ರಷ್ಯಾ ಅಧ್ಯಕ್ಷನಿಗೆ ಚಿನ್ನದ ಸನ್​​ಗ್ಲಾಸ್ ಗಿಫ್ಟ್ ಮಾಡಿದ ಜೋ ಬೈಡನ್

Concorde Style Aviators: ಜೋ ಬೈಡನ್​ ನೀಡಿದ ಏವಿಯೇಟರ್​ ಶೈಲಿಯ ಸನ್​ಗ್ಲಾಸ್​ ಅನ್ನು ಅಮೆರಿಕದ ಸೈನಿಕರು ಧರಿಸುತ್ತಾರೆ. ರಾಂಡೋಲ್ಫ್ ಕಂಪನಿ 1978 ರಿಂದ ಅಮೆರಿಕ ಸಶಸ್ತ್ರ ಪಡೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ತಿಂಗಳಿಗೆ 25 ಸಾವಿರ ಜೋಡಿ ಸನ್​ಗ್ಲಾಸ್​ ಮಾರಾಟವಾಗುತ್ತದೆ.

ಏವಿಯೇಟರ್​ ಸನ್​ಗ್ಲಾಸ್

ಏವಿಯೇಟರ್​ ಸನ್​ಗ್ಲಾಸ್

 • Share this:
  ಅಮೆರಿಕ ಅಧ್ಯಕ್ಷ ಜೋ ಬೈಡನ್​ ಜಿನೀವಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗಿನ ಮೊದಲ ಭೇಟಿಗೆ ಜೋ ಬೈಡನ್​ ಏವಿಯೇಟರ್​ ಶೈಲಿಯ ಸನ್​ಗ್ಲಾಸ್​ ಉಡುಗೊರೆ ನೀಡಿದ್ದಾರೆ. ಜೋ ಬೈಡನ್ ಗಿಫ್ಟ್​ ನೀಡಿದ ರಾಂಡೋಲ್ಫ್​​ ಸನ್​ಗ್ಲಾಸ್​​ ರಷ್ಯಾದ ಪ್ರತಿರೂಪವಾದ ಅಮೆರಿಕನ್​ ನಿರ್ಮಿತವಾಗಿದೆ. ಮತ್ತೊಂದು ವಿಶೇಷವೆಂದರೆ ಇದರಲ್ಲಿ  ಅಮೆರಿಕ ಅಧ್ಯಕ್ಷ ಬೈಡನ್​ ಅವರ ಸಹಿ ಇದೆ.

  ರಾಂಡೋಲ್ಫ್​​ ಎಂಜಿನಿಯರ್​​ ವಿಭಾಗದ ಮುಖ್ಯಸ್ಥ ಪೀಟರ್​ವಾಸ್ಜ್ಕಿಯರ್​ ಈ ಬಗ್ಗೆ ಮಾತನಾಡಿದ್ದು, ‘‘ತನ್ನ ಕಂಪನಿ ಉತ್ಪಾದಿಸಿದ ​ಸನ್​ಗ್ಲಾಸ್​​ ಅನ್ನು ಉಡುಗೊರೆಯಾಗಿ ನೀಡಿದ್ದನ್ನು ನೋಡಿ ಆಶ್ವರ್ಯರ್ಗೊಂಡೆ ಎಂದು’’ ಹೇಳಿದ್ದಾರೆ.

  ನಂತರ ಮಾತನಾಡಿದ ಅವರು, 12 ಗಂಟೆಗೆ ನನ್ನ ಪೋನ್​ ರಿಂಗ್​ ಆಗಲು ಪ್ರಾರಂಭಿಸಿತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಗಳು ಬರಲಾರಂಭಿಸಿದವು. ತಕ್ಷಣ ನೋಡಿದಾಗ ಏನು ನಡೆಯುತ್ತಿದೆ ಎಂದು ತಿಳಿಯಿತು. ಇದರಿಂದ ನಾನು ಆಶ್ಚರ್ಯಗೊಂಡೆ.  ನನ್ನ ಪ್ರಕಾರ ಈ ರೀತಿ ಅವಕಾಶ ಎಷ್ಟು ರೀತಿ ಬರುತ್ತದೆ, ಅಲ್ಲವೆ? ಎಂದು ಹೇಳಿದ್ದಾರೆ.

  ಜೋ ಬೈಡನ್​ ನೀಡಿದ ಏವಿಯೇಟರ್​ ಶೈಲಿಯ ಸನ್​ಗ್ಲಾಸ್​ ಅನ್ನು ಅಮೆರಿಕದ ಸೈನಿಕರು ಧರಿಸುತ್ತಾರೆ. ರಾಂಡೋಲ್ಫ್ ಕಂಪನಿ 1978 ರಿಂದ ಅಮೆರಿಕ ಸಶಸ್ತ್ರ ಪಡೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ತಿಂಗಳಿಗೆ 25 ಸಾವಿರ ಜೋಡಿ ಸನ್​ಗ್ಲಾಸ್​ ಮಾರಾಟವಾಗುತ್ತದೆ.

  ಜೋ ಬೈಡನ್​ ಉಡುಗೊರೆಯಾಗಿ ನೀಡಿದ ಸನ್​ಗ್ಲಾಸ್​ ಕಾನ್ಕೋರ್ಡ್​ ಶೈಲಿಯ ಏವಿಯೇಟರ್​ ಸನ್​ಗ್ಲಾಸ್​ ಇದಾಗಿದೆ. 23 ಕ್ಯಾರೆಟ್​​ ಚಿನ್ನಲೇಪಿತ ಜೊತೆಗೆ 57ಎಮ್ಎಮ್​ ಪೊಲರೈಸ್ಡ್​​ ಅಮೆರಿಕನ್​​​ ಗ್ರೇ ಲೆನ್ಸ್​​ ಹೊಂದಿದೆ.

  ಏವಿಯೇಟರ್​ ಸನ್​ಗ್ಲಾಸ್​ ಅನ್ನು ಅಮೆರಿಕದಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡಲಾಯಿತು. ಆ ಬಳಿಕ 1980ರ ದಶಕದಲ್ಲಿ ಟಾಮ್​ ಕ್ರೂಸ್​​ ಸಿನಿಮಾದಲ್ಲಿ ಈ ಸನ್​ಗ್ಲಾಸ್​ ಅನ್ನು ಬಳಸಿ ಪ್ರಸಿದ್ಧಿಗೊಳಿಸಲಾಯಿತು.

  ಈಶಾನ್ಯ ಮ್ಯಾಸಚೂಸೆಟ್ಸ್​​ನಲ್ಲಿ ಸನ್​ಗ್ಲಾಸ್​ ಅನ್ನು ತಯಾರಿಸಲಾಗುತ್ತದೆ. 1973ರಲ್ಲಿ ಈ ಕಂಪನಿ ಸ್ಥಾಪನೆಯಾಗಿದ್ದು, ಅಮೆರಿಕ ಕರಕುಶಲ ರುಜುವಾತು ಪಡೆದಿದೆ ಎನ್ನಲಾಗುತ್ತಿದೆ.
  Published by:Harshith AS
  First published: