HOME » NEWS » National-international » JIO PLATFORMS GETS 11TH INVESTOR AS SAUDI ARABIAS PIF JOINS RUSH FOR RIL UNIT RH

Jio-PIF deal | ಜಿಯೋ ಪ್ಲಾಟ್​ಫಾರಂಗೆ 11ನೇ ಹೂಡಿಕೆ; 11,367 ಕೋಟಿಗೆ ಶೇ.2.32 ಷೇರು ಖರೀದಿಸಿದ ಸೌದಿ ಅರೇಬಿಯಾದ ಪಿಐಎಫ್

ಏಪ್ರಿಲ್ 22 ರಂದು ಫೇಸ್ಬುಕ್ ಶೇ 9.99 ರಷ್ಟು ಷೇರುಗಳನ್ನು 43,574 ಕೋಟಿ ರೂ.ಗೆ ಖರೀದಿಸಿತ್ತು. ಆ ನಂತರ ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್ (ಎರಡು ಬಾರಿ), ವಿಸ್ಟಾ ಇಕ್ವಿಟಿ ಪಾರ್ಟ್‌‌ನರ್ಸ್‌, ಕೆಕೆಆರ್, ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ಮತ್ತು ಎಡಿಐಎ ಗೆ ಜಿಯೋ ತನ್ನ ಷೇರನ್ನು ಮಾರಾಟ ಮಾಡಿತ್ತು.

news18-kannada
Updated:June 18, 2020, 5:10 PM IST
Jio-PIF deal | ಜಿಯೋ ಪ್ಲಾಟ್​ಫಾರಂಗೆ 11ನೇ ಹೂಡಿಕೆ; 11,367 ಕೋಟಿಗೆ ಶೇ.2.32 ಷೇರು ಖರೀದಿಸಿದ ಸೌದಿ ಅರೇಬಿಯಾದ ಪಿಐಎಫ್
ಜಿಯೋ
  • Share this:
ಮುಂಬೈ (ಜೂನ್ 18): ರಿಲಾಯನ್ಸ್ ಜಿಯೋದ ವಿವಿಧ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಮಾಡಲು ವಿಶ್ವದ ದೊಡ್ಡ ದೊಡ್ಡ ಹೂಡಿಕೆದಾರರು ಆಸಕ್ತಿ ತೋರುತ್ತಿರುವುದು ಮುಂದುವರಿದಿದೆ. ವಿಶ್ವದ ಅತಿದೊಡ್ಡ ಸಾವರಿನ್ ವೆಲ್ತ್  ಫಂಡ್​ ಸೌದಿ ಅರೇಬಿಯಾದ ಪಿಐಎಫ್​ ಕಂಪನಿ ಜಿಯೋದಲ್ಲಿ 11, 367 ಕೋಟಿ ಹೂಡಿಕೆ ಮಾಡಿ ಜಿಯೋ ಪ್ಲಾಟ್​ಫಾರಂನ ಶೇ.2.32ರಷ್ಟು ಪಾಲುದಾರಿಕೆ ಪಡೆದುಕೊಂಡಿದೆ.  ಕಳೆದ ಒಂಭತ್ತು ವಾರಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ (ಆರ್​ಐಎಲ್​) ಡಿಜಿಟಲ್​ ಘಟಕದಲ್ಲಿ ಹನ್ನೊಂದನೇ ಹೂಡಿಕೆ ಇದಾಗಿದೆ.

ತೈಲದಿಂದ ಚಿಲ್ಲರೆ ವ್ಯಾಪಾರ, ಟೆಲಿಕಾಂ ಘಕಟವಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈಗ ಜಿಯೋದಲ್ಲಿ ಶೇ.24.7 ಪಾಲನ್ನು ಕಳೆದುಕೊಂಡಿದೆ ಮತ್ತು ವಿಶ್ವದ ಉನ್ನತ ತಂತ್ರಜ್ಞಾನ ಕಂಪನಿಗಳಿಂದ 115,693.95 ಕೋಟಿ ರೂ. ಹೂಡಿಕೆಯಾಗಿದೆ. ಡಿಜಿಟಲ್‌ ಮಾಧ್ಯಮದಲ್ಲಿ ಚಲನಚಿತ್ರ ಸುದ್ದಿ ಮತ್ತು ಸಂಗೀತ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ಟೆಲಿಕಾಂ ಎಂಟರ್‌ಪ್ರೈಸಸ್‌ ಜಿಯೋ ಇನ್ಪೋಕಾಮ್‌ ಅನ್ನು ಮುನ್ನಡೆಸುತ್ತಿರುವ ಜಿಯೋ ಪ್ಲಾಟ್‌ಫಾರ್ಮ್‌ ಸತತವಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದೆ.

ಸೌದಿ ಅರೇಬಿಯಾದ ಪಿಐಎಫ್​ ಹೂಡಿಕೆಯೊಂದಿಗೆ ಒಟ್ಟಾರೆ ಸಂಪತ್ತು 400 ಬಿಲಿಯನ್ ಡಾಲರ್ ತಲುಪಿದೆ. ಜಿಯೋ ಪ್ಲಾಟ್​ಫಾರಂ ಈಕ್ವಿಟಿ ಷೇರು ಮೌಲ್ಯ 4.19 ಲಕ್ಷ ಕೋಟಿಯಾಗಿದೆ ಮತ್ತು ಖಾಸಗಿ ದೈತ್ಯ ಸಂಸ್ಥೆಗಳಾದ ಎಲ್​ ಕಾಟರ್ಟನ್​ ಮತ್ತು ಟಿಪಿಜಿ ಹೂಡಿಕೆಯೊಂದಿಗೆ ಉದ್ಯಮದ ಮೌಲ್ಯ 5.16 ಲಕ್ಷ ಕೋಟಿಯಾಗಿದೆ. ಅಮೆರಿಕ ಮೂಲದ L Catterton ಸಂಸ್ಥೆಯು ಗ್ರಾಹಕ ಕೇಂದ್ರಿತ ವಲಯದಲ್ಲಿ ವಿಶ್ವದ ಅತಿದೊಡ್ಡ ಪ್ರೈವೇಟ್ ಈಕ್ವಿಟಿ ಸಂಸ್ಥೆಯಾಗಿದೆ. ಇದು ಜಿಯೋದ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಶೇ 0.39 ಪಾಲನ್ನು ಖರೀದಿಸಿದೆ. ಸುಮಾರು 1,894.50 ಕೋಟಿ ರೂ ಹೂಡಿಕೆ ಮಾಡಿದೆ.

ಇದನ್ನು ಓದಿ: Jio-L Catterton: ರಿಲಾಯನ್ಸ್​ನಲ್ಲಿ ಹೂಡಿಕೆ ಮಾಡಿದ 10ನೇ ಕಂಪನಿ

ಜೂನ್ 7 ರಂದು ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ಎಡಿಐಎ) ಶೇ. 1.16 ಪಾಲನ್ನು 5,683.5 ಕೋಟಿ ರೂ.ಗೆ ಖರೀದಿಸಿದ ಬೆನ್ನಿಗೆ 4.91 ಲಕ್ಷ ಕೋಟಿ ರೂ. ಈಕ್ವಿಟಿ ಹೊಂದಿರುವ ಟಿಪಿಜಿ ಕಂಪೆನಿ ಜಿಯೋದಲ್ಲಿ ಷೇರು ಖರೀದಿ ಮಾಡಿತ್ತು. ಇದಕ್ಕೂ ಮುನ್ನವೇ ಏಪ್ರಿಲ್ 22 ರಂದು ಫೇಸ್ಬುಕ್ ಶೇ 9.99 ರಷ್ಟು ಷೇರುಗಳನ್ನು 43,574 ಕೋಟಿ ರೂ.ಗೆ ಖರೀದಿಸಿತ್ತು. ಆ ನಂತರ ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್ (ಎರಡು ಬಾರಿ), ವಿಸ್ಟಾ ಇಕ್ವಿಟಿ ಪಾರ್ಟ್‌‌ನರ್ಸ್‌, ಕೆಕೆಆರ್, ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ಮತ್ತು ಎಡಿಐಎ ಗೆ ಜಿಯೋ ತನ್ನ ಷೇರನ್ನು ಮಾರಾಟ ಮಾಡಿತ್ತು.
Youtube Video

ಜಿಯೋ ಪ್ಲಾಟ್‌ಫಾರ್ಮ್‌‌ಗಳು ಮುಂದಿನ ಪೀಳಿಗೆಯ ತಂತ್ರಜ್ಞಾನ ವೇದಿಕೆಯಾಗಿದ್ದು, ಭಾರತದಾದ್ಯಂತ ಉತ್ತಮ ಗುಣಮಟ್ಟದ ಮತ್ತು ಒಳ್ಳೆ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ಗಮನಹರಿಸಿದ್ದು, ಸುಮಾರು 400 ಮಿಲಿಯನ್ ಚಂದಾದಾರರನ್ನು ಹೊಂದಿದೆ.
First published: June 18, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories