‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪಾಠ ಮಾಡುವುದಿಲ್ಲ‘: ಜೆಎನ್​​​ಯು ಪ್ರಾಧ್ಯಾಪಕರ ಆಗ್ರಹ

ಜೆಎನ್​​ಯು ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲಿನ ಹಲ್ಲೆ ಖಂಡನಾರ್ಹ. ಇದರಿಂದ ಕ್ಯಾಂಪಸ್​​ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುಲಪತಿ ಜಗದೀಶ್ ಕುಮಾರ್ ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಅವರ ಮನಸ್ಥಿತಿ ಒಪ್ಪಲು ಸಿದ್ಧರಿಲ್ಲ- ಜೆಎನ್​​ಯು ಟೀಚರ್ಸ್ ಅಸೋಸಿಯೇಷನ್

news18-kannada
Updated:January 14, 2020, 9:07 AM IST
‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪಾಠ ಮಾಡುವುದಿಲ್ಲ‘: ಜೆಎನ್​​​ಯು ಪ್ರಾಧ್ಯಾಪಕರ ಆಗ್ರಹ
ಜೆಎನ್​​ಯು ಪ್ರತಿಭಟನೆ
  • Share this:
ನವದೆಹಲಿ(ಜ.14): ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ ಎಂದು ಜೆಎನ್​​ಯು ಟೀಚರ್ಸ್ ಅಸೋಸಿಯೇಷನ್​ ಘೋಷಿಸಿದೆ. ಜೆಎನ್​​​ಯು ವಿಶ್ವವಿದ್ಯಾಲಯದ ಆವರಣದೊಳಗೆ ತಮ್ಮ ವಿಭಾಗಗಳ ಎದುರು ಸೋಮವಾರ ಪ್ರಾಧ್ಯಾಪಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. "ಕುಲಪತಿ ಸ್ಥಾನಕ್ಕೆ ಜಗದೀಶ್ ಕುಮಾರ್ ರಾಜೀನಾಮೆ ನೀಡುವತನಕ ಜೆಎನ್​​ಯು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಜಗದೀಶ್​​ ಕುಮಾರ್​​ ರಾಜೀನಾಮೆ ನೀಡಬೇಕೆಂದು ಟೀಚರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.

ಜೆಎನ್​​ಯು ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲಿನ ಹಲ್ಲೆ ಖಂಡನಾರ್ಹ. ಇದರಿಂದ ಕ್ಯಾಂಪಸ್​​ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುಲಪತಿ ಜಗದೀಶ್ ಕುಮಾರ್ ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಅವರ ಮನಸ್ಥಿತಿ ಒಪ್ಪಲು ಸಿದ್ಧರಿಲ್ಲ. ಕ್ಯಾಂಪಸ್​​ನಲ್ಲಿ ಒಂದು ವಿಚಾರದ ಬಗ್ಗೆ ಮುಕ್ತವಾಗಿ ಚರ್ಚಿಸುವಂತ ವಾತಾವರಣ ಮರುಸ್ಥಾಪನೆಯಾಗಿದೆ ಎಂದು ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಹಿಂಸಾಚಾರ ಪ್ರಕರಣ ಸಂಬಂಧ ದೆಹಲಿ ಪೊಲೀಸರು 49 ಮಂದಿಗೆ ನೋಟಿಸ್​​ ಜಾರಿಗೊಳಿಸಿದ್ದಾರೆ. ಇತ್ತೀಚೆಗೆ ಜೆಎನ್​​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದವರು ಯಾರು? ಎಂದು ಖಾಸಗಿ ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ವಿವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತ್ ಅವಸ್ತಿ ಮತ್ತು ರೋಹಿತ್‌ ಶಾ ಎಂಬುವರು ಸಿಕ್ಕಿಬಿದ್ದಿದ್ದರು. ಈ ಇಬ್ಬರು ಸೇರಿದಂತೆ 49 ಮಂದಿಗೆ ದೆಹಲಿ ಪೊಲೀಸರು ನಿನ್ನೆಯೇ ನೋಟಿಸ್​​ ನೀಡಿದ್ಧಾರೆ.

ಈ ಹಿಂದೆ ದೆಹಲಿ ಪೊಲೀಸರು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್​​ನೊಳಗೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆಗೊಳಗಾದ ಜೆಎನ್​​​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್​​​ ಸೇರಿದಂತೆ 19 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡಿದ್ದರು. ಮುಸುಕುಧಾರಿಗಳು ಕ್ಯಾಂಪಸ್​​ಗೆ ನುಗ್ಗಿ ಹಿಂಸಾಚಾರ ನಡೆಸುವ ಮುನ್ನ ದಿನ ಜನವರಿ 4ನೇ ತಾರಿಕು ಜೆಎನ್​​ಯು ಸರ್ವರ್‌ ಕೊಠಡಿಯಲ್ಲಿ ಐಶೆ ಘೋಷ್​​​​​ ಸೇರಿದಂತೆ 19 ಮಂದಿ ದಾಂದಲೆ ನಡೆಸಿದರು. ಈ ಆರೋಪದ ಮೇಲೆ ಐಶೆ ಘೋಷ್​​​ ಮತ್ತಿತರ ವಿರುದ್ಧ ದೆಹಲಿ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ. ಕ್ಯಾಂಪಸ್​​ನಲ್ಲಿ ಹಿಂಸಾಚಾರ ತಡೆಯಲು ಪೊಲೀಸರು ಪ್ರಯತ್ನಿಸಲಿಲ್ಲ ಎಂದು ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಇಂತಹುದ್ದೊಂದು ಬೆಳವಣಿಗೆ ನಡೆದಿದೆ. ತೀವ್ರ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಮೇಲೆಯೆ ಎಫ್​ಐಆರ್​​ ದಾಖಲಿಸಿಕೊಂಡ ಪೊಲೀಸರ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಜೆಎನ್​​​ಯು ಹಿಂಸಾಚಾರ ಕೇಸ್​: ಮುಸುಕುಧಾರಿ ಮಹಿಳೆ ಸೇರಿದಂತೆ 49 ಮಂದಿಗೆ ಪೊಲೀಸ್​​ ನೋಟಿಸ್‌

ಜೆಎನ್​​ಯು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್​​ ಸೇರಿದಂತೆ ಎಡಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಇದರಿಂದು ಎಚ್ಚೆತ್ತ ದೆಹಲಿ ಪೊಲೀಸರು​ ಪ್ರಕರಣ ಸಂಬಂಧ ಕಿಡಿಗೇಡಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇಲ್ಲಿಯವರೆಗೂ ಯಾರ ಬಂಧನವೂ ಆಗಿಲ್ಲ. ದಾಳಿಕೋರರ ಬೆಂಬಲಕ್ಕೆ ದೆಹಲಿ ಪೊಲೀಸರೇ ನಿಂತಿದ್ದಾರೆ ಎಂಬುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಆರೋಪ.

ಏನಿದು ಘಟನೆ?: ಜೆಎನ್​​ಯು ಕ್ಯಾಂಪಸ್​​ನಲ್ಲಿ ಶಬರಮತಿ ಹಾಸ್ಟೆಲ್​​ ಬಳಿ ಐಶ್​ ಘೋಷ್​​​ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು. 50ಕ್ಕೂ ಹೆಚ್ಚು ಮಂದಿ ಗೂಂಡಾಗಳು ಗುಂಪು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Published by: Ganesh Nachikethu
First published: January 14, 2020, 9:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading