ಮುಂಬೈ(ಜುಲೈ 15): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM 2020) ಹಲವು ಮಹತ್ವದ ಯೋಜನೆಗಳನ್ನ ಘೋಷಿಸಲಾಗಿದೆ. ಅದರಲ್ಲಿ ಜಿಯೋ ಟಿವಿ ಪ್ಲಸ್ ಕೂಡ ಒಂದು. ಇದರಲ್ಲಿ ವಿವಿಧ ಓಟಿಟಿ ಸೇವೆ ಪೂರೈಕೆದಾರರನ್ನ ಒಂದೇ ವೇದಿಕೆಯಲ್ಲಿ ಸಬ್ಸ್ಕ್ರೈಬ್ ಆಗುವ ಅವಕಾಶ ಕಲ್ಪಿಸಲಾಗಿದೆ. ಇವತ್ತಿನ ರಿಲಾಯನ್ಸ್ ಎಜಿಎಂ ಸಭೆಯಲ್ಲಿ ಆಕಾಶ್ ಅಂಬಾನಿ ಘೋಷಿಸಿದ್ಧಾರೆ.
ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್, ವೂಟ್, ಸೋನಿಲಿವ್, ಝೀ5, ಜಿಯೋ ಸಿನಿಮಾ, ಜಿಯೋ ಸಾವನ್, ಯೂಟ್ಯೂಬ್ ಸೇರಿದಂತೆ 12 ಪ್ರಮುಖ ಓಟಿಟಿ ಸೇವೆಗಳಿಂದ ನಿಮಗೆ ಬೇಕಾದ್ದನ್ನು ವೀಕ್ಷಿಸಲು ಸಾಧ್ಯವಿದೆ. ಇದರಲ್ಲಿ ಧ್ವನಿ ಆಧಾರಿತ ಶೋಧದ ತಂತ್ರಜ್ಞಾನವೂ ಅಡಕವಾಗಿದೆ. ಇದರಿಂದ ಧ್ವನಿ ಆದೇಶದ ಮೂಲಕವೇ ನಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜಿಯೋಟಿವಿ ಪ್ಲಸ್ ಸೇವೆಗೆ ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್ ಅಗತ್ಯ ಇದೆ.
ಇದನ್ನೂ ಓದಿ: RIL AGM 2020: ಸದ್ಯದಲ್ಲೇ ದೇಶದಲ್ಲಿ ಜಿಯೋ 5ಜಿ ಸೇವೆ ಆರಂಭ: ಬೇರೆ ದೇಶಗಳಿಗೂ 5ಜಿ ಸೊಲ್ಯೂಷನ್ ಸೇವೆ
ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್ನಲ್ಲಿ ಜಿಯೋ ಆ್ಯಪ್ ಸ್ಟೋರ್ ಮೂಲಕ ಶಿಕ್ಷಣ, ಮನರಂಜನೆ, ಆರೋಗ್ಯ, ಯೋಗ, ಗೇಮಿಂಗ್, ಧರ್ಮ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಬೇಕಾದ ಅಪ್ಲಿಕೇಶನ್ ಬಳಕೆ ಮಾಡಲು ಸಾಧ್ಯವಿದೆ. ಜಿಯೋ ಡೆಬಲಪರ್ಸ್ ಪ್ರೋಗ್ರಾಮ್ ಮೂಲಕ ಯಾವುದೇ ಆ್ಯಪ್ ಡೆವಲಪರ್ ತಮ್ಮ ಉತ್ಪನ್ನವನ್ನು ಜಿಯೋ ಪ್ಲಾಟ್ಫಾರ್ಮ್ನಲ್ಲಿ ಮಾನಿಟೈಸ್ ಮಾಡಬಹುದು ಎಂದು ಆನಂದ್ ಅಂಬಾನಿ ಹೇಳಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ