ಬಿಜೆಪಿ ಜೊತೆ ಮೈತ್ರಿ ಸಾಧಿಸಿ ನಮ್ಮನ್ನು ಉಳಿಸಿ; ಸಿಎಂ ಉದ್ಧವ್​ ಠಾಕ್ರೆಗೆ ಶೀವಸೇನೆ ಶಾಸಕನ ಪತ್ರ!

ಮಹಾರಾಷ್ಟ್ರದ ಮುಂಬೈ, ಥಾಣೆ ಮೊದಲಾದ ಮಹಾನಗರ ಪಾಲಿಕೆಗಳ ಚುಣಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಸಕ ಪ್ರತಾಪ್ ಸರ್ನಾಯಕ್‌‌ ಅವರ ಪತ್ರದಲ್ಲಿನ ಆರೋಪಗಳು ಗಂಭೀರವೆನಿಸಿದೆ.

ಶೀವಸೇನೆ ಶಾಸಕ ಪ್ರತಾಪ್ ಸರ್ನಾಯಕ್.

ಶೀವಸೇನೆ ಶಾಸಕ ಪ್ರತಾಪ್ ಸರ್ನಾಯಕ್.

 • Share this:
  ಮುಂಬೈ (ಜೂನ್ 21); ಬಿಜೆಪಿ ಏತರ ನಾಯಕರನ್ನು ಶಾಸಕ-ಸಚಿವರನ್ನು ಕೇಂದ್ರದ ಬಿಜೆಪಿ ಸರ್ಕಾರ CBI, IT ಮತ್ತು ED ಇಲಾಖೆಗಳನ್ನು ಬಳಸಿಕೊಂಡು ಬೆದರಿಸುತ್ತಿದೆ ಎಂಬ ವಿಚಾರ ಆಗಿಂದಾಗ್ಗೆ ಸುದ್ದಿಯಾಗುತ್ತಿರುತ್ತದೆ. ಆದರೆ, ಇದೇ ರೀತಿ ಮಹಾರಾಷ್ಟ್ರದ ಶಿವಸೇನೆ ಶಾಸಕರ ಮೇಲೂ ಬಿಜೆಪಿ ಬಲ ಪ್ರಯೋಗಿಸುತ್ತಿದೆ ಎಂಬ ಆರೋಪ ಇದೆ. ಈ ಆರೋಪಕ್ಕೆ ಇಂಬು ನೀಡುವಂತೆ ಶೀವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮಹಾರಾಷ್ಟ್ರ  ಸಿಎಂ ಉದ್ಧವ್​ ಠಾಕ್ರೆಗೆ ಬಹಿರಂಗವಾಗಿ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೆ, ಅವರು ಬರೆದ ಪತ್ರದಲ್ಲಿ, "ಬಿಜೆಪಿಯು ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳನ್ನು ಬಳಸಿ ನಮ್ಮನ್ನು ಬೆದರಿಸುತ್ತಿದ್ದು, ನಮ್ಮ ಶಾಸಕರ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು" ಒತ್ತಾಯಿಸಲಾಗಿದೆ.

  ಪ್ರತಾಪ್‌ ಸರ್ನಾಯಕ್ ಥಾಣೆಯ ಮಜಿವಾಡ ಕ್ಷೇತ್ರದ ಶಾಸಕರಾಗಿದ್ದು, ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, "ನನ್ನನ್ನು ಸೇರಿಸಿದಂತೆ ಶಿವಸೇನೆ ನಾಯಕರುಗಳಾದ ಅನಿಲ್‌ ಪರಬ್‌, ರವೀಂದ್ರ ವಾಯ್ಕರ್‌ ಹಾಗೂ ನಮ್ಮ ಕುಟುಂಬದ ಸದಸ್ಯರಿಗೆ ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳು ನಿರಂತರ ಮಾನಸಿಕ ಹಿಂಸೆ ನೀಡುತ್ತಿವೆ" ಎಂದು ಆರೋಪ ಮಾಡಿದ್ದಾರೆ.

  ಪತ್ರದಲ್ಲಿ ಅವರು, "ಶಿವಸೇನೆಯ ನಾಯಕರುಗಳನ್ನು ಇಂತಹ ಮಾನಸಿಕ ಹಿಂಸೆಗಳಿಂದ ರಕ್ಷಿಸಿಕೊಳ್ಳಲು ಶಿವಸೇನೆಯು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ತುಂಬಾ ತಡವಾಗುವ ಮೊದಲು ಶಿವಸೇನೆಯ ಉನ್ನತ ನಾಯಕರು ಈ ಕುರಿತು ಮುಂದುವರೆಯಬೇಕು. ಮೈತ್ರಿ ಅಲ್ಲದಿದ್ದರೂ ಉತ್ತಮ ಬಾಂಧವ್ಯವನ್ನಾದರೂ ಬೆಳೆಸಬೇಕು" ಎಂದು ಆಗ್ರಹಿಸಿದ್ದಾರೆ.

  ಇದನ್ನೂ ಓದಿ: Ramesh Jarkiholi Sex CD Case| ರಮೇಶ್​ ಜಾರಕಿಹೊಳಿ ಸೆಕ್ಸ್​ ಟೇಪ್ ಪ್ರಕರಣ; ಸಂತ್ರಸ್ತ ಯುವತಿ ಪರ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಹಾಜರ್!

  ಮಹಾರಾಷ್ಟ್ರದ ಮುಂಬೈ, ಥಾಣೆ ಮೊದಲಾದ ಮಹಾನಗರ ಪಾಲಿಕೆಗಳ ಚುಣಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಸಕ ಪ್ರತಾಪ್ ಸರ್ನಾಯಕ್‌‌ ಅವರ ಪತ್ರದಲ್ಲಿನ ಆರೋಪಗಳು ಗಂಭೀರವೆನಿಸಿದೆ.

  ಇದನ್ನೂ ಓದಿ: Explained| ಸದ್ಯಕ್ಕೆ ಯಡಿಯೂರಪ್ಪ ಸ್ಥಾನ ಭದ್ರ....ಆದರೂ, ಆ ಮೂವರು ಕಮಲ ನಾಯಕರು ಸಿಎಂ ವಿರುದ್ಧ ಬಂಡಾಯ ಎದ್ದಿರುವುದು ಏಕೆ?

  ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಚುನಾವಣೆಗಳು ನಡೆಯಲಿರುವ ಸಮಯದಲ್ಲೇ ತನ್ನ ರಾಜಕೀಯ ಎದುರಾಳಿಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸಿರುವ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ವಿಧಾನಸಭಾ ಚುನಾವಣೆ ಎದುರಿಸಿದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯದಲ್ಲೂ ಇಂತಹ ವಿದ್ಯಾಮಾನಗಳು ನಡೆದಿದ್ದವು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: