news18-kannada Updated:February 17, 2020, 7:15 AM IST
ಜೆವಿಎಂ ಮುಖ್ಯಸ್ಥ ಬಾಬುಲಾಲ್ ಮರಂಡಿ
ನವದೆಹಲಿ(ಫೆ.17): ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾ ಭಾರತೀಯ ಜನತಾ ಪಾರ್ಟಿ ಜೊತೆ ವಿಲೀನಕ್ಕೆ ಸಿದ್ಧವಾಗಿದೆ. ಇಂದು ಜೆವಿಎಂ ಬಿಜೆಪಿಯೊಂದಿಗೆ ವಿಲೀನವಾಗಲಿದೆ. ಈ ಹಿಂದೆ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಹೇಳಿದಂತೆಯೇ ಉಭಯ ಪಕ್ಷಗಳ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿಯೊಂದಿಗೆ ಜೆವಿಎಂ ವಿಲೀನವಾಗಲಿದೆ.
ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾರನ್ನು ಭೇಟಿ ಮಾಡಿದ ನಂತರವಷ್ಟೇ ಈ ಬೆಳವಣಿಗೆ ನಡೆದಿದೆ. ಜೆವಿಎಂ ಶಾಸಕರಾದ ಪ್ರದೀಪ್ ಯಾದವ್ ಮತ್ತು ಬಂಧು ಟಿರ್ಕೆ ಎಂಬುವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸದ್ಯ ಜೆವಿಎಂನ ಬಾಬುಲಾಲ್ ಈಗ ಏಕಾಂಗಿಯಾಗಿದ್ದು, ಬಿಜೆಪಿ ಜೊತೆಗೆ ವಿಲೀನಗೊಳಿಸುತ್ತಿದ್ದಾರೆ.
2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್,
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮೈತ್ರಿಯಾಗಿ ಸ್ಪರ್ಧಿಸಿದ್ದವು. ಈ ಮೈತ್ರಿಯೂ 81 ಕ್ಷೇತ್ರಗಳಲ್ಲಿ 50ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 3 ಕ್ಷೇತ್ರಗಳ ಮಾತ್ರ ಜೆವಿಎಂ ಪಾಲಾಗಿದ್ದವು. 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.
ಇದನ್ನೂ ಓದಿ: ‘ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ವಿಡಿಯೋ ನಮ್ಮಿಂದ ಬಿಡುಗಡೆಯಾಗಿಲ್ಲ‘: ಜಾಮಿಯಾ ವಿವಿ ಸ್ಪಷ್ಟನೆ
ಜಾರ್ಖಂಡ್ ವಿಕಾಸ್ ಮೋರ್ಚಾ 2019ರ ಡಿ. 24ರಂದು ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ನೀಡಿದ್ದ ಷರತ್ತುರಹಿತ ಬೆಂಬಲ ವಾಪಸ್ಸು ಪಡೆಯಿತು. ಇದಕ್ಕೆ ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗಾಗಿ ನಮ್ಮ ಪಕ್ಷ ನೀಡಿದ್ದ ಬೆಂಬಲವನ್ನು ಪರಾಮರ್ಶಿಸಿದೆ. ಅದರ ನಂತರವೇ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದೇವೆ ಎಂದು ಜೆವಿಎಂ ಮುಖ್ಯಸ್ಥ ಬಾಬುಲಾಲ್ ಹೇಳಿದ್ದರು.
First published:
February 17, 2020, 7:15 AM IST