RIL AGM 2020 | JioTV Plus - ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್ ಸೇರಿ 12 ಓಟಿಟಿಗಳ ಸೇವೆ ಒಂದೇ ವೇದಿಕೆಯಲ್ಲಿ

ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್, ವೂಟ್, ಸೋನಿಲೈವ್, ಝೀ5, ಜಿಯೋ ಸಿನಿಮಾ, ಜಿಯೋ ಸಾವನ್, ಯೂಟ್ಯೂಬ್ ಸೇರಿದಂತೆ 12 ಪ್ರಮುಖ ಓಟಿಟಿ ಸೇವೆಗಳಿಂದ ನಿಮಗೆ ಬೇಕಾದ್ದನ್ನು ವೀಕ್ಷಿಸಲು ಸಾಧ್ಯವಿದೆ.

news18-kannada
Updated:July 16, 2020, 9:46 AM IST
RIL AGM 2020 | JioTV Plus - ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್ ಸೇರಿ 12 ಓಟಿಟಿಗಳ ಸೇವೆ ಒಂದೇ ವೇದಿಕೆಯಲ್ಲಿ
ಜಿಯೋ ಟಿವಿ ಪ್ಲಸ್
  • Share this:
ಮುಂಬೈ: ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM 2020) ಹಲವು ಮಹತ್ವದ ಯೋಜನೆಗಳನ್ನ ಘೋಷಿಸಲಾಗಿದೆ. ಅದರಲ್ಲಿ ಜಿಯೋ ಟಿವಿ ಪ್ಲಸ್ ಕೂಡ ಒಂದು. ಇದರಲ್ಲಿ ವಿವಿಧ ಓಟಿಟಿ ಸೇವೆ ಪೂರೈಕೆದಾರರನ್ನ ಒಂದೇ ವೇದಿಕೆಯಲ್ಲಿ ಸಬ್​ಸ್ಕ್ರೈಬ್ ಆಗುವ ಅವಕಾಶ ಕಲ್ಪಿಸಲಾಗಿದೆ. ನಿನ್ನೆಯ ರಿಲಾಯನ್ಸ್ ಎಜಿಎಂ ಸಭೆಯಲ್ಲಿ ಆಕಾಶ್ ಅಂಬಾನಿ ಘೋಷಿಸಿದ್ಧಾರೆ.

ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್, ವೂಟ್, ಸೋನಿಲಿವ್, ಝೀ5, ಜಿಯೋ ಸಿನಿಮಾ, ಜಿಯೋ ಸಾವನ್, ಯೂಟ್ಯೂಬ್ ಸೇರಿದಂತೆ 12 ಪ್ರಮುಖ ಓಟಿಟಿ ಸೇವೆಗಳಿಂದ ನಿಮಗೆ ಬೇಕಾದ್ದನ್ನು ವೀಕ್ಷಿಸಲು ಸಾಧ್ಯವಿದೆ. ಇದರಲ್ಲಿ ಧ್ವನಿ ಆಧಾರಿತ ಶೋಧದ ತಂತ್ರಜ್ಞಾನವೂ ಅಡಕವಾಗಿದೆ. ಇದರಿಂದ ಧ್ವನಿ ಆದೇಶದ ಮೂಲಕವೇ ನಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜಿಯೋಟಿವಿ ಪ್ಲಸ್ ಸೇವೆಗೆ ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್ ಅಗತ್ಯ ಇದೆ.

ಇದನ್ನೂ ಓದಿ: RIL AGM 2020: ಸದ್ಯದಲ್ಲೇ ದೇಶದಲ್ಲಿ ಜಿಯೋ 5ಜಿ ಸೇವೆ ಆರಂಭ: ಬೇರೆ ದೇಶಗಳಿಗೂ 5ಜಿ ಸೊಲ್ಯೂಷನ್​ ಸೇವೆ



ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್​ನಲ್ಲಿ ಜಿಯೋ ಆ್ಯಪ್ ಸ್ಟೋರ್ ಮೂಲಕ ಶಿಕ್ಷಣ, ಮನರಂಜನೆ, ಆರೋಗ್ಯ, ಯೋಗ, ಗೇಮಿಂಗ್, ಧರ್ಮ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಬೇಕಾದ ಅಪ್ಲಿಕೇಶನ್ ಬಳಕೆ ಮಾಡಲು ಸಾಧ್ಯವಿದೆ. ಜಿಯೋ ಡೆಬಲಪರ್ಸ್ ಪ್ರೋಗ್ರಾಮ್ ಮೂಲಕ ಯಾವುದೇ ಆ್ಯಪ್ ಡೆವಲಪರ್ ತಮ್ಮ ಉತ್ಪನ್ನವನ್ನು ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಮಾನಿಟೈಸ್ ಮಾಡಬಹುದು ಎಂದು ಆನಂದ್ ಅಂಬಾನಿ ಹೇಳಿದ್ಧಾರೆ.
Published by: Vijayasarthy SN
First published: July 16, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading