ಡಿಜಿಟಲ್​ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ ಜಿಯೋ

news18
Updated:September 6, 2018, 8:12 PM IST
ಡಿಜಿಟಲ್​ ಇಂಡಿಯಾಗೆ ಹೆದ್ದಾರಿ ರೂಪಿಸುತ್ತಿರುವ ಜಿಯೋ
news18
Updated: September 6, 2018, 8:12 PM IST
ನ್ಯೂಸ್​ 18 ಕನ್ನಡ

ಸಾಮಾಜ್ಯ ಜನರಿಗೆ ಅತಿ ದುಬಾರಿಯಾಗಿದ್ದ ಡೇಟಾವನ್ನು ಅಗ್ಗದ ದರದಲ್ಲಿ ನೀಡಿ, ಅನಿಮಿಯತ ಉಚಿತ ಕರೆಗಳ ಆಫರ್​ ನೀಡಿ ಡಿಜಿಟಲ್​ ಇಂಡಿಯಾದಲ್ಲಿ ಕ್ರಾಂತಿ ಉಂಟು ಮಾಡಿದ್ದು ಜಿಯೋ.

ಕಳೆದೆರಡು ವರ್ಷಗಳ ಹಿಂದೆ ಟೆಲಿಕಾಂ ಸಂಸ್ಥೆಯಲ್ಲಿ ಲಗ್ಗೆ ಇಟ್ಟ ಜಿಯೋ ಅತ್ಯನ್ನತ ತಂತ್ರಜ್ಞಾನವನ್ನು ಹೊಂದಿದೆ. 800 ಮೆಗಾಹರ್ಟ್ಸ್​​, 1800 ಮೆಗಾಹರ್ಟ್ಸ್​ ಹಾಗೂ 2300 ಮೆಗಾಹರ್ಟ್ಸ್​ ಬ್ಯಾಂಡ್​ಗಳ ಎಲ್​ಟಿಇ ತರಂಗಗುಚ್ಛ ಹಾಗೂ ಅತಿದೊಡ್ಡ ಫೈಬರ್​ ತಂತ್ರಜ್ಞಾನ ಹೊಂದಿದೆ.

ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಗಿನಿಂದ ಜಿಯೋ ಇದುವರೆಗೆ 215 ಮಿಲಿಯನ್​ಗಿಂತ ಹೆಚ್ಚು ಗ್ರಾಹಕರನ್ನು ತಲುಪಿದೆ. ಪ್ರತಿ ಜಿಬಿಗೆ ಕೇವಲ 15ರೂಗಿಂತ ಕಡಿಮೆ ದರದಲ್ಲಿ ಡೆಟಾ ಜನಸಾಮಾನ್ಯರಿಗೆ ಒದಗಿಸುತ್ತಿದೆ.

ಅಷ್ಟೇ ಅಲ್ಲದೇ,  ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

ಫೀಚರ್‌ಗಳನ್ನು ಅಡಕಗೊಳಿಸಿದ ಜಿಯೋ ಫೋನ್‌ಗಳ ಬಳಕೆದಾರರಿಗೆ ಹೊಸದೊಂದು ಯುಗ ಆರಂಭಿಸಿದೆ.  2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಪಡೆಯಲು ಕೇವಲ 501 ಠೇವಣಿ ಇಟ್ಟರೆ ಸಾಕು. ಇನ್ನು ಈ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯನ್​ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ಗ್ರಾಹಕರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳನ್ನು ನೀಡಬೇಕೆಂಬ ನಿರಂತರ ಹಂಬಲದೊಡನೆ, ಜಿಯೋ ತನ್ನ ಕೊಡುಗೆಗಳ ಮಾಲಿಕೆಯನ್ನು ಹೆಚ್ಚಿಸುತ್ತಲೇ ಬಂದಿದೆ. ಇರಾಸ್ ಮತ್ತು  ಆಲ್ಟ್ ಬಾಲಾಜಿಗಳೊಂದಿಗೆ ಒಪ್ಪಂದಗಳನ್ನು ಘೋಷಿಸಿಕೊಂಡಿದೆ. ಚಳಿಗಾಲದ ಒಲಿಂಪಿಕ್ಸ್ , ನಿಡಹಾಸ್ ಟ್ರೋಫಿ ಮತ್ತಿತರ ಕ್ರೀಡೆಗಳ ಡಿಜಿಟಲ್ ಹಕ್ಕುಗಳನ್ನೂ ಖರೀದಿಸಿದೆ.
Loading...

ಡಿಜಿಟಲ್ ಶಿಕ್ಷಣ ವಿಭಾಗದಲ್ಲೂ ತನ್ನ ಇರುವಿಕೆಯನ್ನು ಪ್ರಚುರಪಡಿಸಿರುವ ಜಿಯೋ ಪೋಷಕ ಸಂಸ್ಥೆಯು ಇಂಬೈಬ್ ಎಂಬ ವಿಶಿಷ್ಟ ಅಂಕಿಅಂಶಗಳ ಆಧಾರಿತ ಶೈಕ್ಷಣಿಕ ಸೇವಾವೇದಿಕೆಯಲ್ಲಿ ಅಧಿಕಪಾಲನ್ನು ಗಳಿಸಿಕೊಂಡಿದೆ.

ಈಗಾಗಲೇ ಭವಿಷ್ಯಕ್ಕೆ ಸೂಕ್ತವಾದ ಜಾಲಗಳನ್ನು ನಿರ್ಮಿಸಿರುವ ಜಿಯೋ ಮುಂಬರುವ ದಶಕಗಳಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ತನ್ನ ಗ್ರಾಹಕಸಮೂಹಕ್ಕೆ ಒದಗಿಸಲು ಮುಂದಾಗಿದೆ. ಡಿಜಿಟಲ್​ ಇಂಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಜಿಯೋ ಪರಿಮಿತಿಯಿಲ್ಲದ, ಸಾಹಸಶೀಲ ಬೆಳವಣಿಗೆಯ ಸಂಭ್ರಮದ ಭವಿಷ್ಯದತ್ತ ಹೊರಡಲು ಸನ್ನದ್ಧವಾಗಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ