• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಖಾಡಕ್ಕೆ ಕಮಲಾ ಹ್ಯಾರಿಸ್; ಡೆಮಾಕ್ರಾಟ್​ಗೆ ಹರಿದುಬಂತು ದೊಡ್ಡ ದೇಣಿಗೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಖಾಡಕ್ಕೆ ಕಮಲಾ ಹ್ಯಾರಿಸ್; ಡೆಮಾಕ್ರಾಟ್​ಗೆ ಹರಿದುಬಂತು ದೊಡ್ಡ ದೇಣಿಗೆ

ಕಮಲಾ ಹ್ಯಾರಿಸ್

ಕಮಲಾ ಹ್ಯಾರಿಸ್

ಅಮೆರಿಕದಲ್ಲಿ ಭಾರತೀಯ ಸಮುದಾಯ ಬಹಳಷ್ಟಿದೆ. ಅಲ್ಲಿನ ಭಾರತೀಯರಲ್ಲಿ ಹೆಚ್ಚಿನವರು ಡೊನಾಲ್ಡ್ ಟ್ರಂಪ್ ಬೆಂಬಲಿಗರೇ ಆಗಿದ್ಧಾರೆ. ಆದರೆ, ಈಗ ಕಮಲಾ ಹ್ಯಾರಿಸ್ ಅವರು ಡೆಮಾಕ್ರಾಟ್ ಪಕ್ಷದ ಪರವಾಗಿ ಅಖಾಡಕ್ಕೆ ಇಳಿದಿರುವುದರಿಂದ ಭಾರತೀಯರ ಬೆಂಬಲದಲ್ಲಿ ಪರಿವರ್ತನೆ ಆಗುವ ಸಾಧ್ಯತೆ ಇದೆ.

 • Share this:

  ಕ್ಯಾಲಿಫೋರ್ನಿಯಾ(ಆ. 13): ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಈಗ ಹೊಸ ಟಚ್ ಸಿಕ್ಕಿದೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಪುನರಾಯ್ಕೆಗೆ ಪ್ರಯತ್ನಿಸಿದ್ದಾರೆ. ಡೆಮೋಕ್ರಾಟ್ ಪಕ್ಷದ ಜೋ ಬಿಡೆನ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಈ ಮಧ್ಯೆ ಜೋ ಬಿಡೆನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರನ್ನು ನಿನ್ನೆ ಘೋಷಿಸಿದ್ಧಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರ ಹೆಸರು ಕಾಣಿಸಿದೊಡನೆ ಅಖಾಡ ರಂಗೇರಿದೆ. ಡೆಮಾಕ್ರಾಟ್ ಪಕ್ಷಕ್ಕೆ ಹೊಸ ಶಕ್ತಿ ಸಂಚಯನಗೊಂಡಂತಾಗಿದೆ. ಹೊಸ ದಾಖಲೆ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿದೆ. ನಿನ್ನೆಯಿಂದ ಒಂದೇ ದಿನದಲ್ಲಿ ಡೆಮಾಕ್ರಾಟ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ 26 ಮಿಲಿಯನ್ ಡಾಲರ್ (ಸುಮಾರು 190 ಕೋಟಿ ರೂಪಾಯಿ) ಹಣದ ದೇಣಿಗೆ ಹರಿದುಬಂದಿದೆ.


  ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲೂ ಹಣದ ಪಾತ್ರ ಬಹಳ ಮಹತ್ವ. ವಿವಿಧ ಲಾಬಿಗಳಿಗೆ ಹಣ ವ್ಯಯಿಸಬೇಕಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ತಂಡವು ಈಗಾಗಲೇ 300 ಮಿಲಿಯನ್ ಡಾಲರ್ ಹಣ ಕಲೆಹಾಕಿದೆ. ಈಗ ಕಮಲಾ ಹ್ಯಾರಿಸ್ ಅವರು ಅಖಾಡಕ್ಕಿಳಿಯುವುದರೊಂದಿಗೆ ಡೆಮಾಕ್ರಾಟ್ ಪಕ್ಷಕ್ಕೂ ಹರಿದುಬರುವ ದೇಣಿಗೆ ಪ್ರಮಾಣ ಹೆಚ್ಚಾಗುತ್ತಿದೆ. ತಮ್ಮ ತವರು ರಾಜ್ಯ ಕ್ಯಾಲಿಫೋರ್ನಿಯಾದಲ್ಲಿ ಕಮಲಾ ಹ್ಯಾರಿಸ್ ಅವರಿಗೆ ದಾನಿಗಳ ದೊಡ್ಡ ನೆಟ್​ವರ್ಕ್ ಬೆಂಬಲಕ್ಕಿದೆ. ಇದು ದೇಣಿಗೆ ಸಂಗ್ರಹದ ಕಾರ್ಯವನ್ನು ಸುಲಭಗೊಳಿಸಿದೆ.


  ಇದನ್ನೂ ಓದಿ: Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಮತ್ತು ಮಹತ್ವ


  ಅಮೆರಿಕದಲ್ಲಿ ಭಾರತೀಯ ಸಮುದಾಯ ಬಹಳಷ್ಟಿದೆ. ಅಲ್ಲಿನ ಭಾರತೀಯರಲ್ಲಿ ಹೆಚ್ಚಿನವರು ಡೊನಾಲ್ಡ್ ಟ್ರಂಪ್ ಬೆಂಬಲಿಗರೇ ಆಗಿದ್ಧಾರೆ. ಆದರೆ, ಈಗ ಕಮಲಾ ಹ್ಯಾರಿಸ್ ಅವರು ಡೆಮಾಕ್ರಾಟ್ ಪಕ್ಷದ ಪರವಾಗಿ ಅಖಾಡಕ್ಕೆ ಇಳಿದಿರುವುದರಿಂದ ಭಾರತೀಯರ ಬೆಂಬಲದಲ್ಲಿ ಪರಿವರ್ತನೆ ಆಗುವ ಸಾಧ್ಯತೆ ಇದೆ. ಜೋ ಬಿಡೆನ್ ಗೆದ್ದರೆ ಕಮಲಾ ಹ್ಯಾರಿಸ್ ಅಮೆರಿಕದ ಉಪರಾಷ್ಟ್ರಪತಿ ಆಗಲಿದ್ದಾರೆ. ಹಾಗೆಯೇ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಹೀಗಾಗಿ, ಭಾರತೀಯ ಸಮುದಾಯದವರಲ್ಲಿ ಹೆಚ್ಚಿನ ಮಂದಿ ಡೆಮಾಕ್ರಾಟ್ ಪಕ್ಷಕ್ಕೆ ವೋಟ್ ಹಾಕಿದರೂ ಅಚ್ಚರಿ ಇಲ್ಲ.


  55 ವರ್ಷದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆಗುತ್ತಿರುವ ಮೊದಲ ಕಪ್ಪುವರ್ಣೀಯ ಮತ್ತು ಅಮೆರಿಕನ್ ಭಾರತೀಯರೆನಿಸಿದ್ದಾರೆ. ಹಾಗೆಯೇ, 3ನೇ ಮಹಿಳೆಯೂ ಅವರಾಗಿದ್ದಾರೆ. ಕಮಲಾ ಹ್ಯಾರಿಸ್ ಅವರ ತಾಯಿ ಚೆನ್ನೈನವರಾಗಿದ್ದು, ತಂದೆ ಜಮೈಕಾದವರಾಗಿದ್ಧಾರೆ. ಕ್ಯಾಲಿಫೋರ್ನಿಯಾದ ಓಕ್​ಲ್ಯಾಂಡ್​ನಲ್ಲಿ ಜನಿಸಿದ ಕಮಲಾ ಹ್ಯಾರಿಸ್ ಅವರು ಎಡಪಂಥೀಯ ವಿಚಾರಧಾರೆಯಿಂದ ಗುರುತಿಸಿಕೊಂಡವರಾಗಿದ್ದಾರೆ. ಇವರು ಕಾಶ್ಮೀರ ವಿಚಾರದಲ್ಲಿ ಭಾರತ ಸರ್ಕಾರದ ನಿಲುವನ್ನು ವಿರೋಧಿಸುತ್ತಾರೆಂಬ ಆರೋಪ ಇದೆ. ಇದು ಇಲ್ಲಿನ ಭಾರತೀಯ ಸಮುದಾಯದ ಕೆಲವರಿಗೆ ಇರಿಸುಮುರುಸು ತಂದಿರುವುದು ಹೌದು. ಇದನ್ನೂ ಮೀರಿ ಭಾರತೀಯಳೆಂಬ ಹೆಮ್ಮೆಯಲ್ಲಿ ಇವರು ಕಮಲಾ ಹ್ಯಾರಿಸ್ ಅವರ ಡೆಮಾಕ್ರಾಟ್ ಪಕ್ಷಕ್ಕೆ ಬೆಂಬಲ ನೀಡುತ್ತಾರಾ ಎಂಬುದು ಕುತೂಹಲ.


  ಇದನ್ನೂ ಓದಿ: ತೆರಿಗೆ ಸುಧಾರಣೆಗೆ ಹೊಸ ಹೆಜ್ಜೆ; ‘ಪಾರದರ್ಶಕ ತೆರಿಗೆ - ಪ್ರಾಮಾಣಿಕರಿಗೆ ಗೌರವ’ ವೇದಿಕೆ ಉದ್ಘಾಟನೆ


  ಚುವಾವಣೆ ಯಾವಾಗ?


  ಇದೇ ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಎಲ್ಲಾ 50 ರಾಜ್ಯಗಳಲ್ಲೂ ಜನರು ಮತ ಚಲಾಯಿಸಲಿದ್ದಾರೆ. ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ 538 ಎಲೆಕ್ಟರ್​ಗಳ ಆಯ್ಕೆಯಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆಗನುಗುಣವಾಗಿ ಎಲೆಕ್ಟರ್​ಗಳ ಸಂಖ್ಯೆಯನ್ನು ನಿಗದಿ ಮಾಡಲಾಗಿದೆ. ಈ 538 ಆಯ್ಕೆಗಾರರು ಡಿ. 14ರಂದು ಅಧ್ಯಕ್ಷರ ಆಯ್ಕೆಗೆ ಮತ ಹಾಕಲಿದ್ಧಾರೆ. ಅಲ್ಲಿ 270 ಮತ ಗಳಿಸಿದವರು ವಿಜೇತರಾಗಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಹಿಡಿಯಲಿದ್ದಾರೆ. ಅಮೆರಿಕದಲ್ಲಿ ಪ್ರತೀ 4 ವರ್ಷಕ್ಕೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ.

  Published by:Vijayasarthy SN
  First published: