ಜೆಎನ್​ಯು ಮಾಜಿ ವಿದ್ಯಾರ್ಥಿ​ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರಾದ ಉಮರ್​ ಖಾಲಿದ್​


Updated:August 14, 2018, 2:59 AM IST
ಜೆಎನ್​ಯು ಮಾಜಿ ವಿದ್ಯಾರ್ಥಿ​ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರಾದ ಉಮರ್​ ಖಾಲಿದ್​

Updated: August 14, 2018, 2:59 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.13): ಜೆಎನ್​ಯು ವಿಶ್ವವಿದ್ಯಾಲಯದ ಮಾಜಿ ಸಂಶೋಧನ ವಿದ್ಯಾರ್ಥಿ ಉಮರ್​ ಖಾಲಿದ್​ ಮೇಲೆ ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ ನಡೆದಿದೆ. ದೆಹಲಿಯ ಕಾನ್ಸ್​ಸ್ಟಿಟ್ಯೂಷನ್​ ಕ್ಲಬ ಬಳಿ ಉಮರ್​ ಮೇಲೆ ದಾಳಿ ನಡೆಸಿದ್ದು, ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

‘ದ್ವೇಷದ ವಿರುದ್ಧ ನಮ್ಮ ಒಗ್ಗಟ್ಟು’ ಎಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಉಮರ್​ ಖಾಲಿದ್​ ಕಾನ್ಸ್​ಸ್ಟಿಟ್ಯೂಷನ್ ಕ್ಲಬ್​ ಗೇಟ್​ ಬಳಿ ನಿಂತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಎರಡು ಬಾರಿ ಗುಂಡು ಹಾರಿಸಿದ್ದು, ಅದೃಷ್ಟವಶಾತ್​ ಉಮರ್​ ಗುಂಡೇಟಿನಿಂದ ಪಾರಾಗಿದ್ಧಾನೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಈ ಸಂಬಂಧ ನ್ಯೂಸ್​-18 ಕನ್ನಡ ಜತೆಗೆ ಮಾತಾಡಿದ ಉಮರ್​ ಖಾಲಿದ್​, ದೇಶದಲ್ಲಿ ಭಯದ ವಾತಾವರಣ ಹೆಚ್ಚಾಗಿದೆ. ಸರ್ಕಾರದ ವಿರುದ್ಧ ನೀತಿಗಳ ಬಗ್ಗೆ ಮಾತಾಡಿದ ಕೂಡಲೇ ಕೊಲ್ಲಲ್ಲಾಗುತ್ತಿದೆ. ದಾಳಿಯಿಂದ ನನಗೆ ಬೇಜಾರೇನಿಲ್ಲ. ಆದರೆ, ನಮ್ಮ ಹೋರಾಟಗಳನ್ನು ಹತ್ತಿಕ್ಕಲು ಸಮಾಜಘಾತುಕರು ಮುಂದಾಗಿದ್ದಾರೆ ಎಂದರು.ಇದೆ ವೇಳೆ ಉಮರ್​​ ಸ್ನೇಹಿತ ಚೇಪಲ್​ ಪ್ರತ್ರಿಯಿಸಿದ್ದು, ನಾವು ಗೇಟ್​ ಬಳಿ ಇದ್ದಾಗ ಪೊಲೀಸರ ಸಮ್ಮುಖದಲ್ಲೇ ದಾಳಿ ನಡೆದಿದೆ. ಅದೃಷ್ಟವಶಾತ್​ ಉಮರ್​ ಖಾಲೀದ್​ಗೆ ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಅಲ್ಲದೇ ಈ ಕುರಿತು ಪೊಲೀಸ್​ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.


Loading...

2016ರಲ್ಲಿ, ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಗಲ್ಲು ಶಿಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಮರ್​ ಖಾಲಿದ್​ ಸೇರಿದಂತೆ ಕನ್ನಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದರು ಎಂಬ ಆರೋಪವಿತ್ತು.


ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್​ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ಉಮರ್​ ಖಾಲಿದ್​ಗೆ ಅಶಿಸ್ತಿನ ಆರೋಪದ ಮೇಲೆ ಜೆಎನ್​ಯೂ ರಚಿಸಿದ್ದ ಉನ್ನತ ಮಟ್ಟದ ಸಮಿತಿ 10,000 ರೂ. ದಂಡ ವಿಧಿಸಿತ್ತು. ಬಳಿಕ ಉಮರ್​ ವಿಚಾರವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು.

ಕನ್ಹಯ್ಯ ಸೇರಿದಂತೆ 13 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದ ಸಮಿತಿ, ಉಮರ್ ಖಾಲಿದ್ ಉಚ್ಚಾಟನೆಗೂ ಶಿಫಾರಸು ಮಾಡಿತ್ತು. ಬಳಿಕ ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಜೆಎನ್​ಯೂ ನಿರ್ಧಾರವನ್ನ ತಳ್ಳಿ ಹಾಕಿರುವ ಕೋರ್ಟ್​, ಮೇಲ್ಮನವಿ ಪ್ರಾಧಿಕಾರದ ಮುಂದೆ ಸಮಿತಿ ನಿರ್ಧಾರವನ್ನ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿತ್ತು.


2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಜಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನ ಫೆಬ್ರವರಿ 2016ರಂದು ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...