ಅಮೆರಿಕದ ನೂತನ ಅಧ್ಯಕ್ಷರಿಂದ ಐದು ಲಕ್ಷ ಭಾರತೀಯರಿಗೆ ಪೌರತ್ವ ಭಾಗ್ಯ?

ವಲಸಿಗರಿಂದ ಅಮೆರಿಕ ದೇಶಕ್ಕೆ ಬಲ ಸಿಗುತ್ತದೆ ಎಂಬ ತತ್ವದಲ್ಲಿ ನೂತನ ಬೈಡನ್ ಸರ್ಕಾರ ತನ್ನ ದೇಶದ ವಲಸೆ ನೀತಿಯಲ್ಲಿ ಬದಲಾವಣೆ ಮಾಡಲಿದೆ. ಇದರಿಂದ, 5 ಲಕ್ಷದಷ್ಟು ಭಾರತೀಯರಿಗೆ ಅಮೆರಿಕದಲ್ಲಿ ಪೌರತ್ವ ದೊರೆ ನಿರಾಳವಾಗಿರಲು ಅನುವು ಮಾಡಿಕೊಡಲಿದೆ.

ಜೋ ಬೈಡನ್

ಜೋ ಬೈಡನ್

 • News18
 • Last Updated :
 • Share this:
  ವಾಷಿಂಗ್ಟನ್(ನ. 08): ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಆಗುತ್ತಿರುವಂತೆಯೇ ಅಲ್ಲಿ ಹೊಸ ನೀತಿಗಳನ್ನ ರೂಪಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ. ಅಮೆರಿಕಕ್ಕೆ ಇನ್ನಷ್ಟು ಬಲ ನೀಡಲು ವಲಸಿಗರಿಗೆ ಹೆಚ್ಚು ಮಣೆ ಹಾಕಲು ಹೊಸ ಸರ್ಕಾರ ಯೋಜಿಸಿದೆ. ಅದರಂತೆ 5 ಸಾವಿರ ಭಾರತೀಯರೂ ಸೇರಿದಂತೆ ದಾಖಲೆರಹಿತರಾಗಿ ಉಳಿದಿರುವ ಒಂದು ಕೋಟಿಗೂ ಹೆಚ್ಚು ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ವರ್ಷಕ್ಕೆ ಕನಿಷ್ಠ 95 ಸಾವಿರ ಸಂಖ್ಯೆಯಲ್ಲಿ ನಿರಾಶ್ರಿತರನ್ನು ಅಮೆರಿಕಕ್ಕೆ ಬರಮಾಡಿಕೊಳ್ಳುವುದನ್ನೂ ಈ ಯೋಜನೆಯಲ್ಲಿ ಒಳ್ಳಗೊಳ್ಳಲಾಗಿದೆ.

  ಬೈಡನ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಈ ವಿಚಾರವನ್ನು ವ್ಯಾಪಕವಾಗಿ ಮಂಡನೆ ಮಾಡಿದ್ದರು. ವಲಸಿಗರು ಅಮೆರಿಕಕ್ಕೆ ಎಷ್ಟು ಮುಖ್ಯ, ಅವರಿಂದ ದೇಶಕ್ಕೆ ಎಂಥ ಬಲ ಬರುತ್ತದೆ ಎಂಬುದನ್ನು ಭಾರತೀಯ ಅಮೆರಿಕನ ಸಮುದಾಯದ ಉದಾಹರಣೆ ಮೂಲಕ ಅವರ ನೀತಿ ದಾಖಲೆಯಲ್ಲಿ ಬರೆಯಲಾಗಿತ್ತು. ಇದೀಗ ಈ ನೀತಿಯನ್ನು ಕಾರ್ಯಾನುಷ್ಠಾನಕ್ಕೆ ತರಲು ಯೋಜನೆ ಹಾಕಲಾಗುತ್ತಿದೆ.

  ಇದನ್ನೂ ಓದಿ: ಒಡಕು ನಿವಾರಿಸಿ ಜನರನ್ನು ಒಗ್ಗೂಡಿಸುವುದು ನನ್ನ ಗುರಿ: ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್

  “ಕುಟುಂಬಗಳು ಒಟ್ಟಿಗೆ ಇರಬೇಕೆಂಬ ಆದ್ಯತೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯರೂ ಸೇರಿದಂತೆ ಸುಮಾರು 1.1 ಕೋಟಿ ದಾಖಲೆರಹಿತ ವಲಸಿಗರಿಗೆ ಪೌರತ್ವ ನೀಡಲು ಸಾಧ್ಯವಾಗುವಂತೆ ವಲಸಿಗ ಶಾಸನದಲ್ಲಿ ಸುಧಾರಣೆ ತರುವ ಕೆಲಸವನ್ನು ಬೈಡನ್ ಕೂಡಲೇ ಪ್ರಾರಂಭಿಸುತ್ತಾರೆ” ಎಂದು ಡೆಮಾಕ್ರಾಟ್ ಪಕ್ಷದ ನೀತಿ ದಾಖಲೆಯಲ್ಲಿ ತಿಳಿಸಲಾಗಿದೆ.

  ಕುಟುಂಬ ಆಧಾರಿತ ವಲಸೆಯನ್ನು ಬೈಡನ್ ಆಡಳಿತ ಬೆಂಬಲಿಸಲಿದೆ. ಅಮೆರಿಕಕ್ಕೆ ಹೋಗಿ ಕೆಲಸ ಮಾಡುತ್ತಾ ನೆಲಸಿರುವ ಭಾರತೀಯನೊಬ್ಬ ತನ್ನ ಕುಟುಂಬವನ್ನು ಕರೆಸಿಕೊಂಡು ಅವರಿಗೆ ಪೌರತ್ವ ನೀಡಲು ಅಸಾಧ್ಯದ ಸ್ಥಿತಿ ಇದೆ. ಈಗ ಬೈಡನ್ ಆಡಳಿತದಲ್ಲಿ ಈ ಸ್ಥಿತಿ ಬದಲಾಗಲಿದ್ದು, ಅಮೆರಿಕದ ಪ್ರಜೆ ತನ್ನ ತವರು ದೇಶದಲ್ಲಿರುವ ಕುಟುಂಬವನ್ನು ಕರೆಸಿಕೊಂಡು ಅವರಿಗೂ ಪೌರತ್ವ ಸಿಗುವಂತೆ ಮಾಡಬಹುದಾಗಿದೆ.

  ಇದನ್ನೂ ಓದಿ: Kamala Harris: ಭಾರತೀಯ ಮೂಲದ ಕಪ್ಪು ಮಹಿಳೆ ಕಮಲಾ ಹ್ಯಾರಿಸ್​ ಅಮೆರಿಕ ಉಪಾಧ್ಯಕ್ಷೆ

  ಮೊದಲಿಗೆ ಉನ್ನತ ಕೌಶಲ್ಯದ, ವಿಶೇಷ ಪರಿಣತಿ ಅವಶ್ಯ ಇರುವ ಕೆಲಸಗಳಿಗೆ ತಾತ್ಕಾಲಿಕ ವೀಸಾ ನಿಡುವ ವ್ಯವಸ್ಥೆಯಲ್ಲಿ ಮೊದಲಿಗೆ ಸುಧಾರಣೆ ತರಲಾಗುವುದು. ನಂತರ ವೀಸಾ ಪ್ರಮಾಣ ಹೆಚ್ಚಿಸಲಾಗುವುದು. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್​ಗಳ ಸಂಖ್ಯೆಗಿರುವ ಮಿತಿಯನ್ನು ತೆಗೆದುಹಾಕುವುದು ಇವೇ ಮುಂತಾದ ಕ್ರಮಗಳು ನೂತನ ವಲಸೆ ನೀತಿ ಜಾರಿಗೆ ಕೈಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಅಮೆರಿಕದಲ್ಲಿರುವ ತಮ್ಮ ಕುಟುಂಬ ಸದಸ್ಯರ ಜೊತೆ ಸೇರಲು ಸಾಧ್ಯವಿಲ್ಲದೆ ಹಲವು ವರ್ಷಗಳಿಂದ ಹತಾಶೆಯಲ್ಲಿರುವ ಭಾರತೀಯರಿಗೆ ಈ ನೀತಿ ಅನುಕೂಲವಾಗಲಿದೆ.

  ಇದೇ ವೇಳೆ, ವಲಸಿಗರಿಗೆ ನಿರಾಳತೆ ತರುತ್ತಿದ್ದ ಡಿಎಸಿಎ ಕಾಯ್ದೆ (ಬಾಲ್ಯದ ವಲಸೆಗೆ ವಿನಾಯಿತಿ ನೀಡುವ ಕಾಯ್ದೆ) ಯನ್ನು ಮತ್ತೆ ತರುವ ಚಿಂತನೆಯೂ ಇದೆ. ಬರಾಕ್ ಒಬಾಮ ಆಡಳಿತದ ವೇಳೆ ಈ ಕಾನೂನು ಜಾರಿಗೆ ತರಲಾಗಿತ್ತು. ಟ್ರಂಪ್ ಬಂದ ಬಳಿಕ ಇದನ್ನು ತೆಗೆದುಹಾಕಲಾಗಿತ್ತು. ಈಗ ಮತ್ತೆ ಡೆಮಾಕ್ರಾಟ್​ನವರು ಅಧಿಕಾರಕ್ಕೆ ಏರುವುದರೊಂದಿಗೆ ಈ ಕಾನೂನು ಮತ್ತೆ ಜಾರಿಗೆ ಬರಲಿದೆ. ವಲಸೆ ಜಾರಿ ಪ್ರಾಧಿಕಾರದ ಅಧಿಕಾರಿಗಳು ಕಚೇರಿ ಮತ್ತಿತರ ಸೂಕ್ಷ್ಮ ಸ್ಥಳಗಳಲ್ಲಿ ದಾಳಿ ಮಾಡಲು ಅನುಮತಿಸುವ ಕಾನೂನನ್ನೂ ತೆಗೆದುಹಾಕುವ ಸಾಧ್ಯತೆ ಇದೆ. ಹಾಗೆಯೇ, ಕೆಲ ಮುಸ್ಲಿಮ್ ರಾಷ್ಟ್ರಗಳಿಂದ ವಲಸಿಗರನ್ನು ಅಮೆರಿಕಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುವ ಟ್ರಂಪ್ ಸರ್ಕಾರದ ನೀತಿಯನ್ನೂ ಬೈಡನ್ ಕೈಬಿಡಲಿದ್ದಾರೆ.
  Published by:Vijayasarthy SN
  First published: