• Home
  • »
  • News
  • »
  • national-international
  • »
  • Johnson & Johnson: ಮಕ್ಕಳ ಪೌಡರ್​ನಿಂದ ಕ್ಯಾನ್ಸರ್ ವಿಚಾರ, 2 ಬಿಲಿಯನ್ ಡಾಲರ್ ದಂಡವನ್ನು ಕೈಬಿಡುವಂತೆ ಮನವಿ

Johnson & Johnson: ಮಕ್ಕಳ ಪೌಡರ್​ನಿಂದ ಕ್ಯಾನ್ಸರ್ ವಿಚಾರ, 2 ಬಿಲಿಯನ್ ಡಾಲರ್ ದಂಡವನ್ನು ಕೈಬಿಡುವಂತೆ ಮನವಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಸ್ಸೌರಿ ನ್ಯಾಯಾಲಯವು ಅಂಡಾಶಯ ಕ್ಯಾನ್ಸರ್ಗೆ ತುತ್ತಾದ 22 ಮಹಿಳೆಯರಿಗೆ ಕಂಪನಿ 74.7 ಬಿಲಿಯನ್ ಡಾಲರ್ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತ್ತು.

  • Share this:

    ಜಾನ್ಸನ್ & ಜಾನ್ಸನ್ ಕಂಪನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸುವುದರಿಂದ ತಾವು ಅಂಡಾಶಯದ ಕ್ಯಾನ್ಸರ್ ಪೀಡಿತರಾಗಿದ್ದೇವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಮಹಿಳೆಯ ಪರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಬೇಕು ಅಥವಾ ರದ್ದು ಪಡಿಸಬೇಕು ಎಂದು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯು ಅಮೆರಿಕ ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಿದೆ. ಈ ಪ್ರಕರಣ 2 ಬಿಲಿಯನ್ ಅಮೇರಿಕನ್ ಡಾಲರ್ ಮೊತ್ತದ್ದಾಗಿದೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ವಕೀಲರು ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ. ಕೆಲವು ಅಸಾಮಾನ್ಯ ಮೈತ್ರಿಗಳಲ್ಲಿ, ಮಾಜಿ ಸ್ವತಂತ್ರ ಸಲಹೆಗಾರ ಕೆನ್ನೆತ್ ಸ್ಟಾರ್ ಸೇರಿದಂತೆ ಹಲವಾರು, ಜಾನ್ಸನ್ & ಜಾನ್ಸನ್ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆಯ ಪರ ನಿಂತಿದ್ದಾರೆ. ರಾಷ್ಟ್ರದ ಅತಿದೊಡ್ಡ ವ್ಯಾಪಾರ ಗುಂಪುಗಳು ಕಂಪನಿಯನ್ನು ಬೆಂಬಲಿಸುತ್ತಿವೆ, ಮತ್ತು ಸೌಂದರ್ಯವರ್ಧಕಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳಿಗಾಗಿ ವ್ಯಾಪಾರ ಗುಂಪುಗಳೂ ಕೂಡ ಕಂಪನಿಯ ಬೆನ್ನಿಗೆ ನಿಂತು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿವೆ. ಈ ಪ್ರಕರಣದ ಕುರಿತು ನ್ಯಾಯಾಲಯವು ಮಂಗಳವಾರ ತೀರ್ಪನ್ನು ನೀಡುವ ಸಾಧ್ಯತೆ ಇದೆ.


    ಪ್ರಾರಂಭದಲ್ಲಿ ಈ ಪ್ರಕರಣವನ್ನು ಮಿಸ್ಸೌರಿಯ ರಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಸ್ಸೌರಿ ನ್ಯಾಯಾಲಯವು ಅಂಡಾಶಯ ಕ್ಯಾನ್ಸರ್ಗೆ ತುತ್ತಾದ 22 ಮಹಿಳೆಯರಿಗೆ ಕಂಪನಿ 74.7 ಬಿಲಿಯನ್ ಡಾಲರ್ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿತ್ತು. ಈ ವಿಚಾರಣೆಯು ನ್ಯಾಯಯುತವಾಗಿ ನಡೆಯಲಿಲ್ಲ, ತೀರ್ಪು ಸರಿ ಇಲ್ಲ ಎಂದು ಕಂಪನಿಯು ವಾದಿಸಿತ್ತು.


    ಈ ತೀರ್ಪಿನ ವಿರುದ್ಧ ಕಂಪನಿಯು ಮೇಲ್ಮನವಿಯನ್ನು ಸಲ್ಲಿಸಿತ್ತು. ಆ ವೇಳೆ ನ್ಯಾಯಾಲಯವು ಅರ್ಧಕ್ಕಿಂತ ಹೆಚ್ಚಿನ ಹಣವನ್ನು ಕಡಿತಗೊಳಿಸಿತು ಮತ್ತು ಇಬ್ಬರು ಫಿರ್ಯಾದಿಗಳನ್ನು ತೆಗೆದುಹಾಕಿತು. ಈ ತೀರ್ಪಿನ ವೇಳೆ ಎರಡೂ ಕಡೆಯ ವಕೀಲರು ಕಂಪನಿಯ ಟಾಲ್ಕ್ ಉತ್ಪನ್ನಗಳಲ್ಲಿ ಕಲ್ನಾರಿನ ಮತ್ತು ಕಲ್ನಾರಿನ ಲೇಸ್ಡ್ ಇದೆಯೇ ಎಂಬ ಬಗ್ಗೆ ಇಬ್ಬರು ತಜ್ಞರ ಸಾಕ್ಷ್ಯವನ್ನು ಮಂಡಿಸಿದರು. ನಂತರ ಈ ಕಂಪನಿಯ ಟಾಲ್ಕ್ ಉತ್ಪನ್ನ ಬಳಸುವುದರಿಂದ ಕ್ಯಾನ್ಸರ್ ಬರಬಹುದು ಎನ್ನುವುದು ಸಾಬೀತಾಗಿತ್ತು.


    ಇದನ್ನೂ ಓದಿ: Dieting mistakes: ಡಯೆಟ್‍ ಮಾಡಿದರು ತೂಕ ಇಳಿಯುತ್ತಿಲ್ಲವೇ? ಹಾಗಾದರೆ ಅಲ್ಲೇನೊ ಎಡವಟ್ಟಾಗಿದೆ!


    ನ್ಯಾಯಾಧೀಶರು ಎರಡೂ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ, ಮಹಿಳೆಯರ ಪರವಾಗಿ ತೀರ್ಪು ನೀಡಿದರು. ಅಲ್ಲದೆ ನ್ಯಾಯಾಧೀಶ ರೆಕ್ಸ್ ಎಮ್. ಬರ್ಲಿಸನ್ ಅವರು ವಿಚಾರಣೆಯಲ್ಲಿನ ಸಾಕ್ಷ್ಯಗಳು "ಪ್ರತಿವಾದಿಗಳ ಕಡೆಯಿಂದ ವಿಶೇಷವಾಗಿ ಖಂಡನೀಯ ನಡವಳಿಕೆಯನ್ನು ತೋರಿಸಿದೆ ಎಂದು ತೀರ್ಪಿನಲ್ಲಿ ಬರೆದಿದ್ದಾರೆ.

    ತಾಯಂದಿರು ಮತ್ತು ಶಿಶುಗಳಿಗೆ ತಯಾರು ಮಾಡುವ ಕಂಪನಿಯ ಟಾಲ್ಕ್ ಉತ್ಪನ್ನಗಳಲ್ಲಿ ಕಲ್ನಾರು ಇರುವುದು ಕಂಪನಿಗೆ ತಿಳಿದಿದ್ದರೂ ಆ ಉತ್ಪನ್ನಗಳನ್ನು ಕಂಪನಿ ಮಾರಾಟ ಮಾಡುತ್ತಿತ್ತು. ಈ ಟಾಲ್ಕ್ ಬಳಕೆಯಿಂದ ಆಗುವ ಹಾನಿಯ ಕುರಿತು ಕಂಪನಿಗೆ ತಿಳಿದಿದ್ದರೂ ಕೂಡ ಕಂಪನಿ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಉತ್ಪನ್ನಗಳ ಸುರಕ್ಷತೆಯನ್ನು ದಶಕಗಳಿಂದ ತಪ್ಪಾಗಿ ನಿರೂಪಿಸಲಾಗಿದೆ ಎಂದು ಬರ್ಲಿಸನ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.




    ಈ ಕಂಪನಿಯ ಟಾಲ್ಕ್ ಬಳಕೆ ಮಾಡಿದ ಮಹಿಳೆಯರಲ್ಲಿ 9 ಮಂದಿ ಅಂಡಾಶಯದ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ ಎಂದು ಫಿರ್ಯಾದಿಗಳ ಪರ ವಕೀಲರು ತಿಳಿಸಿದ್ದಾರೆ. ಆದರೆ ತಮ್ಮ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎನ್ನುವುದನ್ನು ಜಾನ್ಸನ್ & ಜಾನ್ಸನ್ ನಿರಾಕರಿಸಿದೆ. ಜಾನ್ಸನ್‌ರ ಬೇಬಿ ಪೌಡರ್ ಸುರಕ್ಷಿತವಾಗಿದೆ ಎಂದು ದೃಢೀಕರಿಸುವ ದಶಕಗಳ ಸ್ವತಂತ್ರ ವೈಜ್ಞಾನಿಕ ಮೌಲ್ಯಮಾಪನಗಳಿಗೆ ವಿರುದ್ಧವಾಗಿ, ಕಲ್ನಾರಿನಿಂದ ಕಲುಷಿತಗೊಂಡಿಲ್ಲ ಮತ್ತು ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ ಎಂದು ಕಂಪನಿ ವಾದ ಮಾಡುತ್ತಿದೆ. ಇದೀಗ ಕಂಪನಿ ತಯಾರು ಮಾಡಿರುವ ಕೋವಿಡ್ ಲಸಿಕೆಗಳು ಅಮೆರಿಕದಲ್ಲಿ ಬಳಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಟಾಲ್ಕ್ ಪೌಡರ್ ಬಳಕೆ ಕುರಿತಂತೆ ನ್ಯಾಯಾಲಯದ ತೀರ್ಪು ಕಂಪನಿಗೆ ಹಿನ್ನಡೆ ತಂದಿದೆ. ಈ ಅವಮಾನ ಕಡಿಮೆ ಮಾಡಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿದೆ.


    Published by:Soumya KN
    First published: