RIL AGM 2020: 2G ಮುಕ್ತ ಭಾರತಕ್ಕೆ ಪಣತೊಟ್ಟ ಜಿಯೋ-ಗೂಗಲ್

ಜಿಯೋ 30 ಕೋಟಿಗೂ ಅಧಿಕ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ನೀಡಲು ಬದ್ಧವಾಗಿದೆ. ಜಿಯೋ 4ಜಿ ಮೊಬೈಲ್​ ವಿಶ್ವದಲ್ಲಿ ಅತಿ ಕಡಿಮೆ ಸಿಗುತ್ತಿರುವ  4ಜಿ ​ಫೋನ್​ ಆಗಿದೆ ಎಂದರು ಅಂಬಾನಿ.

news18-kannada
Updated:July 16, 2020, 8:56 AM IST
RIL AGM 2020: 2G ಮುಕ್ತ ಭಾರತಕ್ಕೆ ಪಣತೊಟ್ಟ ಜಿಯೋ-ಗೂಗಲ್
ಮುಕೇಶ್ ಅಂಬಾನಿ
  • Share this:
ಮುಂಬೈ (ಜು.16): ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮುಖ್ಯಸ್ಥ ಮುಖೇಶ್ ಅಂಬಾನಿ ಒಡೆತನದ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಗೂಗಲ್ ಸಂಸ್ಥೆ 33,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಗೂಗಲ್ ಜೊತೆಗಿನ ಈ ಸಹಭಾಗಿತ್ವ 2ಜಿ ಮುಕ್ತ ಭಾರತ ಮಾಡಲು ಸಹಕಾರಿ ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಡೆದ ಆರ್​ಐಎಲ್​ ವಾರ್ಷಿಕ ಸಭೆಯಲ್ಲಿ ಅಂಬಾನಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ಈಗಿನ ಮಾರುಕಟ್ಟೆ ಬೆಲೆಯಲ್ಲೇ ನಾವು 4ಜಿ ಅಥವಾ 6ಜಿ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ,” ಎಂದು ಅಂಬಾನಿ ಹೇಳಿದ್ದಾರೆ.

“ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್​ಫೋನ್​ಗಳನ್ನು ನಿರ್ಮಾಣ ಮಾಡಬೇಕು ಎಂದಾದರೆ ನಮಗೆ ಅದೇ ಮೌಲ್ಯಯುತ ಸ್ಮಾರ್ಟ್​ಫೋನ್​ ಆಪರೇಟಿಂಗ್​ ಸಿಸ್ಟಮ್​ನ ಅಗತ್ಯವಿದೆ. ಗೂಗಲ್​ ಹಾಗೂ ಜಿಯೋ ಸಹಭಾಗಿತ್ವದಿಂದ ಭಾರತದಲ್ಲಿ ಈ ರೀತಿಯ ಆಪರೇಟಿಂಗ್​ ಸಿಸ್ಟಮ್​ಅನ್ನು ನಾವು ಡೆವಲಪ್​ ಮಾಡಬಹುದಾಗಿದೆ,” ಎಂದು ಅಂಬಾನಿ ಹೇಳಿದ್ದಾರೆ.

“ನಾವು ಈಗ 5ಜಿ ಅವಧಿಗೆ ಹತ್ತಿರವಾಗಿದ್ದೇವೆ. ಭಾರತದಲ್ಲಿ ಸುಮಾರು 35 ಕೋಟಿ ಜನರು 2ಜಿ ಮೊಬೈಲ್​ ಬಳಕೆ ಮಾಡುತ್ತಿದ್ದಾರೆ. ಅಂಥವರಿಗೆ ನಾವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ಸಿದ್ಧಪಡಿಸಿ ನೀಡಬೇಕಿದೆ. ಈ ಮೂಲಕ 2ಜಿ ಮುಕ್ತ ಭಾರತವನ್ನು ಮಾಡಬೇಕಿದೆ,” ಎಂದರು ಅಂಬಾನಿ.



“ಜಿಯೋ 30 ಕೋಟಿಗೂ ಅಧಿಕ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​ ನೀಡಲು ಬದ್ಧವಾಗಿದೆ. ಜಿಯೋ 4ಜಿ ಮೊಬೈಲ್​ ವಿಶ್ವದಲ್ಲಿ ಅತಿ ಕಡಿಮೆ ಸಿಗುತ್ತಿರುವ  4ಜಿ ​ಫೋನ್​ ಆಗಿದೆ,”  ಎಂದು ಸಂತಸ ಹೊರಹಾಕಿದರು.
Published by: Rajesh Duggumane
First published: July 16, 2020, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading