HOME » NEWS » National-international » JNU PARTIALLY ROLLS BACK FEE HIKE AFTER MASSIVE PROTESTS BY STUDENTS VS

ಶುಲ್ಕ ಹೆಚ್ಚಳದಲ್ಲಿ ಕಡಿತ ಮಾಡಿದ ಜೆಎನ್​ಯು; ಪ್ರತಿಭಟನೆ ಕೈಬಿಡದ ವಿದ್ಯಾರ್ಥಿಗಳು

ಜೆಎನ್​ಯುನ ಹಾಸ್ಟೆಲ್​ನಲ್ಲಿ ಡಬಲ್ ಸೀಟರ್ ರೂಮಿಗೆ ತಿಂಗಳ ಕೇವಲ 10 ರೂ ಇದ್ದ ಶುಲ್ಕವನ್ನು 200 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಸಿಂಗಲ್ ಸೀಟರ್ ರೂಮಿನ ಶುಲ್ಕವನ್ನು 20 ರೂನಿಂದ 600 ರೂಪಾಯಿಗೆ ಏರಿಸಲಾಗಿತ್ತು.

news18
Updated:November 13, 2019, 5:39 PM IST
ಶುಲ್ಕ ಹೆಚ್ಚಳದಲ್ಲಿ ಕಡಿತ ಮಾಡಿದ ಜೆಎನ್​ಯು; ಪ್ರತಿಭಟನೆ ಕೈಬಿಡದ ವಿದ್ಯಾರ್ಥಿಗಳು
ಜೆಎನ್​ಯು ವಿದ್ಯಾರ್ಥಿಗಳ ಪ್ರತಿಭಟನೆ
  • News18
  • Last Updated: November 13, 2019, 5:39 PM IST
  • Share this:
ನವದೆಹಲಿ(ನ. 13): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹೈಡ್ರಾಮಾ ಮುಂದುವರಿದಿದೆ. ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಜೆಎನ್​ಯು ಆಡಳಿತ ಮಂಡಳಿ ಸ್ಪಂದಿಸಿದೆ. ಶುಲ್ಕ ಹೆಚ್ಚಳದಲ್ಲಿ ಶೇ. 50ರಷ್ಟು ಕಡಿಮೆಗೊಳಿಸಿದೆ. ಜೊತೆಗೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಆಡಳಿತ ಮಂಡಳಿ ತೆಗೆದುಕೊಂಡ ಕ್ರಮವು ವಿದ್ಯಾರ್ಥಿ ಸಂಘಟನೆಗೆ ತೃಪ್ತಿ ತಂದಿಲ್ಲ. ಇದು ಬರೀ ಸುಳ್ಳು, ನಮ್ಮ ದಾರಿ ತಪ್ಪಿಸುವ ಚಿತಾವಣೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸಲು ನಿರ್ಧರಿಸಿದ್ದಾರೆ.

ಜೆಎನ್​ಯುನ ಹಾಸ್ಟೆಲ್​ನಲ್ಲಿ ಡಬಲ್ ಸೀಟರ್ ರೂಮಿಗೆ ತಿಂಗಳ ಕೇವಲ 10 ರೂ ಇದ್ದ ಶುಲ್ಕವನ್ನು 200 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಸಿಂಗಲ್ ಸೀಟರ್ ರೂಮಿನ ಶುಲ್ಕವನ್ನು 20 ರೂನಿಂದ 600 ರೂಪಾಯಿಗೆ ಏರಿಸಲಾಗಿತ್ತು.

ಇದನ್ನೂ ಓದಿ: ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕಚೇರಿ ಆರ್​ಟಿಐ ಕಾಯ್ದೆಯಡಿ ಬರುತ್ತದೆ ಎಂದ ಅಪೆಕ್ಸ್ ಕೋರ್ಟ್

ಈಗ ಜೆಎನ್​ಯು ಕಾರ್ಯಕಾರಿ ಸಮಿತಿ  ಮಾಡಿರುವ ಹೊಸ ಪ್ರಸ್ತಾವದ ಪ್ರಕಾರ, ಡಬಲ್ ಸೀಟರ್ ಹಾಸ್ಟೆಲ್ ರೂಮಿನ ಶುಲ್ಕವನ್ನು 100 ರೂಪಾಯಿಗೆ ಇಳಿಕೆ ಮಾಡಲಾಗಿದೆ. 600ಕ್ಕೆ ಏರಿಕೆ ಮಾಡಲಾಗಿದ್ದ ಡಬಲ್ ಸೀಟರ್ ರೂಮನ್ನು 200 ರೂಗೆ ಇಳಿಸಲಾಗಿದೆ. ಇನ್ನು, ವರ್ಷಕ್ಕೆ ಮರುಪಾವತಿಯಾಗುವ ಮೆಸ್ ಸೆಕ್ಯೂರಿಟಿ ಶುಲ್ಕವನ್ನು 5,500 ರೂನಿಂದ 12,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಆದರೆ, ವಿದ್ಯಾರ್ಥಿಗಳ ಆಕ್ರೋಶಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಯುಟಿಲಿಟಿ ಚಾರ್ಜ್. ಹಿಂದೆ ಇಲ್ಲದ ಯುಟಿಲಿಟಿ ಶುಲ್ಕ ಅಥವಾ ಸವಲತ್ತು ಶುಲ್ಕವನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಈ ಶುಲ್ಕ 1,700 ರೂಪಾಯಿ ಇದೆ. ಜೆಎನ್​ಯುನ ಹೊಸ ಪ್ರಸ್ತಾವದಲ್ಲಿ ಈ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಶುಲ್ಕ ವಿಚಾರವೇ ವಾಸ್ತವವಾಗಿ ವಿದ್ಯಾರ್ಥಿ ಸಂಘಟನೆಯನ್ನು ಬೃಹತ್ ಪ್ರತಿಭಟನೆ ಎಡೆಗೆ ನೂಕಿದ್ದು. ಈಗ ಯುಟಿಲಿಟಿ ಚಾರ್ಜ್​ನಲ್ಲಿ ಯಾವುದೇ ಬದಲಾವಣೆ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ನಿಲ್ಲಿಸದಿರಲು ನಿರ್ಧರಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 13, 2019, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories