Covid Vaccine: ಹೊಸಾ ಲಸಿಕೆ ನಿಯಮ ಜಾರಿ ಮಾಡಿದ ಅಮೇರಿಕಾ, ಭಾರತಕ್ಕೆ ನಿರ್ಬಂಧವಿಲ್ಲ

Covid Vaccine in US: ನವೆಂಬರ್ ಆರಂಭದಲ್ಲಿ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಶ್ವೇತಭವನವು ಸೆಪ್ಟೆಂಬರ್ 20ರಂದು ಮೊದಲು ಬಹಿರಂಗಪಡಿಸಿತು. 33 ದೇಶಗಳಿಂದ ಸಂಪೂರ್ಣವಾಗಿ ಲಸಿಕೆ ಪಡೆದ ವಿಮಾನ ಪ್ರಯಾಣಿಕರಿಗೆ ನಿರ್ಬಂಧ ಇರುವುದಿಲ್ಲ.

ಅಮೇರಿಕಾ ಅಧ್ಯಕ್ಷ ಜೋ ಬಿಡೆನ್

ಅಮೇರಿಕಾ ಅಧ್ಯಕ್ಷ ಜೋ ಬಿಡೆನ್

  • Share this:
Vaccination In US: ಯುಎಸ್ ಅಧ್ಯಕ್ಷ ಜೋ ಬೈಡೆನ್‌ (Joe Biden) ಸೋಮವಾರ ಹೆಚ್ಚಿನ ವಿದೇಶಿ ರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಹೊಸ ಲಸಿಕೆ ಅವಶ್ಯಕತೆಗಳನ್ನು ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ ಮತ್ತು ನವೆಂಬರ್ 8ರಿಂದ ಚೀನಾ, ಭಾರತ ಮತ್ತು ಯುರೋಪಿನ ಹೆಚ್ಚಿನ ಭಾಗಗಳ ಮೇಲೆ ತೀವ್ರವಾದ ಪ್ರಯಾಣ ನಿರ್ಬಂಧಗಳನ್ನು (Restriction) ತೆಗೆದುಹಾಕಲಾಗಿದೆ ಎಂದು ಅಮೆರಿಕದ ಶ್ವೇತಭವನ (White House) ತಿಳಿಸಿದೆ. COVID-19 ಹರಡುವಿಕೆಯನ್ನು ಪರಿಹರಿಸಲು ಅಸಾಮಾನ್ಯ US ಪ್ರಯಾಣ ನಿರ್ಬಂಧಗಳನ್ನು (Travel Restriction) 2020ರ ಆರಂಭದಲ್ಲಿ ಮೊದಲು ವಿಧಿಸಲಾಯಿತು. ಕಳೆದ 14 ದಿನಗಳಲ್ಲಿ ಬ್ರಿಟನ್ (Britain), ಗಡಿ ನಿಯಂತ್ರಣಗಳಿಲ್ಲದ ಯುರೋಪಿನ 26 ಷೆಂಗೆನ್ ದೇಶಗಳು, ಐರ್ಲೆಂಡ್, ಚೀನಾ, ಭಾರತ (India), ದಕ್ಷಿಣ ಆಫ್ರಿಕಾ (South Africa), ಇರಾನ್ (Iran) ಮತ್ತು ಬ್ರೆಜಿಲ್‌ನಲ್ಲಿರುವ ಹೆಚ್ಚಿನ US ಅಲ್ಲದ ನಾಗರಿಕರನ್ನು (Citizens) ನಿಯಮಗಳು ನಿರ್ಬಂಧಿಸುತ್ತವೆ.

“COVID-19 ಸಾಂಕ್ರಾಮಿಕ ಸಮಯದಲ್ಲಿ ಈ ಹಿಂದೆ ಅನ್ವಯಿಸಲಾದ ಹಲವು ದೇಶಗಳಿಗೆ ವಿವಿಧ ರೀತಿ ವಿಧಿಸಿದ್ದ ನಿರ್ಬಂಧಗಳಿಂದ ದೂರ ಸರಿಯುವುದು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಸುರಕ್ಷಿತ ಪುನಾರಂಭ ಮುನ್ನಡೆಸಲು ಪ್ರಾಥಮಿಕವಾಗಿ ವ್ಯಾಕ್ಸಿನೇಷನ್ ಅವಲಂಬಿಸಿರುವ ವಿಮಾನ ಪ್ರಯಾಣ ನೀತಿಯನ್ನು ಅಳವಡಿಸಿಕೊಳ್ಳಲು," ಎಂದು ಬೈಡೆನ್‌ ಅವರ ಘೋಷಣೆ ಹೇಳುತ್ತದೆ.

ಇದನ್ನೂ ಓದಿ: Pfizer Shot For Children; ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ: ಎಷ್ಟು ಡೋಸ್ ನೀಡಬೇಕು?

18 ವರ್ಷದೊಳಗಿನ ಮಕ್ಕಳಿಗೆ ಕೆಲವು ವೈದ್ಯಕೀಯ ಸಮಸ್ಯೆಗಳಿರುವ ಜನರು ಹೊಸ ಲಸಿಕೆ ಅವಶ್ಯಕತೆಗಳಿಂದ ವಿನಾಯಿತಿ ಪಡೆದಿದ್ದಾರೆ ಎಂದು ಶ್ವೇತಭವನವು ದೃಢಪಡಿಸಿದೆ.

ವಿನಾಯಿತಿ ಪಡೆದವರಿಗೂ ಲಸಿಕೆ

ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ದರಗಳು 10%ಕ್ಕಿಂತ ಕಡಿಮೆ ಇರುವ ಸುಮಾರು 50 ದೇಶಗಳ ಪ್ರವಾಸಿಗರಲ್ಲದ ಪ್ರಯಾಣಿಕರು ಸಹ ನಿಯಮಗಳಿಂದ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ವಿನಾಯಿತಿ ಪಡೆಯುವವರು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಆಗಮಿಸಿದ ನಂತರ 60 ದಿನಗಳಲ್ಲಿ ಲಸಿಕೆ ಹಾಕಿಸಬೇಕಾಗುತ್ತದೆ.

ನೈಜೀರಿಯಾ, ಈಜಿಪ್ಟ್, ಅಲ್ಜೀರಿಯಾ, ಅರ್ಮೇನಿಯಾ, ಮ್ಯಾನ್ಮಾರ್, ಇರಾಕ್, ನಿಕರಾಗುವಾ, ಸೆನೆಗಲ್, ಉಗಾಂಡಾ, ಲಿಬಿಯಾ, ಇಥಿಯೋಪಿಯಾ, ಜಾಂಬಿಯಾ, ಕಾಂಗೋ, ಕೀನ್ಯಾ, ಯೆಮೆನ್, ಹೈಟಿ, ಚಾಡ್ ಮತ್ತು ಮಡಗಾಸ್ಕರ್ ಈ ದೇಶಗಳಲ್ಲಿ ಸೇರಿವೆ.

ಇದನ್ನೂ ಓದಿ: Needle-free Vaccine Patches; ಶೀಘ್ರದಲ್ಲೇ ಬರಲಿವೆ ನೋವಿಲ್ಲದ, ಸೂಜಿ-ರಹಿತ ಲಸಿಕೆ ಪ್ಯಾಚಸ್!

ನವೆಂಬರ್ ಆರಂಭದಲ್ಲಿ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಶ್ವೇತಭವನವು ಸೆಪ್ಟೆಂಬರ್ 20ರಂದು ಮೊದಲು ಬಹಿರಂಗಪಡಿಸಿತು. 33 ದೇಶಗಳಿಂದ ಸಂಪೂರ್ಣವಾಗಿ ಲಸಿಕೆ ಪಡೆದ ವಿಮಾನ ಪ್ರಯಾಣಿಕರಿಗೆ ನಿರ್ಬಂಧ ಇರುವುದಿಲ್ಲ.

"ಕುಟುಂಬಗಳು ಮತ್ತು ಸ್ನೇಹಿತರು ಒಬ್ಬರನ್ನೊಬ್ಬರು ಮತ್ತೆ ನೋಡಬಹುದು, ಪ್ರವಾಸಿಗರು ನಮ್ಮ ಅದ್ಭುತ ಹೆಗ್ಗುರುತುಗಳಿಗೆ ಭೇಟಿ ನೀಡಬಹುದು. ಈ ನೀತಿಯು ಆರ್ಥಿಕ ಚೇತರಿಕೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ" ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಯುಎಸ್‌ಗೆ ಬರುವ ವಿಮಾನಗಳನ್ನು ಹತ್ತುವ ಮೊದಲು ವಿದೇಶಿ ಪ್ರಯಾಣಿಕರಿಗೆ ಲಸಿಕೆ ಹಾಕಲಾಗಿದೆ ಎಂದು ಖಚಿತಪಡಿಸಲು ವಿಮಾನಯಾನ ಸಂಸ್ಥೆಗಳು ಅನುಸರಿಸಬೇಕಾದ ವಿವರವಾದ ಅವಶ್ಯಕತೆಗಳನ್ನು ಸಹ ಬೈಡೆನ್‌ ಆಡಳಿತವು ವಿವರಿಸಿದೆ.

ಇದನ್ನೂ ಓದಿ: 5ಜಿ, ಭಾರತದ ಹೊಸ ಡ್ರೋಣ್ ನೀತಿ: ಪ್ರಧಾನಿ ಮೋದಿ- ಕ್ವಾಲ್ಕಾಮ್ ಸಿಇಒ ಅಮೊನ್ ಸಭೆಯ ಮುಖ್ಯಾಂಶಗಳು

ಆದರೆ, ಇನ್ನು ಎರಡು ವಾರಗಳಲ್ಲಿ ಜಾರಿಗೆ ಬರಲಿರುವ ಈ ಹೊಸ ನಿಯಮಗಳನ್ನು ವಿದೇಶಿ ಪ್ರಯಾಣಿಕರು ತಿಳಿದಿರುವಂತೆ ಮಾಡುವುದು ಅಮೆರಿಕದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಗಳಲ್ಲಿರುವ ಒಂದು ಆತಂಕವಾಗಿದೆ. ಹಾಗೂ, ಲಸಿಕೆ ಪಡೆಯದ ಅಮೆರಿಕನ್ನರು ಸಹ ಅದೇ ದಿನದಿಂದ ಕಟ್ಟುನಿಟ್ಟಾದ ಪರೀಕ್ಷಾ ನಿಯಮಗಳನ್ನು ಎದುರಿಸಲಿದ್ದಾರೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸೋಮವಾರ ಹೊಸ ಸಂಪರ್ಕ ಪತ್ತೆಹಚ್ಚುವ ನಿಯಮಗಳನ್ನು ಹೊರಡಿಸಿದ್ದು, ಈ ಪೈಕಿ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಂದ ಫೋನ್ ಸಂಖ್ಯೆಗಳು, ಇಮೇಲ್ ಮತ್ತು ಯುಎಸ್ ವಿಳಾಸಗಳಂತಹ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ಅದನ್ನು 30 ದಿನಗಳವರೆಗೆ ಉಳಿಸಿಕೊಳ್ಳಬೇಕು. ನಂತರ ಕೋವಿಡ್ - 19 ರೂಪಾಂತರಗಳು ಅಥವಾ ಇತರ ರೋಗಕಾರಕಗಳಿಗೆ ಒಡ್ಡಿಕೊಮಡ ಪ್ರಯಾಣಿಕರ ಮಾಹಿತಿಯನ್ನು ಫಾಲೋ ಮಾಡಬಹುದು ಎಂದು ತಿಳಿಸಿದೆ.

ಯುಎಸ್ ನಿಯಂತ್ರಕರು ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಬಳಸಲು ಅಧಿಕೃತವಾದ ಯಾವುದೇ ಲಸಿಕೆಯನ್ನು CDC ಈ ತಿಂಗಳು ಸ್ವೀಕರಿಸುತ್ತದೆ ಮತ್ತು ಪ್ರಯಾಣಿಕರಿಂದ ಮಿಶ್ರ-ಡೋಸ್ ಕೊರೊನಾ ವೈರಸ್ ಲಸಿಕೆಗಳನ್ನು ಸ್ವೀಕರಿಸುತ್ತದೆ ಎಂದು ಹೇಳಿದೆ. ಆದರೆ, ಆ ಪಟ್ಟಿಯಲ್ಲಿ ಲ್ಯಾಟಿನ್ ಅಮೇರಿಕನ್ ದೇಶಗಳು ವ್ಯಾಪಕವಾಗಿ ಬಳಸುತ್ತಿರುವ ಸ್ಪುಟ್ನಿಕ್ ಲಸಿಕೆಗೆ ಜಾಗ ಇಲ್ಲ.

ಇದನ್ನೂ ಓದಿ: Covid Vaccine: ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಲಸಿಕೆ ನೀಡಲಾಗಿದ್ಯಾ? ಅಸಮಾನತೆ ಬಗ್ಗೆ ಏರುತ್ತಿದೆ ಧ್ವನಿ

ಮೆಕ್ಸಿಕೋದಲ್ಲಿ, ಜನಸಂಖ್ಯೆಯ ಸುಮಾರು 9%ರಷ್ಟು ಜನರಿಗೆ ಲಸಿಕೆ ನೀಡಲು 24 ಮಿಲಿಯನ್ ಡೋಸ್ ಸ್ಪುಟ್ನಿಕ್ ಅನ್ನು ಬಳಸಲು ಯೋಜಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಕೆಲವು ಇತರ ಪ್ರಮುಖ ಲಸಿಕೆಗಳು "ಆ ಲಸಿಕೆಗಳ ಕಾರ್ಯಕ್ಷಮತೆಯ ದತ್ತಾಂಶವು ನಿಯಂತ್ರಕ ಪ್ರಕ್ರಿಯೆಯಲ್ಲಿ ಲಭ್ಯವಾಗುವುದರಿಂದ ಪರಿಶೀಲನೆಯಲ್ಲಿದೆ" ಎಂದು ಬೈಡೆನ್ ಆಡಳಿತದ ಅಧಿಕಾರಿ ಸೋಮವಾರ ಹೇಳಿದ್ದಾರೆ.

ಲಸಿಕೆ ಅಗತ್ಯತೆಗಳನ್ನು ಅಳವಡಿಸುವ ವಿಮಾನಯಾನ ಸಂಸ್ಥೆಗಳಿಗೆ ಕಾನೂನು ಆಧಾರ ಒದಗಿಸುವ ಭದ್ರತಾ ನಿರ್ದೇಶನ ನೀಡಲು ಸಾರಿಗೆ ಭದ್ರತಾ ಆಡಳಿತವು ಯೋಜಿಸಿದೆ. ಹಾಗೂ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ ಸುಳ್ಳು ಹೇಳುವುದು ಅಪರಾಧವಾಗಿದೆ ಎಂದು ವಿಮಾನ ಪ್ರಯಾಣಿಕರಿಗೆ ದೃಢೀಕರಣದ ನಮೂನೆಯು ಎಚ್ಚರಿಕೆ ನೀಡಿದೆ.

COVID-19 ಅವಶ್ಯಕತೆಗಳನ್ನು ತಪ್ಪಿಸಲು ಬಯಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಯಾವುದೇ ಧಾರ್ಮಿಕ ವಿನಾಯಿತಿಗಳಿಲ್ಲ ಎಂದು CDC ಹೇಳಿದೆ.

ಇದನ್ನೂ ಓದಿ: Covaxin for Children: 2 ರಿಂದ 18 ವರ್ಷದೊಳಗಿನ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

ವಿದೇಶಿ ವಿಮಾನ ಪ್ರಯಾಣಿಕರು "ಅಧಿಕೃತ ಮೂಲ" ದಿಂದ ಲಸಿಕೆ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ ಮತ್ತು ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 2 ವಾರಗಳ ಮುಂಚೆಯೇ ಕೊನೆಯ ಡೋಸ್ ಪಡೆದಿರಬೇಕು ಎಂದು ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು.

ಅಲ್ಲದೆ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ನಿರ್ಗಮಿಸುವ ಮೂರು ದಿನಗಳ ಮೊದಲು ತೆಗೆದುಕೊಂಡ ನಕಾರಾತ್ಮಕ COVID-19 ಪರೀಕ್ಷೆಯ ಪುರಾವೆಯನ್ನು ಒದಗಿಸಬೇಕಾಗುತ್ತದೆ. ಲಸಿಕೆ ಪಡೆಯದ ಅಮೆರಿಕನ್ನರು ಮತ್ತು ವಿನಾಯಿತಿ ಪಡೆಯುವ ವಿದೇಶಿ ಪ್ರಜೆಗಳು ನಿರ್ಗಮಿಸಿದ ಒಂದು ದಿನದೊಳಗೆ ನಕಾರಾತ್ಮಕ COVID-19 ಪರೀಕ್ಷೆಯ ಪುರಾವೆಯನ್ನು ಒದಗಿಸಬೇಕಾಗುತ್ತದೆ ಎಂದು ಶ್ವೇತಭವನ ಹೇಳಿದೆ.

ಲಸಿಕೆ ಹಾಕಿಸಿಕೊಂಡ ವಿದೇಶಿ ಪ್ರಜೆಗಳಿಗೆ ನವೆಂಬರ್ 8ರಂದು ಭೂ ಗಡಿ ದಾಟುವಿಕೆಯ ನಿರ್ಬಂಧಗಳನ್ನು ತೆಗೆದುಹಾಕುವ ಸಮಾನಾಂತರ ಯೋಜನೆಗಳ ವಿವರಗಳನ್ನು ಈ ವಾರದ ನಂತರ ಬೈಡೆನ್ ಆಡಳಿತವು ನೀಡಲು ಯೋಜಿಸಿದೆ.
Published by:Soumya KN
First published: