• Home
 • »
 • News
 • »
 • national-international
 • »
 • Crime News: ಚಾಕು ಇರಿದು 8ನೇ ತರಗತಿ ವಿದ್ಯಾರ್ಥಿನಿ ಕೊಲೆ: ಭಗ್ನ ಪ್ರೇಮಿಯ ಕೃತ್ಯದ ಶಂಕೆ

Crime News: ಚಾಕು ಇರಿದು 8ನೇ ತರಗತಿ ವಿದ್ಯಾರ್ಥಿನಿ ಕೊಲೆ: ಭಗ್ನ ಪ್ರೇಮಿಯ ಕೃತ್ಯದ ಶಂಕೆ

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)

Jilted lover stabs class 8 student: ಪ್ರಾಥಮಿಕ ತನಿಖೆಯ ಪ್ರಕಾರ, ಭಗ್ನ ಪ್ರೇಮವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಯುವಕನೊಬ್ಬ, ಸಂತ್ರಸ್ಥೆಯನ್ನು ಪ್ರೀತಿಸುತ್ತಿದ್ದ, ಆಕೆ ಪ್ರೀತಿಸಲು ಒಪ್ಪದಿದ್ದಾಗ ಕೊಲೆ ಮಾಡಲಾಗಿದೆ ಎಂದು ಪೊಲೀಸ್​ ಮೂಲಗಳು ಸಂಶಯ ವ್ಯಕ್ತಪಡಿಸಿವೆ

 • Share this:

  14 ವರ್ಷದ ವಿದ್ಯಾರ್ಥಿನಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune jilted lover kills class 8 student) ಮಂಗಳವಾರ ಸಂಜೆ ನಡೆದಿದೆ. ಫುಟ್​ಪಾತ್​ನಲ್ಲಿ ಹೋಗುತ್ತಿದ್ದ ಹುಡುಗಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮೂರು ಯುವಕರು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಭಗ್ನ ಪ್ರೇಮವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಯುವಕನೊಬ್ಬ, ಸಂತ್ರಸ್ಥೆಯನ್ನು ಪ್ರೀತಿಸುತ್ತಿದ್ದ, ಆಕೆ ಪ್ರೀತಿಸಲು ಒಪ್ಪದಿದ್ದಾಗ ಕೊಲೆ ಮಾಡಲಾಗಿದೆ ಎಂದು ಪೊಲೀಸ್​ ಮೂಲಗಳು ಸಂಶಯ ವ್ಯಕ್ತಪಡಿಸಿವೆ.


  ವಿದ್ಯಾರ್ಥಿನಿ ಸಂಜೆ ಕಬಡ್ಡಿ ಪ್ರಾಕ್ಟಿಸ್​​ಗೆಂದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ ವಿದ್ಯಾರ್ಥಿನಿಯ ದೂರದ ಸಂಬಂಧಿಯೊಬ್ಬ ಪ್ರೀತಿ ಮಾಡುತ್ತಿದ್ದ. ಆದರೆ ಆತನ ಪ್ರೀತಿಗೆ ಹುಡುಗಿಯ ಸಮ್ಮತಿ ಇರಲಿಲ್ಲ. ಇದೇ ಕಾರಣಕ್ಕೆ ಸಂಜೆ 5.45ರ ಸಮಯಕ್ಕೆ ಮೋಟರ್​ ಬೈಕಿನಲ್ಲಿ ಬಂದ ಮೂವರು ಚಾಕುವಿನಿಂದ ಹುಡುಗಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.


  ಹಲವು ಬಾರಿ ಇರಿತ, ಸ್ಥಳದಲ್ಲೇ ಸಾವು:
  ಚಾಕುವಿನಿಂದ ಹಲವು ಬಾರಿ ಇರಿದ (Multiple Knife Wounds) ಪರಿಣಾಮ ಹುಡುಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಪುಣೆ ಝೋನ್​ 5ರ ಉಪ ಪೊಲೀಸ್​ ಆಯುಕ್ತ ನಮ್ರತಾ ಪಾಟೀಲ್ (Pune Zone 5 DCP Namrata Patil)​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮೂವರು ಯುವಕರಿಗೆ ಹುಡುಕಾಟ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.


  ಪೊಲೀಸ್​ ಪ್ರಾಥಮಿಕ ತನಿಖೆಯ ಪ್ರಕಾರ ಯುವಕ ಸುಮಾರು 23 ವರ್ಷದವನು ಎನ್ನಲಾಗಿದೆ. ಯುವತಿಯ ಕುಟುಂಬದವರಿಂದ ಮತ್ತು ಸ್ನೇಹಿತರ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದ್ದು, ಅನುಮಾನಾಸ್ಪದವಾಗಿ ಕಂಡು ಬಂದ ಸಹಪಾಠಿಗಳು ಮತ್ತು ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


  ಭಗ್ನ ಪ್ರೇಮ ಮತ್ತು ಹಲ್ಲೆಗಳು (Jilted lovers and attacks on girls):
  ಭಗ್ನ ಪ್ರೇಮಿ ಪ್ರೀತಿಸಲು ಒಪ್ಪದ ಯುವತಿಯ ಮೇಲೆ ಹಲ್ಲೆ ಮಾಡುವುದು, ಆ್ಯಸಿಡ್​ ಸುರಿಯುವುದು ಮತ್ತಿತರ ಪ್ರಕರಣಗಳು ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತವೆ. ಇದೇ ರೀತಿಯ ಪ್ರಕರಣ ಪುಣೆಯಲ್ಲೂ ನಡೆದಿರಬಹುದು ಎಂದು ನಂಬಲಾಗಿದೆ. ಕುಟುಂಬದ ಮೂಲಗಳು ಮತ್ತು ಯುವತಿಯ ಸ್ನೇಹಿತರ ಪ್ರಕಾರ ಪ್ರೀತಿಸು ಎಂದು ಯುವಕನೊಬ್ಬ ಹುಡುಗಿಯನ್ನು ಪೀಡಿಸುತ್ತಿದ್ದ. ಇದಕ್ಕೆ ಒಪ್ಪಿಗೆ ಸಲ್ಲಿಸದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ.


  ಇದನ್ನೂ ಓದಿ: ಹಾವಿನಿಂದ ಹೆಂಡತಿಯನ್ನು ಕಚ್ಚಿಸಿ ಕೊಲೆ ಮಾಡಿದ್ದ ಗಂಡನಿಗೆ 17 ವರ್ಷ ಜೀವಾವಧಿ ಶಿಕ್ಷೆ


  ಭಗ್ನ ಪ್ರೇಮಿ ಪ್ರೀತಿಸಲು ಒಪ್ಪದ ಹುಡುಗಿಯ ಮೇಲೆ ಹಲ್ಲೆ ಮಾಡುವುದು ಇಂದು ನಿನ್ನೆಯದಲ್ಲ. ದಶಕಗಳಿಂದ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ಲೈಂಗಿಕ ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸದಲ್ಲೇ ನೀಡುವ ಅಗತ್ಯತೆಯಿದೆ ಎಂದು ಹಲವು ಮನೋವಿಜ್ಞಾನಿಗಳು ಹೇಳುತ್ತಲೇ ಇದ್ದಾರಾದರೂ ಇದರ ಅನುಷ್ಠಾನಕ್ಕೆ ಸರಕಾರ ಮುಂದಾಗುತ್ತಿಲ್ಲ. ಭಾರತದಂತ ದೇಶದಲ್ಲಿ ಪ್ರೀತಿ, ಲೈಂಗಿಕತೆ ಬಗ್ಗೆ ಇರುವ ಮೂಢನಂಬಿಕೆಗಳೇ ಕಾರಣ ಎಂದು ಸಾಕಷ್ಟು ವರದಿಗಳು ಹೇಳಿವೆ. ಅಮೆರಿಕಾ, ಇಂಗ್ಲೆಂಡ್​ ಸೇರಿದಂತೆ ಇನ್ನಿತರ ಮುಂದುವರೆದ ದೇಶಗಳಲ್ಲಿ ಲೈಂಗಿಕ ಶಿಕ್ಷಣ ವಿದ್ಯಾಭ್ಯಾಸದ ಭಾಗವಾಗಿದೆಯಾದರೂ ಅಲ್ಲಿಯೂ ಆಗಾಗ ಇಂತ ಪ್ರಕರಣಗಳು ಕೇಳಿ ಬರುತ್ತವೆ.


  ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಬಂಧನ


  ಆದರೆ ಭಾರತದಲ್ಲಿ ಈ ರೀತಿಯ ಪ್ರಕರಣಗಳು ಪದೇ ಪದೇ ಘಟಿಸುತ್ತವೆ ಮತ್ತು ಅದರ ಬಗ್ಗೆ ಆಗಾಗ ನಾವು ಕೇಳುತ್ತಲೇ ಇರುತ್ತೀವಿ. ಸಾಮೂಹಿಕ ಅತ್ಯಾಚಾರ, ಅತ್ಯಾಚಾರದಂತ ಹೇಯ ಕೃತ್ಯಗಳು ಪ್ರತಿ ಐದು ನಿಮಿಷಗಳಿಗೆ ಒಂದು ಘಟಿಸುತ್ತವೆ ಎಂದೂ ವರದಿಗಳು ಹೇಳಿವೆ. ಈ ರೀತಿಯ ಕೃತ್ಯಗಳನ್ನು ತಪ್ಪಿಸಲು ಮನೆಯಲ್ಲಿ ಹಾಗೂ ಶಾಲೆಯಲ್ಲಿ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂಬುದು ತಜ್ಞರ ಅಭಿಪ್ರಾಯ.

  Published by:Sharath Sharma Kalagaru
  First published: