HOME » NEWS » National-international » JOLT TO TMC AHEAD OF BENGAL POLLS REBEL LEADER SUBHENDU ADHIKARY RESIGNS AS TRANSPORT MINISTER MAK

ಬಂಗಾಳ ಚುನಾವಣೆಗೂ ಮುನ್ನವೇ ಟಿಎಂಸಿಗೆ ಶಾಕ್; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಸುಭೇಂಡು ಅಧಿಕಾರಿ

ಪ್ರಸ್ತುತ ಪಕ್ಷ ಮತ್ತು ಸರ್ಕಾರದಿಂದ ದೂರವನ್ನು ಕಾಯ್ದುಕೊಳ್ಳುತ್ತಿರುವ ಸುಭೇಂಡು ಅಧಿಕಾರಿಯು ಎಚ್‌ಆರ್‌ಬಿಸಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರವೇ ರಾಜೀನಾಮೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

news18-kannada
Updated:November 27, 2020, 8:42 PM IST
ಬಂಗಾಳ ಚುನಾವಣೆಗೂ ಮುನ್ನವೇ ಟಿಎಂಸಿಗೆ ಶಾಕ್; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಸುಭೇಂಡು ಅಧಿಕಾರಿ
ಸುಭೇಂಡು ಅಧಿಕಾರಿ.
  • Share this:
ಕೋಲ್ಕತ್ತಾ (ನವೆಂಬರ್​ 27); ಮುಂದಿನ ವರ್ಷ ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ಟಿಎಂಸಿ ಪಕ್ಷ ಸಿದ್ದವಾಗುತ್ತಿದೆ. ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಆಡಳಿರೂಢ ಪಕ್ಷ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ತವಕದಲ್ಲಿದೆ. ಆದರೆ, ಟಿಎಂಸಿ ಪಕ್ಷಕ್ಕೆ ಶಾಕ್ ನೀಡಲು ಮುಂದಾಗಿರುವ ಬಿಜೆಪಿಯೂ ಬಂಗಾಳದ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿದ್ದು ಈ ಬಾರಿ ಪ್ರಬಲ ಪೈಪೋಟಿ ನೀಡುವ ಸೂಚನೆಗಳನ್ನು ಈಗಾಗಲೇ ನೀಡಿದೆ. ಈ ನಡುವೆ ಚುನಾವಣೆಗೆ ಸಿದ್ದವಾಗುತ್ತಿರುವ ಟಿಎಂಸಿ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಇಂದು ಸಾಬೀತಾಗಿದೆ. ಪಕ್ಷದ ಬಂಡಾಯ ನಾಯಕ ಸುಭೇಂಡು ಅಧಿಕಾರಿ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ  ಮಮತಾ ಬ್ಯಾನರ್ಜಿಗೆ ಆಘಾತ ನೀಡಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಿರುವ ಸುವೆಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿರುವ ರಾಜ್ಯಪಾಲ ಜಗದೀಪ್​ ಧಂಖರ್​, "ಇಂದು ಮಧ್ಯಾಹ್ನ 1:05 ಕ್ಕೆ ಟಿಎಂಸಿ ಸರ್ಕಾರದ ಸಚಿವ ಸುಭೇಂಡು ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಸಾಂವಿಧಾನಿಕ ದೃಷ್ಟಿಕೋನದಿಂದ ಪರಿಹರಿಸಲಾಗುವುದು" ಎಂದು ತಿಳಿಸಿದ್ದಾರೆ.


ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರ ಗುರುವಾರ ಹೂಗ್ಲಿ ರಿವರ್ ಬ್ರಿಡ್ಜ್ ಕಮಿಷನರ್‌ಗಳ (ಎಚ್‌ಆರ್‌ಬಿಸಿ) ಅಧ್ಯಕ್ಷ ಸ್ಥಾನದಿಂದ ಸುಭೇಂಡು ಅಧಿಕಾರಿಯ ಬದಲು ಸಂಸದ ಕಲ್ಯಾಣ್ ಬ್ಯಾನರ್ಜಿಯನ್ನು ಆ ಹುದ್ದೆಗೆ ನೇಮಕ ಮಾಡಿದ್ದರು. ಅಲ್ಲದೆ, ಗುರುವಾರ ಸಂಜೆ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಬ್ಯಾನರ್ಜಿಯನ್ನು "ತಕ್ಷಣದಿಂದ ಎಚ್​ಆರ್​ಬಿಸಿ ಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ" ಎಂದು ಉಲ್ಲೇಖಿಸಲಾಗಿತ್ತು.

ಪ್ರಸ್ತುತ ಪಕ್ಷ ಮತ್ತು ಸರ್ಕಾರದಿಂದ ದೂರವನ್ನು ಕಾಯ್ದುಕೊಳ್ಳುತ್ತಿರುವ ಸುಭೇಂಡು ಅಧಿಕಾರಿಯು ಎಚ್‌ಆರ್‌ಬಿಸಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರವೇ ರಾಜೀನಾಮೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಹೋರಾಟ ನಿಲ್ಲಿಸಿ ಮಾತುಕತೆಗೆ ಬನ್ನಿ; ದೆಹಲಿಗೆ ಲಗ್ಗೆ ಇಟ್ಟಿರುವ ರೈತರಿಗೆ ಕರೆ ನೀಡಿದ ಕೃಷಿ ಸಚಿವ ತೋಮರ್

ಟಿಎಂಸಿ ಹಿರಿಯ ನಾಯಕ ಸುಭೇಂಡು ಅಧಿಕಾರಿ ಈ ಹಿಂದೆಯೇ ವೇದಿಕೆಯೊಂದರಲ್ಲಿ ತಾವು ಟಿಎಂಸಿ ಪಕ್ಷವನ್ನು ತೊರೆಯುವ ಬಗ್ಗೆ ಮಾಹಿತಿ ನೀಡಿದ್ದರು. ಆ ಸಂಬಂಧ ಮಾತನಾಡಿದ್ದ ಅವರು, "ಈ ವೇದಿಕೆಯಲ್ಲಿ ನಿಂತು ನಾನು ನನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಘೋಷಿಸಲಾರೆ, ಆದರೆ, ಕೆಲವೊಮ್ಮೆ ಅಭಿಪ್ರಾಯದ ವ್ಯತ್ಯಾಸವು ವಿಭಿನ್ನ ದೃಷ್ಟಿಕೋನ ಮತ್ತು ಪ್ರತ್ಯೇಕತೆಗೆ ಕಾರಣವಾಗುತ್ತದೆ.

ನಾನು ಕಾಲು ಮುರಿದ ಹಕ್ಕಿಯಲ್ಲ ಬದಲಿಗೆ 24 ಗಂಟೆಯೂ ಸಕ್ರೀಯ ರಾಜಕಾರಣಿ. ನಾನು ಯಾವ ಹುದ್ದೆಗಳನ್ನು ಹೊಂದಿದ್ದರೂ ಆ ಎಲ್ಲ ಹುದ್ದೆಗಳಿಗೆ ನಾನು ಆಯ್ಕೆಯಾಗಿದ್ದೇನೆ. ನಾನು ನಾಮನಿರ್ದೇಶಿತ ನಾಯಕನಲ್ಲ. ನಾನು ಜನಸಾಮಾನ್ಯರ ನಡುವೆ ಕೆಲಸ ಮಾಡುವ ನಾಯಕ. ಆಂಫಾನ್ ಚಂಡಮಾರುತ, ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ನಾನು ಜನರೊಂದಿಗೆ ಇದ್ದ ನಾಯಕ" ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
Published by: MAshok Kumar
First published: November 27, 2020, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories