• Home
  • »
  • News
  • »
  • national-international
  • »
  • Joe Biden: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಿದ ಜೋ ಬೈಡನ್! ಈ ನಡೆಗೆ ಕಾರಣ ತಿಳಿಯಿರಿ

Joe Biden: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಿದ ಜೋ ಬೈಡನ್! ಈ ನಡೆಗೆ ಕಾರಣ ತಿಳಿಯಿರಿ

ಜೋ ಬೈಡನ್

ಜೋ ಬೈಡನ್

ಸೆಪ್ಟೆಂಬರ್ ನಲ್ಲಿ ಡೆಟ್ರಾಯಿಟ್ ಆಟೋ ಶೋ ಗೆ ಭೇಟಿ ನೀಡಿದಾಗ, ಬೈಡನ್ ಯುಎಸ್ ನ 35 ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಿಸಲು ಮೊದಲ 900 ಮಿಲಿಯನ್ ಡಾಲರ್ ಧನಸಹಾಯವನ್ನು ಅನುಮೋದಿಸಿದ್ದರು.

  • Share this:

ಈಗೆಲ್ಲಾ ಈ ದೊಡ್ಡ ದೊಡ್ಡ ಮಹಾನಗರಗಳಲ್ಲಿ ವಾಯುಮಾಲಿನ್ಯ (Air Pollution) ಜಾಸ್ತಿ ಆಗ್ತಿದೆ ಅಂತ ಅಲ್ಲಿನ ರಾಜ್ಯ ಸರ್ಕಾರಗಳು ಈ ವಾಹನಗಳು (Vehicle) ಉಗುಳುವ ಹೊಗೆಯನ್ನು ಕಡಿಮೆ ಮಾಡಲು ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈಗ ಬೇರೆ ಬೇರೆ ದೇಶಗಳು ಮತ್ತು ದೊಡ್ಡ ದೊಡ್ಡ ಕಾರು ತಯಾರಕ ಕಂಪನಿಗಳು ಸಹ ಈ ಪೆಟ್ರೋಲ್ ಮತ್ತು ಡೀಸಲ್ ವಾಹನಗಳ ಪರ್ಯಾಯವಾಗಿ ಎಲೆಕ್ಟ್ರಿಕ್ (Electric) ವಾಹನಗಳ (ಇವಿ) ಬಳಕೆಗೆ ಹೆಚ್ಚು ಒತ್ತು ನೀಡುತ್ತಿರುವುದನ್ನು ನಾವು ಇತ್ತೀಚೆಗೆ ನೋಡುತ್ತಿದ್ದೇವೆ.


ಹಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಚಾರ್ಜಿಂಗ್ ಸೆಂಟರ್ ಗಳನ್ನು ನಿರ್ಮಿಸುತ್ತಿರುವುದನ್ನು ಸಹ ನಾವು ನೋಡುತ್ತಿದ್ದೇವೆ.


ಅಮೆರಿಕಾದಾದ್ಯಂತ 5 ಲಕ್ಷ ಚಾರ್ಜಿಂಗ್ ಸೆಂಟರ್ ಗಳನ್ನ ಘೋಷಿಸಿರುವ ಬೈಡನ್


ಈಗ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸಹ ಅಮೆರಿಕದಾದ್ಯಂತ 5 ಲಕ್ಷ ಚಾರ್ಜಿಂಗ್ ಸೆಂಟರ್ ಗಳನ್ನು ಘೋಷಿಸಿದ್ದಾರೆ. ಈ ಘೋಷಣೆಯ ನಂತರ, ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷರಿಗೆ ತಮ್ಮ ಕಡೆಯಿಂದ ಕೆಲವು ಸಲಹೆಗಳನ್ನು ನೀಡಿದ್ದಾರೆ ನೋಡಿ. "ನಾವು ಅಮೆರಿಕದ ದೇಶಾದ್ಯಂತ 5, 00,000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸೆಂಟರ್ ಗಳನ್ನು ನಿರ್ಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಅಮೆರಿಕದ ಮಹಾನ್ ರಸ್ತೆ ಪ್ರವಾಸವು ಸಂಪೂರ್ಣವಾಗಿ ವಿದ್ಯುದ್ದೀಕರಣಗೊಳ್ಳುತ್ತದೆ" ಎಂದು ಪೋಟಸ್ ಟ್ವೀಟ್ ಮಾಡಿದೆ.


ಅಮೆರಿಕ ಅಧ್ಯಕ್ಷ ಬೈಡನ್ ಅವರ ನಡೆಗೆ ಎಲೋನ್ ಮಸ್ಕ್ ಹೇಳಿದ್ದೇನು?


ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಅವರ ನಡೆಯ ಬಗ್ಗೆ ಎಲೋನ್ ಮಸ್ಕ್ ಅವರು "ಅಥವಾ ನೀವು ಟೆಸ್ಲಾವನ್ನು ಖರೀದಿಸಬಹುದು" ಎಂದು ಹೇಳಿದ್ದಾರೆ. "ಟೆಸ್ಲಾ ತನ್ನ ಚಾರ್ಜ್ ಕನೆಕ್ಟರ್ ಅನ್ನು ಪರಿಚಯಿಸಿದ್ದು, ಟೆಸ್ಲಾ ಸೂಪರ್ ಚಾರ್ಜರ್ ಗಳನ್ನು ಬಳಸಲು ಇತರ ಇವಿಗಳನ್ನು ಶಕ್ತಗೊಳಿಸುತ್ತಿದೆ ಎಂದು ಉಲ್ಲೇಖಿಸಲು ಯೋಗ್ಯವಾಗಿದೆ" ಎಂದು ಅವರು ನಂತರದ ಟ್ವೀಟ್ ನಲ್ಲಿ ಸೇರಿಸಿದರು. ಅವರ ಸಲಹೆಯು ಈ ಟ್ವಿಟ್ಟರ್ ವೇದಿಕೆಯಲ್ಲಿ ಅನೇಕರ ಗಮನವನ್ನು ಸೆಳೆಯಿತು. "ನಾನು ತುಂಬಾ ಗೊಂದಲಕ್ಕೊಳಗಾಗಿದ್ದೇನೆ, ಟೆಸ್ಲಾ ಗೆ ಚಾರ್ಜಿಂಗ್ ಸ್ಟೇಷನ್ ಗಳ ಅಗತ್ಯವಿದೆ ಎಂದು ನಾನು ಭಾವಿಸಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: Storage Issue: ನಿಮ್ಮ ಮೊಬೈಲ್​ ಸ್ಟೋರೇಜ್​ ಬೇಗನೆ ಫುಲ್​ ಆಗುತ್ತಾ? ಈ ಟ್ರಿಕ್ಸ್​ ಫಾಲೋಮಾಡಿ ಕ್ಲಿಯರ್ ಮಾಡಿ


ಇನ್ನೊಬ್ಬರು "ಚಾರ್ಜಿಂಗ್ ಸ್ಟೇಷನ್ ಗಳಿಲ್ಲದೆ ನೀವು ಟೆಸ್ಲಾವನ್ನು ಬಳಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. "ಅಮೆರಿಕದಲ್ಲಿ ಟೆಸ್ಲಾ ಅಲ್ಲದ ಚಾರ್ಜಿಂಗ್ ಮೂಲಸೌಕರ್ಯದ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ?" ಎಂದು ಮೂರನೆಯ ಬಳಕೆದಾರರೊಬ್ಬರು ತಮ್ಮ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.


ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣದ ಬಗ್ಗೆ ಏನಂತಾರೆ ಬೈಡನ್?


ಸೆಪ್ಟೆಂಬರ್ ನಲ್ಲಿ ಡೆಟ್ರಾಯಿಟ್ ಆಟೋ ಶೋ ಗೆ ಭೇಟಿ ನೀಡಿದಾಗ, ಬೈಡನ್ ಯುಎಸ್ ನ 35 ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಿಸಲು ಮೊದಲ 900 ಮಿಲಿಯನ್ ಡಾಲರ್ ಧನಸಹಾಯವನ್ನು ಅನುಮೋದಿಸಿದ್ದರು. "ಇಂದು, ಮಿಶಿಗನ್ ಸೇರಿದಂತೆ ಮೊದಲ 35 ರಾಜ್ಯಗಳು ತಮ್ಮ ರಾಜ್ಯದಾದ್ಯಂತ ತಮ್ಮದೇ ಆದ ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸಲು ಧನಸಹಾಯವನ್ನು ಅನುಮೋದಿಸುತ್ತಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಸಹ ಬೈಡನ್ ಆ ಸಂದರ್ಭದಲ್ಲಿ ಹೇಳಿದ್ದರು.


ಈ ನಿಧಿಯನ್ನು ದ್ವಿಪಕ್ಷೀಯ ಮೂಲಸೌಕರ್ಯ ಕಾನೂನಿನ ಭಾಗದಡಿಯಲ್ಲಿ, ದೇಶದ ಹೆದ್ದಾರಿ ವ್ಯವಸ್ಥೆಯ 53,000 ಮೈಲಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಬಳಸಲಾಗುವುದು ಎಂದು ಅವರು ಹೇಳಿದರು. ಈ ವರ್ಷದ ನವೆಂಬರ್ ನಲ್ಲಿ ಅಂಗೀಕರಿಸಲಾದ 1 ಟ್ರಿಲಿಯನ್ ಡಾಲರ್ ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನ ತಿಳಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು