ಗಾಂಧಿ ಎಂಬ ಹೆಸರು ಬಿಟ್ಟು ಬೇರೇನಿದೆ?: ಪ್ರಶ್ನಿಸಿದ ಪತ್ರಕರ್ತನಿಗೆ ಮಾತಿನಲ್ಲೇ ತಿರುಗೇಟು ನೀಡಿದ ರಾಗಾ


Updated:August 26, 2018, 5:29 PM IST
ಗಾಂಧಿ ಎಂಬ ಹೆಸರು ಬಿಟ್ಟು ಬೇರೇನಿದೆ?: ಪ್ರಶ್ನಿಸಿದ ಪತ್ರಕರ್ತನಿಗೆ ಮಾತಿನಲ್ಲೇ ತಿರುಗೇಟು ನೀಡಿದ ರಾಗಾ

Updated: August 26, 2018, 5:29 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.26): ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸಾಮಾನ್ಯವಾಗಿ ಅಭಿವೃದ್ಧಿಶೀಲ ಅಭಿವೃದ್ಧಿಯನ್ನು ಹೊರತುಪಡಿಸಿ ಬೇರೇನು ಇಲ್ಲ ಎಂಬ ಮಾತುಗಳನ್ನೆದುರಿಸುತ್ತಿರುತ್ತಾರೆ. ಸದ್ಯ ಬ್ರಿಟನ್​ನ ಅಧಿಕೃತ ಪ್ರವಾಸದಲ್ಲಿರುವ ರಾಹುಲ್​ ಗಾಂಧಿಯನ್ನು ಈ ಪ್ರಶ್ನೆ ಬೆಂಬಿಡದೆ ಹಿಂಬಾಲಿಸಿದೆ. ಇಲ್ಲಿ ರಾಹುಲ್​ ಗಾಂಧಿಗೆ ನಿಮ್ಮಲ್ಲಿ ಗಾಂಧಿ ಎಂಬ ಸರ್​ನೇಮ್​(ಉಪನಾಮ) ಹೊರತುಪಡಿಸಿ ಬೇರೇನು ಇದೆ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ ರಾಹುಲ್​ ಗಾಂಧಿ ತನ್ನ ಮಾತುಗಳನ್ನು ಆಲಿಸದೇ ಯಾವುದೇ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಅಲ್ಲದೇ ಪತ್ರಕರ್ತರಿಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದ ರಾಹುಲ್​ ಗಾಂಧಿ ತನ್ನ ಕ್ಷಮತೆಯನ್ನು ನೋಡಿ ಅಭಿಪ್ರಾಯ ಬೆಳೆಸಿಕೊಳ್ಳಬೇಕೇ ವಿನಃ, ಕುಟುಂಬದ ಹಿನ್ನೆಯಲ್ಲಿ ನಿಂದಿಸಬಾರದೆಂದು ಹೇಳಿದ್ದಾರೆ.

ನೀವು ನನ್ನ ಕುಟುಂಬವನ್ನು ನಿಂದಿಸುತ್ತೀರಾ ಅಥವಾ ನನ್ನ ಕ್ಷಮತೆಯನ್ನೇ ಆಧಾರವಾಗಿಟ್ಟುಕೊಂಡು ನನ್ನ ಕುರಿತಾಗಿ ಅಭಿಪ್ರಾಯ ಬೆಳೆಸಿಕೊಳ್ಳುತ್ತೀರಾ ಎಂಬುವುದು ನಿಮಗೆ ಬಿಟ್ಟದ್ದು. ಅದು ನಿಮ್ಮ ಇಚ್ಛೆ ಎಲ್ಲವೂ ನಿಮ್ಮನ್ನು ಅವಲಂಭಿಸಿದೆ, ನನ್ನನ್ನು ಅಲ್ಲ

ರಾಹುಲ್​ ಗಾಂಧಿ, ಕಾಂಗ್ರೆಸ್​ ಅಧ್ಯಕ್ಷ


ಬ್ರಿಟನ್​ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ "ನನ್ನ ತಂದೆ ಪ್ರಧಾನಮಂತ್ರಿಯಾದ ಬಳಿಕ ನನ್ನ ಕುಟುಂಬದ ಸದಸ್ಯರು ಅಧಿಕಾರ ಪಡೆದುಕೊಂಡಿಲ್ಲ. ಈ ವಿಚಾರವನ್ನು ಎಲ್ಲರೂ ಮರೆತಿದ್ದಾರೆ ಎಂದಿದ್ದಾರೆ. ಅಲ್ಲದೇ "ಹೌದು ನಾನು ಒಂದು(ಗಾಂಧಿ) ಕುಟುಂಬದಲ್ಲಿ ಹುಟ್ಟಿದ್ದೇನೆ ಇದು ನಿಜ. ಆದರೆ ನಾನು ಏನು ಹೇಳುತ್ತಿದ್ದೇನೆ ಎಂದು ಕೆಳಿಸಿಕೊಳ್ಳಿ. ಸಮಸ್ಯೆಗಳ ಕುರಿತು ನನ್ನೊಂದಿಗೆ ಮಾತನಾಡಿ. ವಿದೇಶಾಂಗ ನೀತಿ, ಅರ್ಥಶಾಸ್ತ್ರ, ಭಾರತದ ಅಭಿವೃದ್ಧಿ, ಕೃಷಿ ವಿಚಾರದ ಕುರಿತು ನನ್ನ ಬಳಿ ಬಹಿರಂಗವಾಗಿ ಹಾಗೂ ಸ್ವತಂತ್ರವಾಗಿ ಮಾತನಾಡಬಹುದು. ನನ್ನ ಬಳಿ ಯಾರು ಬೇಕಾದರೂ ಪ್ರಶ್ನೆ ಕೇಳಬಹುದು. ಬಳಿವಷ್ಟೇ ನಾನೇನು ಎಂಬುವುದನ್ನು ನಿರ್ಧರಿಸಿ" ಎಂದಿದ್ದಾರೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...