Joe Lara Passes Away: ಫ್ಲೋರಿಡಾದಲ್ಲಿ ವಿಮಾನ ಪತನ; ಹಾಲಿವುಡ್ ನಟ ಜೋ ಲಾರಾ ಸೇರಿ 7 ಜನ ಸಾವು

ಟಾರ್ಜಾನ್ ನಟ ಜೋ-ಲಾರಾ

ಟಾರ್ಜಾನ್ ನಟ ಜೋ-ಲಾರಾ

Joe Lara Passes Away: ವಿಮಾನ ಅಪಘಾತದಲ್ಲಿ ಹಾಲಿವುಡ್​ನ ಟಾರ್ಜನ್​ ಖ್ಯಾತಿಯ ನಟ ಜೋ ಲಾರಾ ಹಾಗೂ ಅವರ ಹೆಂಡತಿ ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ

  • Share this:

ವಾಷಿಂಗ್ಟನ್ (ಮೇ 31): ಅಮೆರಿಕದ ಫ್ಲೋರಿಡಾದ ಬಳಿ ಇರುವ ನಾಶ್ವಿಲ್ಲೆ ಬಳಿ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ಹಾಲಿವುಡ್​ನ ಪ್ರಸಿದ್ಧ ಟೆಲಿವಿಷನ್ ಸೀರೀಸ್ ಸೀರೀಸ್ ಟಾರ್ಜನ್​ನ ನಟ ಜೋ ಲಾರಾ ಹಾಗೂ ಅವರ ಹೆಂಡತಿ ಗ್ವೆನ್ ಲಾರಾ ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಹಾಲಿವುಡ್​ನ ಪ್ರಸಿದ್ಧ ಅಡ್ವೆಂಚರಸ್​ ಸೀರೀಸ್ ಟಾರ್ಜನ್- ದಿ ಎಪಿಕ್ ಅಡ್ವೆಂಚರಸ್ ಖ್ಯಾತಿಯ ನಟ ಜೋ ಲಾರಾ ಅವರಿಗೆ 58 ವರ್ಷ ವಯಸ್ಸಾಗಿತ್ತು. ವೀಕೆಂಡ್ ಕಳೆಯಲು ಪ್ರೈವೇಟ್ ಜೆಟ್​ನಲ್ಲಿ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಜೋ ಲಾರಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.


ಜೋ-ಲಾರಾ ಅವರ ಖಾಸಗಿ ಜೆಟ್​ ಫ್ಲೋರಿಡಾದ ಬಳಿ ಇರುವ ಸ್ಮಿರ್ನಾ ಏರ್​ಪೋರ್ಟ್​ನಿಂದ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದೆ. ವಿಮಾನ ಪತನವಾದ ಪರಿಣಾಮ ಅದರಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಹಾಲಿವುಡ್ ನಟ ಜೋ ಲಾರಾ, ಅವರ ಪತ್ನಿಯೂ ಸೇರಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: Mehul Choksi | ಗರ್ಲ್​ಫ್ರೆಂಡ್ ಜೊತೆ ರೊಮ್ಯಾಂಟಿಕ್ ಟ್ರಿಪ್​ಗೆ ಹೋಗಿದ್ದ ಮೆಹುಲ್ ಚೋಕ್ಸಿಗೆ ಕಾದಿತ್ತು ಶಾಕ್!


ವಿಮಾನ ಪತನಕ್ಕೆ ಕಾರಣವೇನೆಂಬ ಬಗ್ಗೆ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪ್ರೈವೇಟ್ ಜೆಟ್​ನಲ್ಲಿ 7 ಮಂದಿಯೂ ಸಾವನ್ನಪ್ಪಿದ್ದಾರೆ. ಜೋ ಲಾರಾ ಅವರ ಪತ್ನಿ ಡಯಟ್ ಗುರುವಾಗಿದ್ದರು. ವೀಕೆಂಟ್ ಕಳೆಯಲೆಂದು ಪ್ರೈವೇಟ್ ಜೆಟ್​ನಲ್ಲಿ ತೆರಳುತ್ತಿದ್ದಾಗ ಈ ವಿಮಾನ ದುರಂತ ಸಂಭವಿಸಿದೆ. ಉಳಿದ ಐವರು ಸ್ಥಳೀಯರು ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.


1989ರಲ್ಲಿ ತೆರೆಕಂಡ ಟೆಲಿವಿಷನ್ ಮೋವಿ ಟಾರ್ಜನ್ ಇನ್ ಮ್ಯಾನ್​ಹಟ್ಟನ್​ನಲ್ಲಿ ನಟಿಸಿದ್ದ ಜೋ ಲಾರಾ ಬಳಿಕ 1996ರಿಂದ 2000ರ ಅವಧಿಯಲ್ಲಿ ತೆರೆಕಂಡಿದ್ದ ಟಾರ್ಜಾನ್​ ಸೀರೀಸ್​ನಲ್ಲಿ ಕಾಡಿನ ರಾಜನ ಪಾತ್ರ ನಿರ್ವಹಿಸಿದ್ದರು. ಅದರ ಜೊತೆಗೆ ಇನ್ನಿತರ ಸಿನಿಮಾಗಳು, ಟಿವಿ ಶೋಗಳಲ್ಲೂ ಅವರು ನಟಿಸಿದ್ದರು.

top videos
    First published: