ರಿಲಾಯನ್ಸ್ ಜಿಯೋ ಸಂಸ್ಥೆ ಸಹಯೋಗದಲ್ಲಿ ಪೊಂಗಲ್​​ ಹಬ್ಬ!

ನಮ್ಮ ಕಾರ್ಯಕ್ರಮಕ್ಕೆ ನೆರವು ನೀಡುವಂತೆ ಜಿಯೋ ಸಂಸ್ಥೆಗೆ ಕೇಳಿಕೊಂಡೆವು. ದೇಶದಲ್ಲಿ 4G ಇಂಟರ್ನೆಟ್​​ಗೆ ಹೆಸರು ವಾಸಿಯಾಗಿರುವ ಜಿಯೋ ಸಂಸ್ಥೆ ನಮಗೆ ಸಹಾರ ನೀಡಿದ್ದು, ಖುಷಿ ನೀಡಿತು. ನಮಗೆ ಯಾವುದೇ ರೀತಿ ತೊಂದರೆಯಾಗದಂತೆ, ಎಲ್ಲ ರೀತಿ ನೆರವನ್ನು ಜಿಯೋ ಸಂಸ್ಥೆ ನೀಡಿದೆ ಇದಕ್ಕೆ ನಾವು ಅಭಾರಿ ಎಂದು ರಂಗಸ್ವಾಮಿಯವರು ಸಂತಸ ವ್ಯಕ್ತಪಡಿಸಿದರು.

news18
Updated:January 11, 2019, 9:03 PM IST
ರಿಲಾಯನ್ಸ್ ಜಿಯೋ ಸಂಸ್ಥೆ ಸಹಯೋಗದಲ್ಲಿ ಪೊಂಗಲ್​​ ಹಬ್ಬ!
ರಿಲಿಯನ್ಸ್​​ ಜಿಯೋ
  • News18
  • Last Updated: January 11, 2019, 9:03 PM IST
  • Share this:
ನವದೆಹಲಿ(ಜ.11): ಮಕರ ಸಂಕ್ರಾಂತಿಗೆ ದೇಶಾದ್ಯಂತ ಭಾರೀ ತಯಾರಿ ನಡೆಯುತ್ತಿದೆ. ತಮ್ಮ ನಾಡಿನ ಹಬ್ಬವೆಂದೇ ಭಾವಿಸಿರುವ ತಮಿಳುನಾಡಿನಲ್ಲಿ ಅಂತೂ ಒಂದು ವಾರಕ್ಕೆ ಮುನ್ನವೇ ಪೊಂಗಲ್​​ ಹಬ್ಬದ ಸಂಭ್ರಮ ಮನೆ ಮಾಡಿದೆ. ಪೊಂಗಲ್​​ ಹಬ್ಬವನ್ನು ಇಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಕನ್ನಡಿಗರು ಹೇಗೆ ಮಕರ ಸಂಕ್ರಾಂತಿಯನ್ನು ಎಳ್ಳುಕಾಳು ಹಂಚಿ ಸಂತಸದಿಂದ ಆಚರಿಸುತ್ತಾರೋ, ಅದಕ್ಕಿಂತ ವಿಭಿನ್ನವಾಗಿ ತಮಿಳುನಾಡಿನಲ್ಲಿ ಕೃಷಿಕರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಇದೊಂದು ಫಸಲು ಕೊಯ್ಲಿನ ಹಬ್ಬವೆಂದೇ ಕರೆಯಲಾಗುತ್ತದೆ.

ಈಗಾಗಲೇ ಚೆನ್ನೈ, ಕೊಯಮತ್ತೂರು ಮುಂತಾದೆಡೆ ಒಂದು ವಾರಕ್ಕೆ ಮೊದಲೇ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಶಾಲಾ-ಕಾಲೇಜು, ಕಚೇರಿಗಳಲ್ಲಿ ಮುಂದಿನ ವಾರ ರಜೆ ಇರುವುದರಿಂದ ಈ ವಾರವೇ ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇಂದು ಕೂಡ ನಾಮಕ್ಕಲ್ ಜಿಲ್ಲೆಯ​​ ತಿರುಚೆಂಗೋಡ್​​ನಲ್ಲಿರುವ ಸ್ಥಳೀಯ ಕೆಎಸ್​ಆರ್ ಶಿಕ್ಷಣ ಸಂಸ್ಥೆ​ ಮತ್ತು ರಿಲಾಯನ್ಸ್​​ ಜಿಯೋ ಸಹಯೋಗದಲ್ಲಿ ಪೊಂಗಲ್​​ ಹಬ್ಬ ಆಚರಿಸಲಾಗಿದೆ.


ರಿಲಾಯನ್ಸ್ ಜಿಯೋ ಸಂಸ್ಥೆ ಸಹಯೋಗದೊಂದಿಗೆ ಕೆಎಸ್​ಆರ್​​ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಪೊಂಗಲ್​​​ ಹಬ್ಬದಲ್ಲಿ  1800ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ವಿಶೇಷವಾಗಿ ಬೆಳೆ ಕಟಾವಿನ ಸಂಭ್ರಮ ಸೂಚಿಸುವ ಈ ಪೊಂಗಲ್‌, ಒಗ್ಗೂಡಿ ಸಂಭ್ರಮದಿಂದ ಆಚರಿಸಿದೆವು. ಪರಸ್ಪರ ಉಡುಗೊರೆ ನೀಡುವುದು; ಸಮೃದ್ಧಿ ನೀಡಿದ ದೇವರಿಗೆ ಪೂಜೆ ಮಾಡುವುದು; ಪ್ರಾರ್ಥನೆ, ಹಾಡು, ಕುಣಿತ ಸೇರಿದಂತೆ ವಿಶೇಷವಾಗಿ ಬೇಯಿಸಿದ ಅಕ್ಕಿ, ಅನ್ನದ ಖಾದ್ಯ ತಿಂಡಿಗಳೂ ಮಾಡಲಾಗಿತ್ತು. ಈ ಪೊಂಗಲ್​​ನ ಸಂಭ್ರಮ ಕಾಲೇಜಿನಲ್ಲಿ ಮನೆ ಮಾಡಿತ್ತು ಎನ್ನುತ್ತಾರೆ ಕೆಎಸ್​​ಆರ್​​ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆಎಸ್​​ ರಂಗಸ್ವಾಮಿಯವರು.ನಾವು ಪೊಂಗಲ್​​ ಹಬ್ಬ ಮಾಡಲು ನಿರ್ಧರಿಸಿದೆವು. ಇದಕ್ಕಾಗಿ ಜಿಯೋ ಸಂಸ್ಥೆಯವರನ್ನು ಸಂಪರ್ಕಿಸಲಾಗಿತ್ತು. ನಮ್ಮ ಕಾರ್ಯಕ್ರಮಕ್ಕೆ ನೆರವು ನೀಡುವಂತೆ ಜಿಯೋ ಸಂಸ್ಥೆಗೆ ಕೇಳಿಕೊಂಡೆವು. ದೇಶದಲ್ಲಿ 4G ಇಂಟರ್ನೆಟ್​​ಗೆ ಹೆಸರು ವಾಸಿಯಾಗಿರುವ ಜಿಯೋ ಸಂಸ್ಥೆ ನಮಗೆ ಸಹಾರ ನೀಡಿದ್ದು, ಖುಷಿ ನೀಡಿತು. ನಮಗೆ ಯಾವುದೇ ರೀತಿ ತೊಂದರೆಯಾಗದಂತೆ, ಎಲ್ಲ ರೀತಿ ನೆರವನ್ನು ಜಿಯೋ ಸಂಸ್ಥೆ ನೀಡಿದೆ ಇದಕ್ಕೆ ನಾವು ಅಭಾರಿ ಎಂದು ರಂಗಸ್ವಾಮಿಯವರು ಸಂತಸ ವ್ಯಕ್ತಪಡಿಸಿದರು.
First published:January 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ