ಉಗ್ರರನ್ನು ಸಾಗಿಸಲು 12 ಲಕ್ಷ ಪಡೆಯಲಾಗಿತ್ತೇ? ಕಾಶ್ಮೀರ ಪೊಲೀಸ್ ಅಧಿಕಾರಿ ವಿಚಾರಣೆ ಮುಂದುವರಿಕೆ

ಭಯೋತ್ಪಾದಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ರಹಸ್ಯವಾಗಿ ಉಗ್ರ ಸಂಘಟನೆಗಳ ಒಳ ಹೊಕ್ಕುವುದು ಸಾಮಾನ್ಯ. ಆದರೆ, ದವಿಂದರ್ ಸಿಂಗ್ ಅವರ ವಿಚಾರ ಬೇರೆಯೇ ಇದೆ. ಅವರನ್ನು ಭಯೋತ್ಪಾದಕ ಎಂಬ ದೃಷ್ಟಿಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.

news18
Updated:January 13, 2020, 5:43 PM IST
ಉಗ್ರರನ್ನು ಸಾಗಿಸಲು 12 ಲಕ್ಷ ಪಡೆಯಲಾಗಿತ್ತೇ? ಕಾಶ್ಮೀರ ಪೊಲೀಸ್ ಅಧಿಕಾರಿ ವಿಚಾರಣೆ ಮುಂದುವರಿಕೆ
ದೇವಿಂದರ್​​ ಸಿಂಗ್
  • News18
  • Last Updated: January 13, 2020, 5:43 PM IST
  • Share this:
ನವದೆಹಲಿ(ಜ. 13): ಜಮ್ಮು ಮತ್ತು ಕಾಶ್ಮೀರದ ಡಿವೈಎಸ್​ಪಿ ದವಿಂದರ್ ಸಿಂಗ್ ಅವರು ಇಬ್ಬರು ಭಯೋತ್ಪಾದಕರನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುವಾಗ ಸಿಕ್ಕಿಬಿದ್ದಿರುವ ಪ್ರಕರಣ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ದೇಶದ ಭದ್ರತಾ ವ್ಯವಸ್ಥೆ ಬಗ್ಗೆ ಅನುಮಾನ ಸೃಷ್ಟಿಯಾಗುವಂತೆ ಮಾಡಿದೆ. ದವಿಂದರ್ ಸಿಂಗ್ ಅವರು ತಾನು ಇಬ್ಬರು ಉಗ್ರರನ್ನು ಶರಣಾಗತಿಗೆ ತರಲು ಕರೆದೊಯ್ಯುತ್ತಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದಾರಾದರೂ, ಹಿಂದಿನ ಕೆಲ ಪ್ರಕರಣಗಳಲ್ಲಿ ಅವರ ನಡೆಯ ಬಗ್ಗೆ ಪೊಲೀಸರಲ್ಲಿ ಇದೆ. ಈ ನಿಟ್ಟಿನಲ್ಲಿ ದವಿಂದರ್ ಸಿಂಗ್ ಅವರ ವಿಚಾರಣೆ ನಡೆಸಲಾಗುತ್ತಿದೆ.

ದವೀಂದರ್ ಸಿಂಗ್ ಅವರ ಜೊತೆ ಕಾರಿನಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಯದ್ ನಾವೀದ್ ಮುಷ್ತಾಕ್, ರಫಿ ರಾಥೆರ್ ಹಾಗೂ ವಕೀಲ ಇರ್ಫಾನ್ ಶಫಿ ಮೀರ್ ಅವರಿದ್ದರು. ಮುಷ್ತಾಕ್ ಮತ್ತು ರಫಿಯನ್ನು ಶರಣಾಗತಿಗೆಂದು ಪೊಲೀಸರಿಗೆ ಒಪ್ಪಿಸಲು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದೆ ಎಂದು ದವಿಂದರ್ ಸಿಂಗ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ಸೋನಿಯಾ ಕರೆದ ಸಿಎಎ ವಿರುದ್ಧದ ವಿರೋಧ ಪಕ್ಷಗಳ ಸಭೆಗೆ ಯುಪಿಎ ಮೈತ್ರಿ ಪಕ್ಷಗಳೇ ಗೈರು!

ಆದರೆ, ಮುಷ್ತಾಕ್ ಮತ್ತು ರಫಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿದಾಗ ಅವರು ಶರಣಾಗತಿಯ ಯಾವುದೇ ವಿಚಾರ ತಮಗೆ ಗೊತ್ತಿಲ್ಲ ಎಂದು ಹೇಳಿರುವುದು ಪೊಲೀಸರಲ್ಲಿ ಅನುಮಾನ ಹೆಚ್ಚಿಸಿದೆ. ಕುತೂಹಲದ ವಿಷಯವೆಂದರೆ, ಭಯೋತ್ಪಾದಕರನ್ನು ಶರಣಾಗತಿ ಮಾಡಿಸುವ ಅಧಿಕಾರ ದವಿಂದರ್ ಸಿಂಗ್ ಅವರಿಗೆ ಕೊಟ್ಟಿಲ್ಲ. ಅವರು ಯಾವುದೇ ಪೊಲೀಸ್ ಅಥವಾ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಎನ್ನಲಾಗಿದೆ.

ಪ್ರಾಥಮಿಕ ತನಿಖೆಯಿಂದ ಪೊಲೀಸರಿಗೆ ತಿಳಿದುಬಂದ ಮಾಹಿತಿ ಎಂದರೆ, ಉಗ್ರಗಾಮಿಗಳನ್ನು ಸಾಗಿಸಲು ದವಿಂದರ್ 12 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯ ಕಾರನ್ನು ಯಾರೂ ತಡೆದು ತಪಾಸನೆ ನಡೆಸುವುದಿಲ್ಲವಾದ್ದರಿಂದ ಅವರು ತಮ್ಮ ಕಾರಿನಲ್ಲೇ ಅವರನ್ನು ಸಾಗಿಸುತ್ತಿದ್ದರು. ಹಿಜ್ಬುಲ್ ಕಮಾಂಡರ್ ಆಗಿರುವ ನಾವೀದ್ ಮುಷ್ತಾಕ್ ಅವರು ಹಿಂದೆ ಪೊಲೀಸ್ ಇಲಾಖೆಯಲ್ಲೇ ಇದ್ದವರು. ಈಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 370ನೇ ವಿಧಿ ರದ್ದಾದ ಬಳಿಕ ಸೇಬು ಸಾಗಿಸುವ ಟ್ರಕ್ ಡ್ರೈವರ್​​ಗಳ ಹತ್ಯೆಯಲ್ಲಿ ಇವರ ಕೈವಾಡ ಇರುವ ಶಂಕೆ ಇದೆ.

ಇದನ್ನೂ ಓದಿ: ಇದು ಬೇಜವಾಬ್ದಾರಿ: ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದೆವೆಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕೇಂದ್ರ ಸಚಿವ ಸುಪ್ರಿಯೋ ಬೇಸರ

ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇರುವುದರಿಂದ ಡಿವೈಎಸ್​ಪಿಯ ನೆರವಿನಿಂದ ಅವರು ಜಮ್ಮುವಿನಲ್ಲಿನ ಅಡಗುದಾಣಕ್ಕೆ ಹೋಗಲು ಯತ್ನಿಸುತ್ತಿದ್ದುದು ತಿಳಿದುಬಂದಿದೆ. ಪೊಲೀಸರ ಪ್ರಕಾರ ದವಿಂದರ್ ಅವರು ಉಗ್ರರನ್ನು ಸಾಗಿಸಿದ್ದು ಇದೇ ಮೊದಲಲ್ಲ. ಹಿಂದೆ ಕನಿಷ್ಠ ಐದಾರು ಸಂದರ್ಭಗಳಲ್ಲಿ ಅವರು ಉಗ್ರರನ್ನು ಬನಿಹಾಲ್ ಹಾದಿಯಲ್ಲಿ ಜಮ್ಮುವಿಗೆ ಸಾಗಿಸಿದ್ದರು. ದವಿಂದರ್ ಸಿಂಗ್ ಅವರು ಈ ಉಗ್ರರನ್ನು ತಮ್ಮ ನಿವಾಸಕ್ಕೆ ಕರೆದೊಯ್ದು ಅಲ್ಲಿಂದ ತಮ್ಮ ಖಾಸಗಿ ವಾಹನದಲ್ಲಿ ಜಮ್ಮುವಿಗೆ ಕರೆದೊಯ್ಯುತ್ತಿದ್ದರೆನ್ನಲಾಗಿದೆ.ಇನ್ನು, ಮುಷ್ತಾಕ್ ಮತ್ತು ರಫಿ ಜೊತೆ ಇದ್ದ ಮೀರ್ ಎಂಬ ವಕೀಲರಿಗೆ ಪಾಕಿಸ್ತಾನದೊಂದಿಗೆ ನಂಟಿದೆ. ಈತ ಐದು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದು, ಅಲ್ಲಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು  ಹೇಳುತ್ತಿವೆ.

ಇದನ್ನೂ ಓದಿ: ಹಾನಿಗಾಗಿ 3 ಸಾವಿರ ಕೋಟಿ ಪ್ರಕರಣ ಸೇರಿ ರತನ್ ಟಾಟಾ ವಿರುದ್ಧದ ಎಲ್ಲ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆದ ನುಸ್ಲಿ ವಾಡಿಯಾ

2001ರ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ತನ್ನನ್ನು ದಾಳಿಗೆ ಪ್ರೇರೇಪಿಸಿದ್ದೇ ದವಿಂದರ್ ಸಿಂಗ್ ಎಂದು ಹೇಳಿ ಒಂದು ಲಿಖಿತ ಅಫಿಡವಿಟ್ ನೀಡಿದ್ದರು. ಹಾಗೆಯೇ, ಸೆಕೆಂಡ್ ಹ್ಯಾಂಡ್ ಬಿಳಿಯ ಅಂಬಾಸಡರ್ ಕಾರನ್ನೂ ಇದಕ್ಕಾಗಿ ತನಗೆ ಒದಗಿಸಿದ್ದರು ಎಂದು ತಿಳಿಸಿದ್ದರು. ಸಂಸತ್ ದಾಳಿಯಲ್ಲಿ ಇದೇ ಅಂಬಾಸಡರ್ ಕಾರು ಬಳಕೆಯಾಗಿದ್ದು ನಿಜವೇ.

ಭಯೋತ್ಪಾದಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ರಹಸ್ಯವಾಗಿ ಉಗ್ರ ಸಂಘಟನೆಗಳ ಒಳ ಹೊಕ್ಕುವುದು ಸಾಮಾನ್ಯ. ಆದರೆ, ದವಿಂದರ್ ಸಿಂಗ್ ಅವರ ವಿಚಾರ ಬೇರೆಯೇ ಇದೆ. ಇವರು ಉಗ್ರರಿಗೆ ನೇರವಾಗಿ ನೆರವು ಒದಗಿಸುತ್ತಿದ್ದರು. ಕಾಶ್ಮೀರಕ್ಕೆ ಬರುವ ಟ್ರಕ್ ಡ್ರೈವರ್​ಗಳನ್ನು ಬೆದರಿಸಿ ಹಣ ವಸೂಲಿಯ ಕಾರ್ಯ ಮಾಡುತ್ತಿದ್ದರೆನ್ನಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪೊಲೀಸರು ದವಿಂದರ್ ಸಿಂಗ್ ಅವರನ್ನು ಭಯೋತ್ಪಾದಕ ಎಂಬ ದೃಷ್ಟಿಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.

(ವರದಿ: ಅರುಣಿಮಾ, CNN - News18)

Published by: Vijayasarthy SN
First published: January 13, 2020, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading