Jill Biden: ಅಮೆರಿಕ ಅಧ್ಯಕ್ಷನ ಹೆಂಡತಿಯಾದ್ರೇನಂತೆ, ಕೆಲಸ ಮಾಡೋದು ತಪ್ಪಲ್ಲ..! ಡ್ಯೂಟಿಗೆ ವಾಪಸ್ಸಾದ ಬಿಡೆನ್ ಪತ್ನಿ

ದೇಶದ ಮೊದಲ ಮಹಿಳೆಯರು ಮನೆಯಿಂದ ಹೊರಗೆ ಕೆಲಸ ಮಾಡುವುದಿಲ್ಲ. ಅದರಲ್ಲೂ ಶ್ವೇತ ಭವನವೇ ಅವರ ಮನೆಯಾಗಿರುವಾಗ ಅದನ್ನು ಬಿಟ್ಟು ಬರಲು ಇಚ್ಛಿಸುವುದಿಲ್ಲ.

ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್

ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್

 • Share this:
  ವಾಷಿಂಗ್ಟನ್(ಸೆ.8): ಕೊರೋನಾ ಕಾರಣದಿಂದ ಹಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಹಂತ-ಹಂತವಾಗಿ ತೆರೆಯುತ್ತಿವೆ. ಅಮೆರಿಕಾದಲ್ಲಿ ಶಾಲಾ-ಕಾಲೇಜುಗಳು ಶುರುವಾಗಿದ್ದು, ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​​ನಿಂದ ಮುಕ್ತಿ ಸಿಕ್ಕಿದೆ. ಅಮೆರಿಕದ ಪ್ರಥಮ ಮಹಿಳೆ, ಶಿಕ್ಷಣ ತಜ್ಞೆ, ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್ ಮರಳಿ ಕಾಲೇಜಿಗ ಬಂದಿದ್ದು, ತಮ್ಮ ಕರ್ತವ್ಯ ಪ್ರಾರಂಭಿಸಿದ್ದಾರೆ. ಉತ್ತರ ವರ್ಜಿನಿಯಾ ಕಮ್ಯುನಿಟಿ ಕಾಲೇಜಿನಲ್ಲಿ ಮಂಗಳವಾರ ಜಿಲ್ ಬಿಡೆನ್​ ತಗಗತಿ ಪ್ರಾರಂಭಿಸಿದರು. ಅವರು ಆ ಕಾಲೇಜಿನಲ್ಲಿ 2009ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಶ್ವೇತ ಭವನವನ್ನು ತೊರೆದ ಹಾಗೂ ಪೂರ್ಣಾವಧಿ ಉದ್ಯೋಗ ಮಾಡುತ್ತಿರುವ ಮೊದಲ ಮಹಿಳೆ ಜಿಲ್ ಬಿಡೆನ್ ಆಗಿದ್ದಾರೆ. ಕೆಲವು ವಿಷಯಗಳಿವೆ, ಅವುಗಳನ್ನು ರಿಪ್ಲೇಸ್ ಮಾಡಲು ಸಾಧ್ಯವೇ ಆಗುವುದಿಲ್ಲ. ನಾನು ವಾಪಸ್ ತರಗತಿಗೆ ಹೋಗಲು ಕಾತರದಿಂದ ಕಾಯುತ್ತಿದ್ದೆ ಎಂದು ಜಿಲ್ ಬಿಡೆನ್ ಇತ್ತೀಚೆಗೆ ಗುಡ್​ ಹೌಸ್​ಕೀಪಿಂಗ್ ಮ್ಯಾಗಜೀನ್​ಗೆ ಹೇಳಿದ್ದರು.

  ಬಿಡೆನ್ ಅವರು ಸುಮಾರು 1 ವರ್ಷದ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ನೋಡಿ, ಬಹಳ ಖುಷಿ ಪಟ್ಟಿದ್ದಾರೆ. ಕೊರೋನಾ ಸಾಂಕ್ರಾಮಿಕ ಬಂದ ಬಳಿಕ ಬಹುತೇಕ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಆನ್​ಲೈನ್​ ಶಿಕ್ಷಣ ಜಾರಿಯಲ್ಲಿತ್ತು. ಈಗ ಮತ್ತೆ ಕಾಲೇಜುಗಳು ತೆರೆಯುತ್ತಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಖುಷಿ ದುಪ್ಪಟ್ಟಾಗಿದೆ. ಅಮೆರಿಕದಲ್ಲಿ ಕೋವಿಡ್ ದಿನಗಳು ಬಹಳ ಕೆಟ್ಟದಾಗಿದ್ದವು.

  ಇದನ್ನೂ ಓದಿ:Bus Fare Hike: ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್; ಖಾಸಗಿ ಬಸ್ ದರ ದುಪ್ಪಟ್ಟು ಏರಿಕೆ

  ಮೊದಲ ಮಹಿಳೆಯಾಗಿ ಕರ್ತವ್ಯ ನಿರ್ವಹಿಸುವುದು ದೊಡ್ಡ ಸವಾಲೇ ಸರಿ ಎಂದು ಬೋಸ್ಟನ್​ ಯೂನಿವರ್ಸಿಟಿಯ ಕಮ್ಯುನಿಕೇಷನ್ಸ್​ ಪ್ರೊಫೆಸರ್ ಟ್ಯಾಮಿ ವಿಜಿಲ್ ಅಭಿಪ್ರಾಯಪಟ್ಟಿದ್ದಾರೆ. ಇವರು ಈ ಹಿಂದಿನ ಅಮೆರಿಕದ ಮೊದಲ ಮಹಿಳೆಯರಾದ ಮೈಕೆಲ್ ಒಬಾಮಾ ಮತ್ತು ಮೆಲಾನಿಯಾ ಟ್ರಂಪ್ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.

  ದೇಶದ ಮೊದಲ ಮಹಿಳೆಯರು ಮನೆಯಿಂದ ಹೊರಗೆ ಕೆಲಸ ಮಾಡುವುದಿಲ್ಲ. ಅದರಲ್ಲೂ ಶ್ವೇತ ಭವನವೇ ಅವರ ಮನೆಯಾಗಿರುವಾಗ ಅದನ್ನು ಬಿಟ್ಟು ಬರಲು ಇಚ್ಛಿಸುವುದಿಲ್ಲ. ಅವರು ತಮ್ಮ ಗಂಡಂದಿರಿಗೆ ಬೆಂಬಲ ನೀಡುತ್ತಾ, ಮಕ್ಕಳನ್ನು ನೋಡಿಕೊಂಡು ಸಂಸಾರ ನಿಭಾಯಿಸುತ್ತಾರೆ.

  ಇನ್ನೂ ಕೆಲವು ಮಿದ ಮಹಿಳೆಯರು ತಮ್ಮ ಗಂಡಂದಿರಿಗೆ ವಿಶೇಷ ರಾಯಭಾರಿಗಳಾಗಿರುತ್ತಾರೆ. ಎಲಿನೋರ್ ರೂಸ್​ವೆಲ್ಟ್​ ಅವರು ತಮ್ಮ ಗಂಡ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತುಂಬಾ ಕಾರ್ಯೋನ್ಮುಖರಾಗಿದ್ದರು. ಅವರು ಇಡೀ ಅಮೆರಿಕವನ್ನು ಸುತ್ತಾಡಿ, ತನ್ನ ಗಂಡ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್​ ಡಿ. ರೂಸ್​ವೆಲ್ಟ್​​ಗೆ ವರದಿ ಒಪ್ಪಿಸುತ್ತಿದ್ದರು. ಅಷ್ಟೇ ಅಲ್ಲದೇ, ಅವರು ಬಡಜನರಿಗೆ, ಅಲ್ಪಸಂಖ್ಯಾತರು, ಸವಲತ್ತು ರಹಿತ ಜನರ ಪರವಾಗಿ ವಾದ ಮಾಡುತ್ತಿದ್ದರು. ಇದರೊಂದಿಗೆ ಶ್ವೇತ ಭವನದಿಂದಲೇ ರಾಷ್ಟ್ರೀಯವಾಗಿ ಸಿಂಡಿಕೇಟೆಡ್ ದಿನಪತ್ರಿಕೆಯೊಂದಕ್ಕೆ ಅಂಕಣ ಬರೆಯುತ್ತಿದ್ದರು.

  ಜಿಲ್ ಬಿಡೆನ್​ ಅವರಿಗೆ ವಯಸ್ಸು 70 ಆಗಿದ್ದರೂ ಬಹಳ ಉತ್ಸುಕತೆಯಿಂದ ಕೆಲಸ ಮಾಡುತ್ತಾರೆ. ಬೋಧನೆ ಅಂದರೆ ಕೇವಲ ನಾನು ಮಾಡುತ್ತೇನೆ, ಅದಲ್ಲ. ಇಂದು ನಾನು ಏನಾಗಿದ್ದೇನೆ ಅದು ಎಂದು ಜಿಲ್ ಬಿಡೆಲ್ ಹೇಳುತ್ತಾರೆ.

  ಜಿಲ್ ಬಿಡೆನ್ ಅವರು ಎಂದೂ ಸಹ ಅಮೆರಿಕ ಅಧ್ಯಕ್ಷನ ಪತ್ನಿಯಂತೆ ತರಗತಿಗಳಲ್ಲಿ ವರ್ತಿಸಿಲ್ಲ. ಕೇವಲ ಒಬ್ಬ ಸಾಮಾನ್ಯ ಶಿಕ್ಷಕಿಯಂತೆ ಮಕ್ಕಳಿಗೆ ಪಾಠ ಮಾಡುತ್ತಾರೆ. ಇದಕ್ಕೆ ಒಂದು ಉದಾಹರಣೆಯೆಂದರೆ, ವರ್ಜೀನಿಯಾ ಕಾಲೇಜಿನ ಎಷ್ಟೋ ಹಳೆಯ ವಿದ್ಯಾರ್ಥಿಗಳಿಗೆ ಜಿಲ್ ಬಿಡೆನ್ ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಮದುವೆಯಾಗಿದ್ದಾರೆ ಎಂಬ ವಿಷಯವೇ ಗೊತ್ತಿರಲಿಲ್ಲ.

  ಇದನ್ನೂ ಓದಿ:Russia NSA Visit- ಅಫ್ಘಾನಿಸ್ತಾನ ಬಿಕ್ಕಟ್ಟು: ಪ್ರಧಾನಿ ಮೋದಿ ಭೇಟಿ ಮಾಡಲಿರುವ ರಷ್ಯಾ ಭದ್ರತಾ ಸಲಹೆಗಾರ

  ತಮ್ಮ ರಾಜಕೀಯ ಜೀವನದ ಬಗ್ಗೆ ಅವರು ಯಾವತ್ತೂ ಸಹ ವಿದ್ಯಾರ್ಥಿಗಳ ಮುಂದೆ ಹೇಳಿಲ್ಲ. ಜಿಲ್ ಬಿಡೆನ್ ಅವರಿಗೆ ಭದ್ರತೆ ನೀಡಲು ರಸಹ್ಯ ಸೇವಾ ಸಿಬ್ಬಂದಿ ಕಾಲೇಜಿಗೆ ಆಗಮಿಸುತ್ತಿದ್ದರು. ಆದರೆ ಬಿಡೆನ್ ಅವರಿಗೆ ಸಾಮಾನ್ಯರಂತೆ ಬಟ್ಟೆ ಧರಿಸುವಂತೆ ಹೇಳಿ ಕಾಲೇಜಿಗೆ ಬರಬೇಡಿ ಎಂದಿದ್ದರು.

  ಜಿಲ್ ಬಿಡೆನ್ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಜೊತೆಗೆ ಶೈಕ್ಷಣಿಕ ನಾಯಕತ್ವದಲ್ಲಿ ಡಾಕ್ಟರೇಟ್​ನ್ನು ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷನ ಹೆಂಡತಿಯಾದರೂ ಸಹ ಯಾವುದೇ ಸೆಕ್ಯುರಿಟಿ ಬೇಡ ಎಂದಿದ್ದಾರೆ.
  Published by:Latha CG
  First published: