ಯುಪಿಯಲ್ಲಿ ಏರುತ್ತಿದೆ ಚುನಾವಣಾ ಕಾವು; ಬ್ರಾಹ್ಮಣ ಮುಖಗಳಿಗೆ ಮಣೆ ಹಾಕಲು ಹೊರಟ ಬಿಜೆಪಿ

ಯುಪಿ ಸಿಎಂ ಯೋಗಿ

ಯುಪಿ ಸಿಎಂ ಯೋಗಿ

ಈ ವಾರಾಂತ್ಯದ ವೇಳೆಗೆ ಲಕ್ನೋದಲ್ಲಿ ಯೋಗಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಬಹುದು ಮತ್ತು ಕ್ಯಾಬಿನೆಟ್ ಪುನರ್ರಚನೆಯ ಅಂತಿಮ ಸ್ವರೂಪವನ್ನು ನಿರ್ಧರಿಸಬಹುದು ನಂತರ ಅದರ ಅನುಮೋದನೆಗಾಗಿ ನೂತನ ಪಟ್ಟಿಯನ್ನು ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

 • Share this:

   ಸುದೀರ್ಘ ಮೂರು ಗಂಟೆಗಳ ಕಾಲ ದೆಹಲಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವದ ಜೊತೆಗೆ ಭೇಟಿ ಮಾಡಿ ಮಾತನಾಡಿದರು. ಮುಂದಿನ ವರ್ಷ ಎದುರಾಗಲಿರುವ ಚುನಾವಣೆಗೆ ಸಾಕಷ್ಟು ಪುಷ್ಠಿ ನೀಡುವಂತೆ ರಾಜ್ಯ ಕ್ಯಾಬಿನೆಟ್ ಅನ್ನು ಪುನರ್​ರಚಿಸುವ ಬಗ್ಗೆ ಮತ್ತೊಮ್ಮೆ ಊಹಾಪೋಹಗಳಿಗೆ ಈ ಮ್ಯಾರಥಾನ್​ ಮಾತುಕತೆ ಕಾರಣವಾಗಿದೆ.

  ಸಿಎಂ ಗುರುವಾರ ಸಂಜೆ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಯೋಗಿ ಆದಿತ್ಯನಾಥ್​, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸಕ್ಕೆ ನೇರವಾಗಿ ಸಭೆಗೆ ತೆರಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಕ್ಷದ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಕೂಡ ಇದ್ದರು.


  ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಾಗೂ ಇತರ ವಿಷಯಗಳನ್ನು ಹೊತ್ತುಕೊಂಡು ಹಾಗೂ ಯೋಗಿ ಸಂಪುಟ ವಿಸ್ತರಣೆಯ ಉದ್ದೇಶಿತ ವಿಸ್ತೃತ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ. ಈ ಆಟವು ಆಗಸ್ಟ್ ಕೊನೆಯ ವಾರದಲ್ಲಿ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.


  ಯೋಗಿ ಸಂಪುಟಕ್ಕೆ ಸುಮಾರು ಆರರಿಂದ ಏಳು ಮಂತ್ರಿಗಳನ್ನು ನೂತನವಾಗಿ ಸೇರಿಸಬಹುದು ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿರುವ ಒಂದು ಪ್ರಮುಖ ಹೆಸರು ಕಾಂಗ್ರೆಸ್​ನಿಂದ ಬಿಜೆಪಿಗೆ ಹಾರಿರುವ ಜಿತಿನ್ ಪ್ರಸಾದ. ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಮಾಜಿ ಕೇಂದ್ರ ಸಚಿವರು ಒಂದೆರಡು ತಿಂಗಳ ಹಿಂದೆ ಬಿಜೆಪಿಗೆ ನೆಗೆದಿದ್ದರು ಮತ್ತು ಇವರನ್ನು ಉತ್ತರ ಪ್ರದೇಶ ರಾಜ್ಯದ ದೊಡ್ಡ ಬ್ರಾಹ್ಮಣ ನಾಯಕ ಎಂದು ಹೇಳಲಾಗುತ್ತದೆ, ಬ್ರಾಹ್ಮಣ ಸಮುದಾಯ ಬಿಜೆಪಿ ವಿರುದ್ದ ನಿಂತಿದೆ ಎನ್ನುವ ಗದ್ದಲದ ಅಸಮಾಧಾನದ ನಡುವೆ ಯುಪಿಯಲ್ಲಿ ಕೇಸರಿ ಪಕ್ಷವು ಈ ಮುಖ್ಯ ಬದಲಾವಣೆಗೆ ಕೈ ಹಾಕಿದೆ.


  ಬಿಜೆಪಿಗೆ ಅಡಚಣೆಯೆಂದರೆ ಪ್ರಸಾದ್​ ಇನ್ನೂ ವಿಧಾನ ಪರಿಷತ್ ಅಥವಾ ವಿಧಾನಸಭೆಯ ಸದಸ್ಯರಾಗಿಲ್ಲ, ಆದ ಕಾರಣ ಹೇಗೆ ಈ ಸಮಸ್ಯೆಯನ್ನು ಬಗೆಹರಿಸುವುದು ಎಂದು ಯೋಚಿಸುತ್ತಿದೆ.


  ಈ ವಾರಾಂತ್ಯದ ವೇಳೆಗೆ ಲಕ್ನೋದಲ್ಲಿ ಯೋಗಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಬಹುದು ಮತ್ತು ಕ್ಯಾಬಿನೆಟ್ ಪುನರ್ರಚನೆಯ ಅಂತಿಮ ಸ್ವರೂಪವನ್ನು ನಿರ್ಧರಿಸಬಹುದು ನಂತರ ಅದರ ಅನುಮೋದನೆಗಾಗಿ ನೂತನ ಪಟ್ಟಿಯನ್ನು ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


  ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ನಿರ್ಣಾಯಕ ಎನಿಸಿಕೊಂಡಿರುವ ಉತ್ತರಪ್ರದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತ್ತು ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ.


  ಕಳೆದ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಪದೇ, ಪದೇ ಭೇಟಿ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು, ಬಿಜೆಪಿ ಮುಂದಿನ ತಿಂಗಳ ಕೊನೆಯ ವಾರದಿಂದ ಚುನಾವಣಾ ಬೂತ್ ಮಟ್ಟದ ಕಾರ್ಯಕರ್ತರಿಗಾಗಿ ’’ಪನ್ನ ಪ್ರಮುಖ್​ ಸಮ್ಮೇಳನ’’ವನ್ನು ಕೈಗೊಳ್ಳಲಿದೆ.

  ಸೆಪ್ಟೆಂಬರ್‌ನಿಂದ, ಹಲವಾರು ಕಾರ್ಯಕ್ರಮಗಳಿಗಾಗಿ ಮತ್ತು ಚುನಾವಣೆಗೆ ಮುಂಚಿತವಾಗಿ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸಲು ಹಲವಾರು ನಾಯಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.


  ಪ್ರಧಾನ ಮೂಲಗಳು CNN-News18 ಗೆ ಹೇಳಿದ್ದು, ಅಕ್ಟೋಬರ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಸಂಸತ್ತಿಗೆ ಆಯ್ಕೆಯಾದ ರಾಜ್ಯಕ್ಕೆ ತಿಂಗಳಿಗೆ ಒಂದು ಬಾರಿಯಾದರೂ ಭೇಟಿ ನೀಡುವ ಯೋಜನೆ ರೂಪಿಸಿದ್ದಾರೆ, ಎಂದು.


  ಇದ್ನನೂ ಓದಿ: ಶಿವಕುಮಾರ್​ ಚಾಕು- ಚೂರಿ ಇಟ್ಕೋತಾನೆ ಎಂದು ರಾಜೀವ್​ ಗಾಂಧಿಗೆ ದೂರು ಕೊಟ್ಟಿದ್ದರು...!; ನೆನಪು ಮೆಲುಕು ಹಾಕಿದ ಡಿಕೆಶಿ

  2017 ರಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರವನ್ನು ಉರುಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಸರ್ಕಾರವನ್ನು ರಚಿಸಲು ಕೇಸರಿ ಪಕ್ಷವು ಸಂಪೂರ್ಣ ಬಹುಮತವನ್ನು ಪಡೆದಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: