Jio Institute: ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಜಿಯೋ ಇನ್‌ಸ್ಟಿಟ್ಯೂಟ್

ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಸ್ನಾತಕೋತ್ತರ ಪದವಿಯ ಬ್ಯಾಚ್‌ನಲ್ಲಿ ವಿವಿಧ ಪ್ರದೇಶಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿದ್ದಾರೆ. 19 ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕಾ, ಭೂತಾನ್‌, ನೇಪಾಳ ಮತ್ತು ಘಾನಾ ದೇಶದ ವಿದ್ಯಾರ್ಥಿಗಳು ಮೊದಲ ಬ್ಯಾಚ್‌ನಲ್ಲಿದ್ದಾರೆ.

ನೀತಾ ಅಂಬಾನಿ

ನೀತಾ ಅಂಬಾನಿ

 • Share this:
  ಮುಂಬೈ, ಜುಲೈ 22, 2022: ಇತ್ತೀಚೆಗೆ ಜಿಯೋ ಇನ್‌ಸ್ಟಿಟ್ಯೂಟ್‌ (Jio Institute) ತನ್ನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳನ್ನು  ಸ್ವಾಗತಿಸಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅವರ ಪಾಲಕರು, ಜಿಯೋ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ, ರಿಲಯನ್ಸ್‌ (Reliance) ಕುಟುಂಬದ ಸದಸ್ಯರು ಹಾಗೂ ಉದ್ಯಮ ಮತ್ತು ಶಿಕ್ಷಣ ವಲಯದ ಮುಖ್ಯಸ್ಥರು ಭಾಗವಹಿಸಿದ್ದರು. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (artificial intelligence) ಮತ್ತು ಡಿಜಿಟಲ್‌ ಮೀಡಿಯಾ ಮತ್ತು ಮಾರ್ಕೆಟಿಂಗ್‌ (Digital Media And Marketing) ಸಂಹನಗಳಲ್ಲಿ ಒಟ್ಟು ಎರಡು ಸ್ನಾತಕೋತ್ತರ ಪದವಿಯನ್ನು ಜಿಯೋ ಇನ್‌ಸ್ಟಿಟ್ಯೂಟ್‌ ಆರಂಭಿಸುತ್ತಿದೆ. ತರಗತಿಗಳು 21 ಜುಲೈ 2022 ರಿಂದ ಆರಂಭವಾಗಿದೆ.

  ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಸ್ನಾತಕೋತ್ತರ ಪದವಿಯ ಬ್ಯಾಚ್‌ನಲ್ಲಿ ವಿವಿಧ ಪ್ರದೇಶಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿದ್ದಾರೆ. 19 ರಾಜ್ಯಗಳು ಮತ್ತು ದಕ್ಷಿಣ ಆಫ್ರಿಕಾ, ಭೂತಾನ್‌, ನೇಪಾಳ ಮತ್ತು ಘಾನಾ ದೇಶದ ವಿದ್ಯಾರ್ಥಿಗಳು ಮೊದಲ ಬ್ಯಾಚ್‌ನಲ್ಲಿದ್ದಾರೆ. ಇಂಜಿನಿಯರಿಂಗ್‌, ವಿಜ್ಞಾನ, ಕಲೆ, ವಾಣಿಜ್ಯ, ಸಮೂಹ ಮಾಧ್ಯಮ ಮತ್ತು ಮ್ಯಾನೇಜ್‌ಮೆಂಟ್‌ ಸ್ಟಡೀಸ್‌/ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದಿಂದ ಬಂದ ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ. ಜಾಹೀರಾತು, ಆಟೋಮೋಟಿವ್, ಬ್ಯಾಂಕಿಂಗ್‌, ನಿರ್ಮಾಣ, ಡಿಜಿಟಲ್‌ ಮಾಧ್ಯಮ, ಎಡ್‌ಟೆಕ್, ಫಿನ್‌ಟೆಕ್‌, ಆರೋಗ್ಯ ಸೇವೆ, ಮಾಹಿತಿ ತಂತ್ರಜ್ಞಾನ, ಲಾಜಿಸ್ಟಿಕ್ಸ್‌, ಸಣ್ಣ ಹಣಕಾಸು, ತೈಲ ಮತ್ತು ಅನಿಲ, ಫಾರ್ಮಾ, ಟೆಲಿಕಾಂ, ಸರ್ಕಾರ, ಎನ್‌ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಾಸರಿ ಸುಮಾರು 4 ವರ್ಷಗಳವರೆಗೆ ಕೆಲಸ ಮಾಡಿದ ಅನುಭವವನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ.

  ಎರಡೂ ಕೋರ್ಸ್‌ಗಳನ್ನು ಜಾಗತಿಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ಪರಿಣಿತರು ಮತ್ತು ಪ್ರೊಫೆಸರ್‌ಗಳು ಬೋಧಿಸಲಿದ್ದಾರೆ. ಪ್ರಾಥಮಿಕ ಬೋಧನೆಯ ಜೊತೆಗೆ ಅಗತ್ಯ ಜೀವನ ಕೌಶಲವನ್ನೂ ರೂಪಿಸುವಲ್ಲಿ ಜಿಯೋ ಇನ್‌ಸ್ಟಿಟ್ಯೂಟ್‌ ಗಮನ ಹರಿಸಿದೆ. ವಿದೇಶದಲ್ಲಿ ಅಧ್ಯಯನ ಅವಧಿಯನ್ನೂ ಜಿಯೋ ಇನ್‌ಸ್ಟಿಟ್ಯೂಟ್‌ ಯೋಜಿಸಿದ್ದು,  ಜನಪ್ರಿಯ ಜಾಗತಿಕ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಲಿದ್ದಾರೆ.\

  ಇದನ್ನೂ ಓದಿ: Maison de Couture ಬ್ರಾಂಡ್ ಅನ್ನು ಪ್ರಾರಂಭಿಸಲಿರುವ ರಿಲಯನ್ಸ್ ಬ್ರಾಂಡ್ಸ್ ಮತ್ತು ಇಟಲಿಯ ಮೈಸನ್ ವ್ಯಾಲೆಂಟಿನೋ

  ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್ನಲ್ಲಿ ಫ್ರಾಂಚೈಸಿ ಖರೀದಿ ಮಾಡಿದ ರಿಲಾಯನ್ಸ್ ಇಂಡಸ್ಟ್ರೀಸ್

  ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ. ಅಷ್ಟೇ ಅಲ್ಲ, ಯುಎಇ ಮೂಲದ ಅಂತಾರಾಷ್ಟ್ರೀಯ ಲೀಗ್‌ ಟಿ-20 ತಂಡವನ್ನು ಖರೀದಿಸುವ ಸನಿಹದಲ್ಲೂ ಇದು ಇದೆ.

  ಇದನ್ನೂ ಓದಿ: Ola Electric Sports Car: ಶೀಘ್ರವೇ ಭಾರತದಲ್ಲೂ ಬರಲಿದೆಯಂತೆ ಓಲಾ ಸಂಸ್ಥೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್

  ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‌ಬಾಲ್‌ ಲೀಗ್‌ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದೂ ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್‌ ಮಹತ್ವದ ಪಾತ್ರ ವಹಿಸುತ್ತದೆ. ಮುಂದುವರಿದು, ರಿಲಾಯನ್ಸ್ ಫೌಂಡೇಶನ್‌ ಸ್ಪೋರ್ಟ್ಸ್‌ ಎಂಬ ಆರ್‌ಐಎಲ್‌ನ ಸಿಎಸ್‌ಆರ್‌ ವಿಭಾಗವು ಭಾರತದ ಒಲಿಂಪಿಕ್‌ ಚಳವಳಿಯನ್ನು ಮುನ್ನಡೆಸುತ್ತಿದೆ. ದೇಶದ ವಿವಿಧೆಡೆಯ ಅಥ್ಲೀಟ್‌ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆಗಲಿ ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023 ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್‌ ಕಮಿಟಿ ಸೆಷನ್‌ ಅನ್ನು ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ.

  ರಿಲಾಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ ನೀತಾ ಅಂಬಾನಿ ಮಾತನಾಡಿ “ರಿಲಾಯನ್ಸ್‌ ಕುಟುಂಬಕ್ಕೆ ಹೊಸ ಟಿ20 ತಂಡವನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬೈ ಇಂಡಿಯನ್ಸ್‌ ಬ್ರ್ಯಾಂಡ್ ಅನ್ನು ದಕ್ಷಿಣ ಆಫ್ರಿಕಾಗೆ ತೆಗೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಭಾರತದಷ್ಟೇ ದಕ್ಷಿಣ ಆಪ್ರಿಕಾ ಕೂಡ ಕ್ರಿಕೆಟ್ಟನ್ನು ಪ್ರೀತಿಸುತ್ತದೆ! ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರೀಡಾ ಪರಿಸರವಿದೆ. ಈ ಸಹಭಾಗಿತ್ವ ಶಕ್ತಿ ಮತ್ತು ಸಹಭಾಗಿತ್ವವನ್ನು ನಾವು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.
  Published by:Harshith AS
  First published: