ಮುಂಬೈ: ಜಿಯೋ 5ಜಿ ಸೇವೆಯನ್ನು ದೇಶಾದ್ಯಂತ ಶೀಘ್ರದಲ್ಲೇ ಆರಂಭಿಸಲಾಗುವುದು. ಮತ್ತು ಬೇರೆ ದೇಶಗಳಿಗೂ 5ಜಿ ಸೆಲ್ಯೂಷನ್ ಸೇವೆ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದರು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ 43ನೇ ವಾರ್ಷಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರು, ದೇಶಾದ್ಯಂತ ಜಿಯೋ 5ಜಿ ಸೇವೆ ಅಭಿವೃದ್ಧಿಪಡಿಸಲಾಗಿದೆ. ಅದು ಸಂಪೂರ್ಣವಾಗಿ ವಿಶ್ವ ದರ್ಜೆಯ ಸ್ವರೂಪದಲ್ಲಿ ಇರಲಿದೆ. 2021ರ ವೇಳೆಗೆ ಜಿಯೋ 5ಜಿ ಗ್ರಾಹಕರ ಬಳಕೆಗೆ ಸಿಗಲಿದೆ. ಮತ್ತು ಅದೇ ರೀತಿ ಇತರೆ ದೇಶಗಳಿಗೂ ಜಿಯೋ 5ಜಿ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : RIL AGM 2020: ‘ಕೋವಿಡ್-19 ಕ್ರೈಸಿಸ್ಗೆ ಮುನ್ನವೇ ಭಾರತ ಅತೀ ವೇಗದಿಂದ ಅಭಿವೃದ್ದಿ ಸಾಧಿಸುತ್ತದೆ‘ - ಮುಕೇಶ್ ಅಂಬಾನಿ
ಭಾರತ ಸರ್ಕಾರದ ಆತ್ಮ ನಿರ್ಭಾರ್ ಆಶಯದಂತೆ ಜಿಯೋ 5ಜಿ ಸೇವೆ ಮೂಡಿಬಂದಿದೆ. ಮತ್ತು ಅದರ ಎಲ್ಲ ಸೇವೆಗಳು ಸಂಪೂರ್ಣವಾಗಿ ದೇಶದಲ್ಲಿಯೇ ಮಾಡಲಾಗಿದೆ. ಭಾರತದಲ್ಲಿ ಮಾಡಿದ ಸೇವೆಗಳು ಸಂಪೂರ್ಣವಾಗಿ ಜಾಗತಿಕ ಮಟ್ಟಕ್ಕೆ ಹೋಗುವ ಸಮಯ ಬಂದಿದೆ ಎಂದು ಅಂಬಾನಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ