಾಯಕನೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿ ಒಳಗೆ ಹೋಗುವಲ್ಲಿ ನಾನು ಯಶಸ್ವಿಯಾದೆ.

ಭಾರತೀಯ ರಾಯಭಾರ ಕಚೇರಿ ಬಳಿ ಸಾಕಷ್ಟು ಜನ ಜಮಾಯಿಸಿದ್ದರು.ಅಳುತ್ತಿರುವ ಒಬ್ಬ ಮಹಿಳೆ ನನ್ನನ್ನು ಸಂಪರ್ಕಿಸಿದಳು. ಅವಳು ತನ್ನ ಸಹೋದರನನ್ನು ಭೇಟಿ ಮಾಡಲು ಭಾರತಕ್ಕೆ ಭೇಟಿ ನೀಡಲು ಬಯಸಿದ್ದಾಳೆ ಎಂದು ಹೇಳಿದಳು. ಭಾರತದಲ್ಲಿ ಕೆಲಸ ಮಾಡಲು ವೀಸಾಗಳಿಗೆ ಅರ್ಜಿ ಸಲ್ಲಿಸಲು ಇಬ್ಬರು ಹುಡುಗರು ಬಯಸಿದ್ದರು. ನಂತರ ನನ್ನ ಇತರ ಸಹೋದ್ಯೋಗಿ ಪತ್ರಕರ್ತರ ಸ್ನೇಹಿತರ ಸಹಾಯದಿಂದ ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್‌ಗಳ ಮೂಲಕ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.

ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ನಿಲ್ಲಿಸಿದ್ದ ಭಾರತೀಯ ವಾಯುಪಡೆಯ ಸಿ -17 ಗ್ಲೋಬ್ ಮಾಸ್ಟರ್ ವಿಮಾನವನ್ನು ನಯನಿಮಾ ಹತ್ತಿದರು. ಮಂಗಳವಾರ ಸಂಜೆ ಗುಜರಾತ್‌ನ ಜಾಮ್‌ನಗರ ಬಳಿಕ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ. ಕಾಬೂಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿರುವ ನಯನಿಮಾ ತಮ್ಮ ಅನುಭವನ್ನು ಬಿಚ್ಚಿಟ್ಟಿದ್ದಾರೆ.
Published by:Kavya V
First published: