Viral Video: ಜೊ ಬೈಡನ್ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಹೆಸರು ಹೇಳಲು ಮರೆತಿದ್ದೇಕೆ?

Joe Biden Viral Video: ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಬೈಡನ್ ತಮ್ಮ ಅಭಿನಂದನೆಯನ್ನು ಸಲ್ಲಿಸಲು ಬ್ರಿಟನ್ ಪ್ರಧಾನ ಮಂತ್ರಿಯತ್ತ ತಿರುಗಿದ್ದು, “ಧನ್ಯವಾದ ಬೋರಿಸ್” ಎಂದು ತಿಳಿಸಿದ್ದಾರೆ

ಜೋ ಬೈಡನ್.

ಜೋ ಬೈಡನ್.

  • Share this:
    ‘AUKUS’ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯ ಅನಾವರಣ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕಾ ಅಧ್ಯಕ್ಷ Joe Biden ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ Scott Morrision ಹೆಸರು ಹೇಳಲು ಮರೆತಿದ್ದು ಈ ಸುದ್ದಿ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. United States of America, Australia ಮತ್ತು Briton ನಡುವೆ ಹೊಸ AUKUS ಮಿಲಿಟರಿ ಮೈತ್ರಿಕೂಟದ ಘೋಷಣೆಯ ಸಮಯದಲ್ಲಿ, ಅಧ್ಯಕ್ಷ ಜೊ ಬೈಡನ್‌ನೊಂದಿಗೆ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹಾಗೂ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಕೂಡ ಜೊತೆಗಿದ್ದರು.

    ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಬೈಡನ್ ತಮ್ಮ ಅಭಿನಂದನೆಯನ್ನು ಸಲ್ಲಿಸಲು ಬ್ರಿಟನ್ ಪ್ರಧಾನ ಮಂತ್ರಿಯತ್ತ ತಿರುಗಿದ್ದು, “ಧನ್ಯವಾದ ಬೋರಿಸ್” ಎಂದು ತಿಳಿಸಿದ್ದಾರೆ. ಆದರೆ ತಮ್ಮ ಕೃತಜ್ಞತೆ ಅರ್ಪಿಸಲು ಬೈಡನ್ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಯತ್ತ ಹೊರಳಿದಾಗ ಅವರ ಹೆಸರನ್ನು ಬೈಡನ್ ಮರೆತಂತೆ ಕಾಣುತ್ತಿತ್ತು.

    ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಡವರಿಸುತ್ತಾ ಬೈಡನ್ ತಮ್ಮ ಪದಗಳನ್ನು ನುಡಿದಿದ್ದು, ಧನ್ಯವಾದಗಳು ಗೆಳೆಯ. ಪ್ರಧಾನಿಯವರೇ ನಾನು ಶ್ಲಾಘಿಸುತ್ತೇನೆ ಎಂದಷ್ಟೇ ಬೈಡನ್ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಮಾರಿಸನ್ ಬೈಡನ್ ಅವರಿಗೆ ಹೆಬ್ಬೆರಳು ಮೇಲೆತ್ತಿ ಥಂಬ್ಸ್ ಅಪ್ ನೀಡಿದ್ದಾರೆ.

    ಆದರೆ ಬೈಡನ್ ಅವರು ಮಾರಿಸನ್ ಹೆಸರು ಮರೆತು ತಡವರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಟಾಪ್ ಟ್ವಿಟ್ಟರ್ ಟ್ರೆಂಡ್‌ಗಳಲ್ಲಿ ಒಂದೆನಿಸಿದೆ. ಬೈಡನ್ ಅವರು ತಡವರಿಸಿರುವುದಕ್ಕೆ ಬೇರೆ ಬೇರೆ ಹಾಸ್ಯದ ತುಣುಕಗಳನ್ನು ಸೇರಿಸಿ ಬಳಕೆದಾರರು ವಿಡಿಯೋವನ್ನು ಇನ್ನಷ್ಟು ಹಾಸ್ಯಸ್ಪದಗೊಳಿಸಿದ್ದಾರೆ. ಒಬ್ಬರು ಬಳಕೆದಾರರು ವಿಡಿಯೋಗೆ ಬೈಡನ್ ಮಾರಿಸನ್ ಹೆಸರು ಮರೆತಿರುವುದನ್ನು ಶೀರ್ಷಿಕೆಯಾಗಿ ನೀಡಿ ಕಾಮೆಂಟ್ ಮಾಡಿದ್ದಾರೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷನ ಹೆಂಡತಿಯಾದ್ರೇನಂತೆ, ಕೆಲಸ ಮಾಡೋದು ತಪ್ಪಲ್ಲ..! ಡ್ಯೂಟಿಗೆ ವಾಪಸ್ಸಾದ ಬಿಡೆನ್ ಪತ್ನಿ

    ಇನ್ನು ಕೆಲವು ಬಳಕೆದಾರರು ಹೆಸರು ಮರೆತಿರುವ ಸನ್ನಿವೇಶಗಳನ್ನು ಸೃಷ್ಟಿಸಿ ವಿಡಿಯೋವನ್ನು ಇನ್ನಷ್ಟು ಹಾಸ್ಯಮಯಗೊಳಿಸಿದ್ದಾರೆ. ನಿಜಕ್ಕೂ ಈ ವಿಡಿಯೋ ಇಂದಿನ ನನ್ನ ದಿನವನ್ನು ಸಂತೋಷಗೊಳಿಸಿದೆ ಧನ್ಯವಾದಗಳು ಜೊ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಬೈಡನ್ ಹೇಳಿರುವ ಪದಗಳನ್ನೇ ಟ್ವಿಟ್ಟರ್ ಬಳಕೆದಾರರು ಬಳಸಿಕೊಂಡು ಬೇರೆ ಬೇರೆ ಹಾಸ್ಯಸ್ಪದ ಟ್ವೀಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಹರಿಬಿಡುತ್ತಿದ್ದಾರೆ. ಬೈಡನ್ ತಮ್ಮ ಧನ್ಯವಾದ ಭಾಷಣದಲ್ಲಿ ನಾನು ಆಸ್ಟ್ರೇಲಿಯಾದ ವ್ಯಕ್ತಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದು ನುಡಿದಿದ್ದಾರೆ (ಇಂಗ್ಲಿಷ್ ಆವೃತ್ತಿ: I want to thank you down under (Australia) ಇಲ್ಲಿ ಡೌನ್ ಅಂಡರ್ ಎಂಬುದು ಆಸ್ಟ್ರೇಲಿಯಾದ ಇನ್ನೊಂದು ಹೆಸರಾಗಿದೆ. ಸಮಭಾಜಕದ ಕೆಳಗೆ ಇರುವುದರಿಂದ ಆಸ್ಟ್ರೇಲಿಯಾ ಖಂಡವನ್ನು ಡೌನ್ ಅಂಡರ್ ಎಂದೂ ಕರೆಯುತ್ತಾರೆ.)

    ಇದನ್ನೂ ಓದಿ: ಸೈನ್ಯ ಮರಳಿರಬಹುದು, ಯುದ್ಧ ನಿಂತಿಲ್ಲ; ಅಗತ್ಯ ಬಿದ್ದಾಗ ಅಫ್ಘನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸುತ್ತೇವೆ: ಅಮೇರಿಕಾ ಗುಡುಗು

    ಒಟ್ಟಿನಲ್ಲಿ ಬೈಡನ್ ತಮ್ಮ ಧನ್ಯವಾದ ಭಾಷಣದಲ್ಲಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿಯ ಹೆಸರನ್ನು ಮರೆತಿದ್ದು ಹಾಗೂ ಹೆಸರು ಹೇಳಲು ತಡವರಿಸಿದ್ದು ಬಳಕೆದಾರರ ಅಂದಿನ ದಿನವನ್ನು ಹಾಸ್ಯಸ್ಪದವಾಗಿಸಿದ್ದಂತೂ ನಿಜ. ಬೈಡನ್ ನಿಜವಾಗಿಯೂ ಮಾರಿಸನ್ ಹೆಸರು ಮರೆತಿದ್ದರೇ ಅಥವಾ ಉದ್ದೇಶಪೂರ್ವಕವಾಗಿ ಹೆಸರು ಮರೆತಂತೆ ನಟಿಸಿದರೇ ಎಂಬುದು ಕೂಡ ಬಳಕೆದಾರರ ನಡುವೆ ತೀವ್ರ ಚರ್ಚೆಯ ವಿಷವಾಗಿದೆ.
    Published by:Sharath Sharma Kalagaru
    First published: