#MissionPaani: ನಾಳೆಯ ಒಳಿತಿಗಾಗಿ ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನ

ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ. ಇಂದು ನೀರಿನ ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಲೇ ಹೋಗುತ್ತಿದೆ. ಸದ್ಯ ಅತ್ಯಂತ ಜಾಗೃತೆಯಿಂದ ನೀರು ಬಳಕೆ ಮಾಡಬೇಕಿದೆ.


Updated:July 2, 2019, 11:45 AM IST
#MissionPaani: ನಾಳೆಯ ಒಳಿತಿಗಾಗಿ ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನ
ಮಿಷನ್​​ ಪಾನಿ

Updated: July 2, 2019, 11:45 AM IST
ಬೆಂಗಳೂರು(ಜುಲೈ.02): ದೇಶಾದ್ಯಂತ ಸುಮಾರು 600 ಮಿಲಿಯನ್​ಗೂ ಹೆಚ್ಚಿನ ಜನ, ಅತಿಯಾದ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಇನ್ನು ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಸಿಗದ ಕಾರಣ, ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಬಲಿಯಾಗುತ್ತಿದ್ದಾರೆ.

ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ. ಇಂದು ನೀರಿನ ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಲೇ ಹೋಗುತ್ತಿದೆ. ಸದ್ಯ ಅತ್ಯಂತ ಜಾಗೃತೆಯಿಂದ ನೀರು ಬಳಕೆ ಮಾಡಬೇಕಿದೆ. ಹಾಗಾಗಿ ನೀರಿನ್ನು ಉಳಿಸಬೇಕೆಂದು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ನ್ಯೂಸ್​​-18 ಸಂಸ್ಥೆ ಮಿಷನ್​ ಪಾನಿ ಎಂಬ ಅಭಿಯಾನ ಹಮ್ಮಿಕೊಂಡಿದೆ. 'ನಾಳೆಯ ಒಳಿತಿಗಾಗಿ ಜಲ ಸಂರಕ್ಷಣೆ (ಮಿಷನ್​​ ಪಾನಿ)' ಎಂಬ ಹೆಸರಿನಲ್ಲಿ ಕ್ಯಾಂಪೇನ್​​ ಮಾಡಲಾಗುತ್ತಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ದೇಶದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಹೆಚ್ಚೂ ಕಡಿಮೆ ಬರಿದಾಗಲಿದೆ. ಇದರಿಂದ 100 ಮಿಲಿಯನ್ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಜಿಡಿಪಿಯು 2050ರ ವೇಳೆಗೆ 6%ರಷ್ಟು ನಷ್ಟ ಹೊಂದುತ್ತದೆ ಎಂದು ವರದಿ ಹೇಳಿದೆ

ಇದನ್ನೂ ಓದಿ: ಬೆಂಗಳೂರಿಗೆ ಶರಾವತಿ ನೀರು; ಶಿವಮೊಗ್ಗದಲ್ಲಿ ಭುಗಿಲೆದ್ದ ಆಕ್ರೋಶ; ಜುಲೈ.10ಕ್ಕೆ ಬಂದ್​

ಭಾರತವು ತನ್ನ ಇತಿಹಾಸದಲ್ಲಿಯೇ ಪ್ರಸ್ತುತ ನೀರಿನ ಅಭಾವದ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ . ಮಾತ್ರವಲ್ಲ ನಾವು ಈಗಿನಿಂದಲೇ ನೀರನ್ನು ರಕ್ಷಿಸುವ ಮತ್ತು ಅದನ್ನು ಹಿತಮಿತವಾದ ಬಳಕೆಗೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ 2030ರ ವೇಳೆಗೆ ನೀರಿನ ಲಭ್ಯತೆ ಇಲ್ಲದೆ ಪರದಾಡಬೇಕಾಗುತ್ತದೆ.

ಹೀಗಾಗಿ ನ್ಯೂಸ್​​-18 ಸಂಸ್ಥೆ ಜಲ ಸಂರಕ್ಷಣೆ (#MissionPaani) ಅಭಿಯಾನ ಶುರು ಮಾಡಿದೆ. ಅಭಿಯಾನದ ಉದ್ದೇಶವೇ ನೀರನ್ನು ಮಿತವಾಗಿ ಬಳಸಿ, ಜನರ ಬದುಕು ಹಸನಾಗಲು ಸಾಧ್ಯವಾಗಿಸುವುದು. ಸದ್ಯ ಸುರಿಯಬಹುದಾದ ಮಳೆ ಭೂಮಿಯ ಮೇಲ್ಭಾಗವನ್ನು ತಂಪಾಗಿಸಬಹುದು. ಆದರೆ, ನೀರನ್ನು ಮಿತವಾಗಿ ಬಳಸಿ, ನಮ್ಮ ಹಳ್ಳಿ ಪಟ್ಟಣ ಮತ್ತು ನಗರಗಳು ಎದುರಿಸುತ್ತಿರುವ ನೀರಿನ ಬವಣೆ ತಗ್ಗಿಸಬೇಕಿರುವುದು ನಮ್ಮ ಹೊಣೆ. ಆದ್ದರಿಂದ ನೀವು ಕೂಡ, ನ್ಯೂಸ್​​-18 ಜಲ ಸಂರಕ್ಷಣೆ ಅಭಿಯಾನದ ಭಾಗವಾಗಬೇಕು ಎಂಬುದು ನಮ್ಮ ಆಶಯ.
First published:July 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...