JNU ಮ್ಯಾನೇಜ್ಮೆಂಟ್​ ಸ್ಕೂಲ್​ಗೆ ಅಟಲ್​ ಬಿಹಾರಿ ವಾಜಪೇಯಿ ಹೆಸರಿಡಲು ಚಿಂತನೆ


Updated:August 24, 2018, 12:02 PM IST
JNU ಮ್ಯಾನೇಜ್ಮೆಂಟ್​ ಸ್ಕೂಲ್​ಗೆ ಅಟಲ್​ ಬಿಹಾರಿ ವಾಜಪೇಯಿ ಹೆಸರಿಡಲು ಚಿಂತನೆ

Updated: August 24, 2018, 12:02 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.24): ದೆಹಲಿಯಲ್ಲಿರುವ ಜವಾಹರಲಾಲ್​ ನೆಹರೂ ವಿಶ್ವವಿದ್ಯಾನಿಲಯವು ತನ್ನ ಸುಪರ್ಧಿಗೆ ಬರುವ ಮ್ಯಾನೇಜ್ಮೆಂಟ್​ ಸ್ಕೂಲ್​ಗೆ ದಿವಂಗತ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ ಹೆಸರಿಡಬೇಕೆಂದು ಪ್ರಸ್ತಾವನೆಯನ್ನಿಟ್ಟಿದೆ. ಇದು ವಿಶ್ವವಿದ್ಯಾನಿಲಯದ ಕಾರ್ಯ ನಿರ್ವಾಹಕ ಸಮಿತಿ ತೆಗೆದುಕೊಂಡ ನಿರ್ಧಾರವಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಹಲವಾರು ಯೋಜನೆಗಳ ಹೆಸರನ್ನು ಬದಲಾಯಿಸಿ ದಿವಂಗತ ಮಾಜಿ ಪ್ರಧಾನ ಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಹೆಸರನ್ನಿಡಲಾಗಿದೆ.

ಆಗಸ್ಟ್​ 16 ರಂದು ಟಲ್​ ಬಿಹಾರಿ ವಾಜಪೇಯಿ ನಿಧನರಾಗಿದ್ದರು. ಚತ್ತೀಸ್​ಘಡ್​ ಸರ್ಕಾರವು ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ಹೊಸ ರಾಯ್ಪುರ್​ ನಗರದ ಹೆಸರು ಬದಲಾಯಿಸಿ 'ಅಟಲ್​ ನಗರ್​' ಎಂದಿಡಲು ನಿರ್ಧರಿಸಿದೆ.
ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಗೌರವಾರ್ಥವಾಗಿ ಉತ್ತರ ಪ್ರದೇಶ ಸರ್ಕಾರವು ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​ವೇ ಹೆಸರನ್ನು "ಅಟಲ್​ ಪಥ್​" ಎಂದಿಡಲು ನಿರ್ಧರಿಸಿದೆ. ವಾಜಪೇಯಿ ನಿಧನದ ಬಳಿಕ ಯೋಗಿಯವರು ಅವರ ಹೆಸರಿನಲ್ಲಿ ಆಗ್ರಾ, ಲಕ್ನೋ, ಕಾನ್ಪುರ್​ ಹಾಗೂ ಬಲರಾಂಪುರದಲ್ಲಿ ನಾಲ್ಕು ಸ್ಮಾರಕಗಳನ್ನು ನಿರ್ಮಿಸಲು ಘೋಷಿಸಿತ್ತು.

ಇದನ್ನು ಹೊರತುಪಡಿಸಿ ಇನ್ನೂ ಹಲವಾರು ರಾಜ್ಯಗಳು ಕೆಲ ಸ್ಥಳಗಳಿಗೆ ವಾಜಪೇಯಿ ಹೆಸರಿಡಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿವೆ. ಆಂಧ್ರ ಪ್ರದೆಶದಲ್ಲಿ ಮಂಗಲಾಗಿರಿ ಏಮ್ಸ್, ಹಿಮಾಚಲ ಪ್ರದೇಶದಲ್ಲಿ ಸುರಂಗ, ಮಧ್ಯ ಪ್ರದೇಶದಲ್ಲಿ ರೈಲ್ವೇ ಸ್ಟೇಷನ್​ ಒಂದರ ಹೆಸರು ಹಾಗೂ ಅಸ್ಸಾಂನಲ್ಲಿ ಬೋಗಿಬಿಲ್​ ಎಂಬ ಸೇತುವೆಯ ಹೆಸರನ್ನು ಬದಲಾಯಿಸಿ ವಾಜಪೇಯಿ ಹೆಸರಿಡಬೇಕೆಂದು ನಿರ್ಧರಿಸಿವೆ.

ಈ ಮಧ್ಯೆ ಬಿಜೆಪಿಯು ಅಸ್ಥಿ ಕಲಶ ಯಾತ್ರೆ ನಡೆಸುವ ಮೂಲಕ ದೇಶದಾದ್ಯಂತ ಶ್ರದ್ಧಾಂಜಲಿ ಸಭೆಗಳನ್ನು ನಡೆಸುತ್ತಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿಯವರ ಸೋದರ ಮಗಳು ಕರುಣಾ ಶುಕ್ಲಾ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಕರುಣಾರವರು ಬಿಜೆಪಿ ಹಾಗೂ ಆರ್​ಎಸ್​ಎಸ್​ ವಾಜಪೇಯಿಯವರನ್ನು ಬದುಕಿದ್ದಾಗ ಎಚಷ್ಟು ಬಳಸಿಕೊಂಡಿದ್ದರೋ, ಅಷ್ಟೇ ಪ್ರಮಾಣದಲ್ಲಿ ಅವರು ನಿಧನರಾದ ಬಳಿಕವೂ ಉಪಯೋಗಿಸಿಕೊಂಡಿದ್ದಾರೆಂದಿದ್ದಾರೆ. ಬಿಜೆಪಿ ಇದೆಲ್ಲವನ್ನೂ ಅಧಿಕಾರದ ಆಸೆಯಿಂದ ಮಾಡುತ್ತಿದೆ ಎಂದಿದ್ದಾರೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ