Intel Jio Deal: ಇಂಟೆಲ್​-ಜಿಯೋ ಒಪ್ಪಂದದ ಬೆನ್ನಲ್ಲೇ ಏರಿಕೆ ಕಂಡ ರಿಲಾಯನ್ಸ್​ ಷೇರು ಮೌಲ್ಯ

ಇಂಟೆಲ್​ನ ಇಂದಿನ ಹೂಡಿಕೆ ಸೇರಿದರೆ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು.

news18-kannada
Updated:July 3, 2020, 11:58 AM IST
Intel Jio Deal: ಇಂಟೆಲ್​-ಜಿಯೋ ಒಪ್ಪಂದದ ಬೆನ್ನಲ್ಲೇ ಏರಿಕೆ ಕಂಡ ರಿಲಾಯನ್ಸ್​ ಷೇರು ಮೌಲ್ಯ
ಮುಖೇಶ್​​ ಅಂಬಾನಿ
  • Share this:
ಮುಂಬೈ (ಜು.3): ರಿಲಾಯನ್ಸ್​ ಇಂಡಸ್ಟ್ರೀಸ್​ ಅಡಿಯಲ್ಲಿ ಬರುವ ಜಿಯೋ ಮೇಲೆ ಕೇವಲ 11 ವಾರಗಳಲ್ಲಿ 12ನೇ ಹೂಡಿಕೆ ಆಗಿದೆ. ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿ ಇಂಟೆಲ್​ ಜಿಯೋದ 0.39 ಪಾಲನ್ನು 1894 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ರಿಲಾಯನ್ಸ್​ ಷೇರಿನ ಮೌಲ್ಯ ಹೆಚ್ಚಿದೆ. 

ಇಂಟೆಲ್​ನ ಇಂದಿನ ಹೂಡಿಕೆ ಸೇರಿದರೆ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್​ಬುಕ್​, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು. ಇದಾದ ನಂತರ ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಲ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಹೂಡಿಕೆ ಮಾಡಿದೆ.

ಬಿಎಸ್​ಇಯಲ್ಲಿ ರಿಲಾಯನ್ಸ್​ ಷೇರಿನ ದರ ಶೇ. 0.88 ಏರಿಕೆ ಆಗಿದೆ. ಈ ಮೂಲಕ ಷೇರಿನ ಮೌಲ್ಯದಲ್ಲಿ ಭಾರೀ ಏರಿಕೆ ಕಂಡಂತಾಗಿದೆ.  ಸಂಸ್ಥೆಯೊಂದು ನಿರಂತರವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಪಡೆದಿದ್ದು ಇದೇ ಮೊದಲು ಎನ್ನಲಾಗಿದೆ.

ಈ ಒಪ್ಪಂದದ ಕುರಿತಾಗಿ ಮಾತನಾಡಿರುವ ಮುಖೇಶ್​ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂಟೆಲ್​ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ಬೆಳೆಸಲು ಇಂಟೆಲ್​ ಜೊತೆಗಿನ ಒಪ್ಪಂದ ಸಹಕಾರಿ ಆಗಲಿದೆ. 130 ಕೋಟಿ ಜನರಿಗೆ ಇದರ ಸಹಾಯ ಆಗಲಿದೆ ಎಂದು ಅವರು ಹೇಳಿದ್ದಾರೆ.
First published: July 3, 2020, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading