• Home
  • »
  • News
  • »
  • national-international
  • »
  • Joshimath: 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ, ಫೋಟೋ ಬಿಡುಗಡೆ ಮಾಡಿದ ಇಸ್ರೋ

Joshimath: 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ, ಫೋಟೋ ಬಿಡುಗಡೆ ಮಾಡಿದ ಇಸ್ರೋ

12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ

12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ

ಇಸ್ರೋ ವರದಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂ ಕುಸಿತದ ಪ್ರಮಾಣ ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 9 ಸೆಂ.ಮೀ ಮುಳುಗಿದೆ. ಆದರೆ ಡಿಸೆಂಬರ್ 27, 2022 ಮತ್ತು ಜನವರಿ 8, 2023 ರ ನಡುವೆ ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳಲ್ಲಿ ಜೋಶಿಮಠ 5.4 ಸೆಂ.ಮೀ. ವರೆಗೂ ಮುಳುಗಿದೆ ಎಂದು ಮಾಹಿತಿ ನೀಡಿದೆ.

ಮುಂದೆ ಓದಿ ...
  • News18 Kannada
  • Last Updated :
  • Uttarakhand (Uttaranchal), India
  • Share this:

ಡೆಹ್ರಾಡೂನ್: ಕಳೆದ ಕೆಲವು ದಿನಗಳಿಂದ ಕುಸಿತ ಕಾಣುತ್ತಿರುವ ಉತ್ತರಾಖಂಡದ ಜೋಶಿಮಠದ (Joshimath) ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಮುಳುಗಡೆಯಾಗಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space Research Organisation ) ರಾಷ್ಟ್ರೀಯ ದೂರಸಂವೇದಿ ಕೇಂದ್ರ (National Remote Sensing Centre​) ಜೋಶಿಮಠದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದು ಡಿಸೆಂಬರ್ 27ರಿಂದ ಜನರವರಿ 8ರ ವರೆಗೆ ಕೇವಲ 12 ದಿನಗಳಲ್ಲಿ 5.4 ಸೆಂಟಿ ಮೀಟರ್ ಮುಳುಗಡೆಯಾಗಿದೆ ಎಂದು ಮಾಹಿತಿ ನೀಡಿದೆ.


ಜನವರಿ 2, 2022 ರಂದು ಸಂಭವಿಸಿದ ಕ್ಷಿಪ್ರ ಭೂ ಕುಸಿತದಿಂದ ಬೃಹತ್ ಮಣ್ಣು ಮುಳುಗುವಿಕೆ ಸಂಭವಿಸಿದೆ ಎಂದು ಇಸ್ರೋ ಸಾಕ್ಷಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ಕುಸಿತ ಸಂಭವಿಸಿದೆ. ಜೋಶಿಮಠ-ಔಲಿ ರಸ್ತೆಯ ಬಳಿ ಮುಳುಗುವಿಕೆಯ ಕೇಂದ್ರಬಿಂದುವಾಗಿದ್ದು, ಈ ರಸ್ತೆ ಸಂಪೂರ್ಣ ನಾಶವಾಗಲಿದೆ ಎಂದು ಇಸ್ರೋ ವರದಿಯಲ್ಲಿ ಉಲ್ಲೇಖಿಸಿದೆ.


12 ದಿನಗಳಲ್ಲಿ 5.4 ಸೆಂ.ಮೀ ಕುಸಿತ


ಇಸ್ರೋ ವರದಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂ ಕುಸಿತದ ಪ್ರಮಾಣ ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 9 ಸೆಂ.ಮೀ ಮುಳುಗಿದೆ. ಆದರೆ ಡಿಸೆಂಬರ್ 27, 2022 ಮತ್ತು ಜನವರಿ 8, 2023 ರ ನಡುವೆ ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳಲ್ಲಿ ಜೋಶಿಮಠ 5.4 ಸೆಂ.ಮೀ. ವರೆಗೂ ಮುಳುಗಿದೆ ಎಂದು ಮಾಹಿತಿ ನೀಡಿದೆ.


ಇದನ್ನೂ ಓದಿ: Joshimath: ಜೋಶಿಮಠ ಆಯ್ತು, ಈಗ ಅಲೀಗಢದಲ್ಲೂ ಹಲವು ಮನೆಗಳಲ್ಲಿ ಬಿರುಕು, ಆತಂಕದಲ್ಲಿ ಜನತೆ


ಇಸ್ರೋ ವರದಿ ಆಧರಿಸಿ ರಕ್ಷಣಾ ಕಾರ್ಯ


ಜೋಶಿಮಠದಲ್ಲಿ ಮುಳು ಗಡೆಯಾಗುತ್ತಿರುವ ಪ್ರದೇಶಗಳ ಚಿತ್ರಗಳನ್ನು NRSC ಬಿಡುಗಡೆ ಮಾಡಿದೆ. ಇದರಲ್ಲಿ ಸೇನಾ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನವು ಸೇರಿದ್ದು, ಇವುಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ. ಇಸ್ರೋದ ಪ್ರಾಥಮಿಕ ವರದಿಯನ್ನು ಆಧರಿಸಿ ಉತ್ತರಾಖಂಡ ಸರ್ಕಾರವು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಿದೆ. ಅಪಾಯದ ಸ್ಥಳದಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.


4000 ಜನರ ಸ್ಥಳಾಂತರ


ಬದ್ರಿನಾಥದಂತಹ ಜನಪ್ರಿಯ ಯಾತ್ರಾಸ್ಥಳಗಳ ಹೆಬ್ಬಾಗಿಲು ಎಂದು ಕರೆಯಲ್ಪಡುವ ಜೋಶಿ ಮಠ ಪಟ್ಟಣದಲ್ಲಿ ಹಲವಾರು ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡು ದುರಂತದ ಅಂಚಿನಲ್ಲಿದೆ. ಇಸ್ರೋ ವರದಿಯ ನಂತರ ಅಲ್ಲಿನ ಸರ್ಕಾರ ಸುಮಾರು 4,000 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸುತ್ತಿದೆ. ಹೋಟೆಲ್​ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, ಸುಮಾರು 678 ಮನೆಗಳು ಅಪಾಯದಲ್ಲಿವೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.


ಕುಸಿಯುತ್ತಿರೋ ಜೋಶಿಮಠದಲ್ಲಿ ಕಟ್ಟಡ ಧ್ವಂಸ ಕಾರ್ಯ ಆರಂಭ


ವಿದ್ಯುತ್ ಸ್ಥಾವರ ಕಾಮಗಾರಿ ದೂಷಿಸಿದ ಸ್ಥಳೀಯರು


ಜೋಶಿ ಮಠ ಭಾಗದಲ್ಲಿ ಭೂಕುಸಿತವಾಗಿರುವುದಕ್ಕೆ ಅಲ್ಲಿ ನಿವಾಸಿಗಳು ಮತ್ತು ತಜ್ಞರು ಈ ಪ್ರದೇಶದಲ್ಲಿ ನಡೆದಿರುವ ಯೋಜಿತವಲ್ಲದ ಮತ್ತು ಅವ್ಯವಸ್ಥೆಯ ಮೂಲಸೌಕರ್ಯ ಯೋಜನೆಗಳೇ ಕಾರಣ ಎಂದು ದೂಷಿಸಿದ್ದಾರೆ. ಅದರಲ್ಲೂ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದಕ್ಕೆ ಪರ್ವತಗಳಲ್ಲಿ ಸ್ಫೋಟಗಳು ಮತ್ತು ಕೊರೆಯುವಿಕೆ ನಡೆಸಿದ್ದನ್ನು ಪ್ರಸ್ತಾಪಿಸಿ ಕಿಡಿಕಾರಿದ್ದಾರೆ.


ಮಾರುಕಟ್ಟೆ ಬೆಲೆಯಲ್ಲೆ ಪರಿಹಾರ


ಭೂಕುಸಿತದಿಂದಾಗಿ ಜೋಶಿಮಠದಲ್ಲಿ ಮನೆಗಳನ್ನು ತೊರೆಯುತ್ತಿರುವ ಜನರಿಗೆ ಅಲ್ಲಿನ ಮಾರುಕಟ್ಟೆ ದರದಲ್ಲಿ ಪರಿಹಾರವನ್ನು ಒದಗಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಗುರುವಾರ ಭರವಸೆ ನೀಡಿದ್ದಾರೆ. ಸ್ಥಳೀಯರು ಮತ್ತು ತಜ್ಞರ ಜೊತೆ ಸಭೆ ನಡೆಸಿದ ನಂತರ ಅವರು ಪರಿಹಾರದ ಭರವಸೆ ನೀಡಿದ್ದಾರೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ನೇತೃತ್ವದಲ್ಲಿ 19 ಜನರ ಸಮಿತಿ ರಚಿಸಲಾಗಿದೆ. ಅಲ್ಲದೇ ಈ ಸಮಿತಿಯ ಮೂಲಕವೇ ಮನೆ ಕಳೆದುಕೊಂಡ ಕುಟುಂಬಗಳಿಗೆ 1.5 ಲಕ್ಷ ರೂ ತಾತ್ಕಾಲಿಕ ಪರಿಹಾರವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Published by:Rajesha B
First published: