• Home
  • »
  • News
  • »
  • national-international
  • »
  • Railway Job: ರೈಲ್ವೆ ಉದ್ಯೋಗ ಕೊಡಿಸ್ತೀನಿ, ರೈಲು ಲೆಕ್ಕ ಹಾಕಿ; 28 ಮಂದಿಗೆ ಕಿಡಿಗೇಡಿಗಳಿಂದ 2.6 ಕೋಟಿ ರೂ. ದೋಖಾ!

Railway Job: ರೈಲ್ವೆ ಉದ್ಯೋಗ ಕೊಡಿಸ್ತೀನಿ, ರೈಲು ಲೆಕ್ಕ ಹಾಕಿ; 28 ಮಂದಿಗೆ ಕಿಡಿಗೇಡಿಗಳಿಂದ 2.6 ಕೋಟಿ ರೂ. ದೋಖಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರೈಲ್ವೆ ಉದ್ಯೋಗ ಕೊಡಿಸುವ ನೆಪದಲ್ಲಿ ತಮಿಳುನಾಡಿನ 28 ಮಂದಿ ಯುವಕರಿಗೆ ವಂಚಿಸಿರುವ ಘಟನೆ ನವದೆಹಲಿಯಲ್ಲ ಬೆಳಕಿಗೆ ಬಂದಿದೆ. ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ), ಸಂಚಾರ ಸಹಾಯಕರು ಮತ್ತು ಕ್ಲರ್ಕ್ ಹುದ್ದೆಗಳಿಗೆ ತರಬೇತಿ ಭಾಗವಾಗಿ ಈ ಕೆಲಸ ನೀಡಲಾಗುತ್ತಿದೆ ಎಂದು ಈ ಯುವಕರಿಗೆ ತಿಳಿಸಲಾಗಿತ್ತು. ಅಷ್ಟೇ ಅಲ್ಲದೇ, ರೈಲ್ವೆಯಲ್ಲಿನ ಹುದ್ದೆಗಳಿಗಾಗಿ ಪ್ರತಿಯೊಬ್ಬರಿಂದಲೂ 2 ಲಕ್ಷ ರೂ. ದಿಂದ 24 ಲಕ್ಷ ರೂಪಾಯಿವರೆಗೂ ವಸೂಲಿ ಮಾಡಲಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ: ರೈಲ್ವೆ ಉದ್ಯೋಗ  (Railway Job) ಕೊಡಿಸುವ ನೆಪದಲ್ಲಿ ತಮಿಳುನಾಡಿನ (Tamilnadu) 28 ಮಂದಿ ಯುವಕರಿಗೆ ವಂಚಿಸಿರುವ ಘಟನೆ ನವದೆಹಲಿಯಲ್ಲ (NewDelhi) ಬೆಳಕಿಗೆ ಬಂದಿದೆ. ಅದರಲ್ಲಿಯೂ ಯುವಕರಿಗೆ ಯಾವ ರೀತಿಯ ಕೆಲಸ ನೀಡಿ ಮೋಸ ಮಾಡಿದ್ದಾರೆ ಎಂದು ಕೇಳಿದರೆ ನಿಜಕ್ಕೂ ಎಲ್ಲರೂ ಅಚ್ಚರಿ ಪಡುತ್ತೀರಾ. ಹೌದು 28 ಮಂದಿ ಯುವಕರಿಗೂ (Unemployees) ಪ್ರತಿ ದಿನ ನವದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ನಿಂತು, ಅಲ್ಲಿಗೆ ಆಗಮಿಸುವ ಮತ್ತು ನಿರ್ಗಮಿಸುವ ರೈಲುಗಳನ್ನು (Train) ಎಣಿಸಲು ನಿಯೋಜಿಸಲಾಗಿತ್ತು. ಆದರೆ ಇದೊಂದು ಹಗರಣವಾಗಿದ್ದು, ತಾವು ಮೋಸ ಹೋಗುತ್ತಿದ್ದೇವೆ ಎಂದು ತಿಳಿಯದೇ ಯುವಕರು ಇದೀಗ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಕಿಡಿಗೇಡಿಗಳು ಒಟ್ಟು 2.6 ಕೋಟಿಯನ್ನು ಬಾಚಿಕೊಂಡು ಎಸ್ಕೇಪ್ ಆಗಿದ್ದಾರೆ.


ರೈಲ್ವೆಯಲ್ಲಿ ಉದ್ಯೋಗ ನೆಪದಲ್ಲಿ 2.24 ಲಕ್ಷ ವಸೂಲಿ


ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ), ಸಂಚಾರ ಸಹಾಯಕರು ಮತ್ತು ಕ್ಲರ್ಕ್ ಹುದ್ದೆಗಳಿಗೆ ತರಬೇತಿ ಭಾಗವಾಗಿ ಈ ಕೆಲಸ ನೀಡಲಾಗುತ್ತಿದೆ ಎಂದು ಈ ಯುವಕರಿಗೆ ತಿಳಿಸಲಾಗಿತ್ತು. ಅಷ್ಟೇ ಅಲ್ಲದೇ, ರೈಲ್ವೆಯಲ್ಲಿನ ಹುದ್ದೆಗಳಿಗಾಗಿ ಪ್ರತಿಯೊಬ್ಬರಿಂದಲೂ 2 ಲಕ್ಷ ರೂ. ದಿಂದ 24 ಲಕ್ಷ ರೂಪಾಯಿವರೆಗೂ ವಸೂಲಿ ಮಾಡಲಾಗಿದೆ ಎಂದು ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯೂ) ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.


ಸಾಂದರ್ಭಿಕ ಚಿತ್ರ


ನಿರುದ್ಯೋಗಿ ಯುವಕರ ಗುಂಪಿಗೆ 2.67 ಕೋಟಿ ರೂ. ಪಂಗನಾಮ


ಜೂನ್ ಮತ್ತು ಜುಲೈ ನಡುವೆ ಒಂದು ತಿಂಗಳವರೆಗೆ ತರಬೇತಿ ನೀಡುವುದಾಗಿ ಯುವಕರ ಗುಂಪಿನಿಂದ ಸುಮಾರು 2.67 ಕೋಟಿ ರೂಪಾಯಿಯನ್ನು ಕಿಡಿಗೇಡಿಗಳು ವಸೂಲಿ ಮಾಡಿದ್ದಾರೆ ಎಂದು  78 ವರ್ಷದ ಎಂ ಸುಬ್ಬುಸಾಮಿ ದೂರಿನಲ್ಲಿ ಆರೋಪಿಸಿದ್ದಾರೆ. ಸುಬ್ಬುರಾವ್ ಅವರು ಮಾಜಿ ಸೈನಿಕರಾಗಿದ್ದು, ಸಂತ್ರಸ್ತರು ಮತ್ತು ಆರೋಪಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಈ ವಿಚಾರ ತನಗೆ ತಿಳಿದಿರಲಿಲ್ಲ ಮತ್ತು ತಾನು ಕೂಡ ವಂಚಕರ ಬಲೆಗೆ ಬಿದ್ದಿರುವುದಾಗಿ ತಿಳಿಸಿದ್ದಾರೆ.


ಪ್ರತಿಯೊಬ್ಬ ಅಭ್ಯರ್ಥಿಯೂ ಸುಬ್ಬುಸಾಮಿ ಅವರಿಗೆ 2 ರಿಂದ 24 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದರು. ಅವರು ಈ ಹಣವನ್ನು ವಿಕಾಸ್ ರಾಣಾ ಎಂಬ ಹೆಸರಿನ ವ್ಯಕ್ತಿಗೆ ವರ್ಗಾಯಿಸಿದ್ದರು.ದೆಹಲಿಯ ಉತ್ತರ ರೈಲ್ವೆ ಕಚೇರಿಯಲ್ಲಿನ ಉಪ ನಿರ್ದೇಶಕ ಎಂದು ಸೋಗು ಹಾಕಿದ್ದ ರಾಣಾ, ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಮದುರೈನ 25 ವರ್ಷದ ಸಂತ್ರಸ್ತ ಸ್ನೆಥಿಲ್ ಕುಮಾರ್ ತಿಳಿಸಿದ್ದಾರೆ. ಬಹುತೇಕ ಸಂತ್ರಸ್ತರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಪದವೀಧರರಾಗಿದ್ದಾರೆ.
ಎಲ್ಲರಿಗೂ ರೈಲು ಎಣಿಸುವ ಕೆಲಸ


ಪ್ರಯಾಣ ಟಿಕೆಟ್ ಪರೀಕ್ಷಕರು, ಟ್ರಾಫಿಕ್ ಸಹಾಯಕರು ಅಥವಾ ಗುಮಾಸ್ತರುಗಳಂತಹ ವಿವಿಧ ಹುದ್ದೆಗಳಿಗೆ ನೀಡುವ ತರಬೇತಿ ಭಿನ್ನವಾಗಿದ್ದರೂ, ಎಲ್ಲರಿಗೂ ಒಂದೇ ರೀತಿಯ ತರಬೇತಿ ನೀಡಲಾಗಿತ್ತು. ಅಂದರೆ ಎಲ್ಲರಿಗೂ ರೈಲು ಎಣಿಸುವ ಕೆಲಸವನ್ನೇ ನೀಡಲಾಗಿತ್ತು.


ಈ ಪ್ರಕರಣ ಸಂಬಂಧ ಫೋನ್ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿದ ತಮಿಳುನಾಡಿನ ವಿರುದುನಗರ ಜಿಲ್ಲೆಯ ಸುಬ್ಬುಸಾಮಿ, ನನ್ನ ನಿವೃತ್ತಿಯ ನಂತರ, ನಮ್ಮ ಊರಿನಲ್ಲಿರುವ ನಿರುದ್ಯೋಗಿ ಯುವಕರಿಗೆ ಯಾವುದೇ ಹಣಕಾಸನ್ನು ಪಡೆದುಕೊಳ್ಳದೇ ಉದ್ಯೋಗ ಹುಡುಕಲು ಸಹಾಯ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ಕೊಯಮತ್ತೂರಿನಲ್ಲಿ ಆರೋಪಿ ಶಿವರಾಮ್​ ಪರಿಚಯ


ಇನ್ನೂ ಎಫ್​ಐಆರ್ ಪ್ರತಿಯಲ್ಲಿ, ಕೊಯಮತ್ತೂರಿನ ನಿವಾಸಿ ಶಿವರಾಮನ್ ಎಂಬ ವ್ಯಕ್ತಿಯನ್ನು ದೆಹಲಿಯ ಎಂಪಿ ಕ್ವಾರ್ಟರ್‌ವೊಂದರಲ್ಲಿ ಭೇಟಿಯಾದೆ. ಈತ ಸಂಸದರು ಮತ್ತು ಮಂತ್ರಿಗಳೊಂದಿಗೆ ಬಹಳ ನಿಕಟ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದನು. ನಿರುದ್ಯೋಗ ಹುಡುಗರು ಹಣ ನೀಡಿದರೆ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದ ಎಂದು ಹೇಳಿದ್ದಾರೆ.


ಇದನ್ನೂ ಓದಿ: RRB: ರೈಲ್ವೆ ನೇಮಕಾತಿ ಮಂಡಳಿ: ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ, ಇಲ್ಲಿದೆ ಮಹತ್ವದ ಅಪ್​ಡೇಟ್


ಯುವಕರನ್ನು ಕರೆದುಕೊಂಡು ದೆಹಲಿಗೆ ಬರುವಂತೆ ಸೂಚಿಸಿದ್ದ, ಹೀಗಾಗಿ ಆರಂಭದಲ್ಲಿ, ನಾನು ಮೂವರು ಉದ್ಯೋಗಾಕಾಂಕ್ಷಿಗಳೊಂದಿಗೆ ಬಂದಿದ್ದೆ. ನಂತರ ಉದ್ಯೋಗ ತರಬೇತಿಯ ಸುದ್ದಿ ಅವರ ಹಳ್ಳಿಗಳಲ್ಲಿ ಮತ್ತು ಮದುರೈ ಸುತ್ತಮುತ್ತ ಹರಡಿದಾಗ ಇನ್ನೂ 28 ಮಂದಿ ನಮ್ಮನ್ನು ಸೇರಿಕೊಂಡಿದ್ದರು ಎಂದಿದ್ದಾರೆ.


ಹಣ ಸಂಗ್ರಹಿಸಲು ಬೇರೆ ಜಾಗದಲ್ಲಿ ಭೇಟಿ


ಹಣ ಸಂಗ್ರಹಿಸಲು ತಮ್ಮನ್ನು ಬೇರೆ ಜಾಗದಲ್ಲಿ ಯಾವಾಗಲೂ ಭೇಟಿಯಾಗುತ್ತಿದ್ದ ರಾಣಾ, ಅವರನ್ನು ಒಮ್ಮೆಯೂ ರೈಲ್ವೆ ಕಟ್ಟಡದ ಒಳಗೆ ಕರೆದೊಯ್ದಿರಲಿಲ್ಲ. ತರಬೇತಿ ಆದೇಶ, ಗುರುತಿನ ಚೀಟಿ, ತರಬೇತಿ ಪೂರ್ಣಗೊಂಡ ಪ್ರಮಾಣಪತ್ರಗಳು ಮತ್ತು ನೇಮಕಾತಿ ಪತ್ರಗಳನ್ನು ರೈಲ್ವೆ ಅಧಿಕಾರಿಗಳು ಮರು ಪರಿಶೀಲನೆ ನಡೆಸಿದ ಬಳಿಕವಷ್ಟೇ ಅವು ನಕಲಿ ಎನ್ನುವುದು ಬೆಳಕಿಗೆ ಬಂದಿದೆ.

Published by:Monika N
First published: