ನವದೆಹಲಿ(ಮೇ 04): ರಿಲಾಯನ್ಸ್ ಜಿಯೋದಲ್ಲಿ 5,655.75 ಹೂಡಿಕೆ ಮಾಡಿ ಶೇ. 1ರಷ್ಟು ಪಾಲು ಖರೀದಿಸಿದ ತಮ್ಮ ಸಂಸ್ಥೆಯ ನಡೆಯನ್ನು ಸಿಲ್ವರ್ ಲೇಕ್ ಸಿಇಒ ಎಗೋನ್ ಡರ್ಬಾನ್ ಸಮರ್ಥಿಸಿಕೊಂಡಿದ್ದಾರೆ. ದೊಡ್ಡ ಪ್ರಮಾಣದ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಸೇವೆಯನ್ನು ತರಬಲ್ಲ ತಾಂತ್ರಿಕ ಸಾಮರ್ಥ್ಯ ಜಿಯೋದವರಿಗೆ ಇದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸಬಲ್ಲವರಾಗಿದ್ಧಾರೆ ಎಂದು ಸಿಲ್ವರ್ ಲೇಕ್ನ ಮ್ಯಾನೇಜಿಂಗ್ ಪಾರ್ಟ್ನರ್ ಕೂಡ ಆಗಿರುವ ಡರ್ಬಾನ್ ಹೇಳಿದ್ಧಾರೆ.
ಜಿಯೋ ಮಾಲೀಕ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಮುಕೇಶ್ ಅಂಬಾನಿ ಅವರು ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ. “ತಂತ್ರಜ್ಞಾನ ಮತ್ತು ಹಣಕಾಸು ಕ್ಷೇತ್ರದಲ್ಲಿ ಬಹಳ ಗೌರವಾನ್ವಿತ ಸಂಸ್ಥೆಗಳಲ್ಲಿ ಸಿಲ್ವರ್ ಲೇಕ್ ಕೂಡ ಒಂದು. ಅವರ ಜಾಗತಿಕ ತಂತ್ರಜ್ಞಾನ ಕೊಂಡಿಗಳ ಸಹಾಯದಿಂದ ಭಾರತೀಯ ಡಿಜಿಟಲ್ ಕ್ಷೇತ್ರದ ಕ್ರಾಂತಿ ಸಾಧ್ಯವಾಗಬಹುದು ಎಂಬುದು ನಮ್ಮ ಅಭಿಪ್ರಾಯ” ಎಂದು ಅಂಬಾನಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Jio-Silver Lake: ಜಿಯೋದ ಮಹಾ ಯೋಜನೆಯ ಭಾಗವಾಗಿ ಫೇಸ್ಬುಕ್, ಸಿಲ್ವರ್ ಲೇಕ್ ಒಪ್ಪಂದ: ಜಲ್ ಇರಾನಿ ಅನಿಸಿಕೆ
ರಿಲಾಯನ್ಸ್ ಸಂಸ್ಥೆಯ ಈ ಒಪ್ಪಂದದ ಹಿಂದೆ ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಸಲಹೆ ಇತ್ತು. AZB ಆ್ಯಂಡ್ ಪಾರ್ಟ್ನರ್ಸ್ ಸಂಸ್ಥೆ ಕಾನೂನು ಸಲಹೆ ನೀಡಿತ್ತು.
“ಜಿಯೋ ಸಿಲ್ವರ್ ಲೇಕ್ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ನ ಹಣಕಾಸು ಬಲವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ” ಎಂದು ಮೂಡೀಸ್ ಹಣಕಾಸು ಸಲಹಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ವಿಕಾಸ್ ಹಲನ್ ತಿಳಿಸಿದ್ದಾರೆ.
ಇದನ್ನೂ ಓದಿ: Reliance Jio-Silver Lake Deal: ಅಮೆರಿಕದ ಸಿಲ್ವರ್ ಲೇಕ್ನಿಂದ Jioದಲ್ಲಿ Rs. 5,655.75 ಕೋಟಿ ಹೂಡಿಕೆ
ಫೇಸ್ಬುಕ್ ಮತ್ತು ಸಿಲ್ವರ್ ಲೇಕ್ ಹೂಡಿಕೆಗಳಿಂದ ರಿಲಾಯನ್ಸ್ ಜಿಯೋದ ಸಾಲದ ಪ್ರಮಾಣ ಸಾಕಷ್ಟು ಕಡಿಮೆಯಾಗಲಿದೆ. 21.4 ಬಿಲಿಯನ್ ಡಾಲರ್ ಇದ್ದ ಸಾಲದಲ್ಲಿ 13.6 ಬಿಲಿಯನ್ ಡಾಲರ್ ಹೊರೆ ತಗ್ಗುವ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ