ಮುಂಬೈ (ಜೂ 5): ಮುಕೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆಯ ಮೇಲೆ ವಿದೇಶಿ ನೇರ ಹೂಡಿಕೆ ಹೆಚ್ಚುತ್ತಲೇ ಇದೆ. ಪ್ರಥಮಬಾರಿಗೆ ಫೇಸ್ಬುಕ್ ಜಿಯೋದ ಷೇರನ್ನು ಖರೀದಿಸಿತ್ತು. ಇದಾದ ನಂತರ ಆರು ವಾರಗಳ ಅವಧಿಯಲ್ಲಿ ಜಿಯೋ ಮೇಲೆ ಆರನೇ ಹೂಡಿಕೆ ಆಗಿದೆ. ಅಬುಧಾಬಿ ಮೂಲದ ಸಾವರಿನ್ ಇನ್ವೆಸ್ಟರ್ ಮುಬದಲ ಸಂಸ್ಥೆ ಜಿಯೋದ ಶೇ.1.85 ಪಾಲನ್ನು 9,093 ರೂಪಾಯಿಗೆ ಖರೀದಿಸಿದೆ.
ಮೊದಲ ಬಾರಿಗೆ ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ ಜಿಯೋದ ಶೇ.9.99 ಪಾಲನ್ನು ಖರೀದಿಸಿತ್ತು. ಇದರ ಮೌಲ್ಯ 43,574 ಕೋಟಿ ರೂಪಾಯಿ ಆಗಿದೆ. ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1 ಪಾಲನ್ನು 5,655.75 ಕೋಟಿ ರೂ.ಗೆ ಖರೀದಿಸಿತ್ತು. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿತ್ತು. ನಂತರ ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್ ಅಟ್ಲಾಂಟಿಕ್ ಹಾಗೂ ಶೇ. 2.32 ಪಾಲನ್ನು 11,367 ಕೋಟಿ ರೂಪಾಯಿಗೆ ಕೆಕೆಆರ್ ಖರಿದಿಸಿತ್ತು.
ಕಳೆದ ಆರು ವಾರಗಳಲ್ಲಿ ಜಿಯೋ ಸಂಸ್ಥೆ ಶೇ.19 ಪಾಲಾನ್ನು 87,655 ಕೋಟಿ ರೂಪಾಯಿ ಮಾರಾಟ ಮಾಡುವ ಮೂಲಕ ಭಾರೀ ಹೂಡಿಕೆ ಪಡೆದಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಂಬಾನಿ, ಅಬುಧಾಬಿ ಸಂಸ್ಥೆ ಜಿಯೋ ಮೇಲೆ ಹೂಡಿಕೆ ಮಾಡುತ್ತಿರುವ ವಿಚಾರ ಖುಷಿ ತಂದಿದೆ. ಡಿಜಿಟಲ್ ಇಂಡಿಯ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲು ಈ ಹೂಡಿಕೆ ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: ಜಿಯೋ ಸಂಸ್ಥೆ ಮೇಲೆ 6,500 ಕೋಟಿ ರೂಪಾಯಿ ಹೂಡಿಕೆ ಮಾಡಿದ ಅಮೆರಿಕ ಮೂಲದ ಜನರಲ್ ಅಟ್ಲಾಂಟಿಕ್
ಈ ಒಪ್ಪಂದದ ಬಗ್ಗೆ ಮುಬದಲ ಸಂಸ್ಥೆ ಕೂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, ಭಾರತದಲ್ಲಿ ಜಿಯೋ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದೆ. ಭಾರತದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ