ಭೋಪಾಲ್ (ಆ. 28): ಉದ್ಯೋಗವಿಲ್ಲದೇ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಕತ್ತು ಸೀಳಿ ಮಗನ ಹತ್ಯೆ ಮಾಡಿ ತಾನು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್ (Bhopal)ನಲ್ಲಿ ಈ ಘಟನೆ ನಡೆದಿದೆ, 56 ವರ್ಷದ ಇಂಜಿನಿಯರ್ ಈ ಕೃತ್ಯ ಎಸಗಿದ್ದಾರೆ. ಕೆಲಸ ಕಳೆದುಕೊಂಡಿದ್ದ ಈತ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಈ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಜಿನಿಯರ್ ಜೊತೆ 50 ವರ್ಷದ ಇಂಜಿನಿಯರ್ ಪತ್ನಿ ಕೂಡ ವಿಷ ಸೇವಿಸಿದ್ದರು. ಆದರೆ, ಅದೃಷ್ಟವಶಾತ್ ಆಕೆ ಬದುಕು ಉಳಿದಿದ್ದಾರೆ. ಜೊತೆಗೆ ಮಗಳು ಕೂಡ ಬದುಕಿದ್ದು, ಇಬ್ಬರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸವಿಲ್ಲದೇ ಬದುಕು ದೂಡುವುದು ಕಷ್ಟವಾದ ಹಿನ್ನಲೆ ಈ ಕುಟುಂಬದ ನಾಲ್ವರು ಈ ನಿರ್ಣಯ ತೆಗೆದುಕೊಂಡಿದ್ದರು. ಅದರಂತೆ ಮೊದಲು ಗಂಡ ಹೆಂಡತಿ ತಮ್ಮ ಹದಿ ಹರೆಯ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳ ಕತ್ತನ್ನು ಚಾಕುವಿನಿಂದ ಸೀಳಿದ್ದರು. ಇದಾದ ಬಳಿಕ ದಂಪತಿಗಳು ಇಬ್ಬರು ವಿಷ ಸೇವಿಸಿದ್ದರು. ಬಾಲಕಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರವಿ ಠಾಕ್ರೆ ಎಂದು ಗುರುತಿಸಲಾಗಿದೆ. ಕಳೆದ ಮೂರು ತಿಂಗಳಿನಿಂ.ದ ಉದ್ಯೋಗವಿಲ್ಲದೇ ಈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನಲೆ ಜೀವ ಕಳೆದು ಕೊಳ್ಳುವ ನಿರ್ಧಾರ ಮಾಡಿ ಹೆಂಡತಿಗೆ ತಿಳಿಸಿದ್ದರು. ಆತನ ಹೆಂಡತಿ ರಂಜನಾ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು.
ಮೊದಲು 16 ವರ್ಷದ ಮಗನ ಕತ್ತನ್ನು ಬ್ಲೇಡ್ನಿಂದ ಕುಯ್ದಿದ್ದಾರೆ. ಬಳಿಕ ಮಗಳ ಕುತ್ತಿಗೆ ಕತ್ತರಿಸಿದ್ದಾರೆ. ಬದುಕುಳಿದಿರುವ ತಾಯಿ-ಮಗಳು ಇಬ್ಬರನ್ನು ಸರ್ಕಾರಿ ಹಮೀಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿ ಮತ್ತು ಆತನ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ
ಮಹಿಳೆಯು ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ಆಕೆಯ ಗುಪ್ತಾಂಗವನ್ನುಸೂಜಿ ದಾರದಿಂದ ಹೊಲಿದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಮದಾ ಎಂಬಲ್ಲಿ ಶುಕ್ರವಾರ ನಡೆದಿದೆ,
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ, 55 ವರ್ಷದವನಾಗಿದ್ದು, ಆತ ತನ್ನ ಪತ್ನಿ ಅದೇ ಗ್ರಾಮದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಆಕೆಯ ಬಳಿ ಜಗಳವಾಡುತ್ತಿದ್ದ. ಆತ ಆಕೆಯ ಮೇಲೆ ಕೆಲವೊಮ್ಮೆ ಹಲ್ಲೆ ಕೂಡ ಮಾಡಿದ್ದನು
ಕೆಲವು ದಿನಗಳ ಹಿಂದೆ ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಮೊದಲು ಆಕೆಗೆ ಮನಬಂದಂತೆ ಥಳಿಸಿದ ಆತ ನಂತರ ಆಕೆಯ ಗುಪ್ತಾಂಗವನ್ನು ಸೂಜಿ ದಾರದಿಂದ ಹೊಲಿದಿದ್ದಾನೆ. ನಂತರ ಆತನ ಪತ್ನಿ ಮನೆಯಿಂದ ಓಡಿ ಬಂದು ಪೊಲೀಸರ ಬಳಿ ದೂರು ದಾಖಲಿಸಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನೀಲ್ ಸೋಂಕರ್ ತಿಳಿಸಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ